ಅಂಗನವಾಡಿ ನೌಕರರಿಗೆ ಈ ಬಜೆಟ್ ನಲ್ಲಿ ನ್ಯಾಯ ಒದಗಿಸಿಲ್ಲ – ಎಸ್ ವರಲಕ್ಷ್ಮಿ

ಬೆಂಗಳೂರು : ವಿದಾನಸಭಾ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಂಗನವಾಡಿ ನೌಕರರಿಗೆ 4000 ಆಶ್ವಾಸನೆ ಕೊಟ್ಟಿತ್ತು. ಆದರೆ ಅಂಗನವಾಡಿ ನೌಕರರಿಗೆ ಈ ಬಜೆಟ್ ನಲ್ಲಿಯೂ ನ್ಯಾಯ ಒದಗಿಸಿಲ್ಲ ಎಂದು CITU ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಕಿಡಿಕಾರಿದ್ದಾರೆ.

ಇದನ್ನು ಓದಿ :-Karnataka State Budget 2025 : ಬೆಂಗಳೂರು ವಿವಿಗೆ ಪ್ರಧಾನಿ ಮನಮೋಹನ್ ಸಿಂಗ್ ಎಂದು ಮರುನಾಮಕರಣ

ಚುನಾವಣೆ ಬಳಿಕ ಎರಡು ಬಜೆಟ್ ಮಂಡನೆ ಮುಗಿದಿದೆ. ಕನಿಷ್ಠ ಎರಡು ಸಾವಿರ ನಿರೀಕ್ಷೆ ಇತ್ತು ಆದರೆ ಮಾನ್ಯ ಸಿದ್ದರಾಮಯ್ಯರವರು ನಮ್ಮನ್ನು ಪರಿಗಣಿಸಲಿಲ್ಲ. ಇದು ತುಂಬಾ ನೋವಿನ ವಿಷಯ. ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಮಾಂಟೆಸ್ಸರಿ ಎಂದು ಘೋಷಿಸಿ, ಎಲ್ಲಾ ಕೇಂದ್ರಗಳಲ್ಲಿ LKG–UKG ಯನ್ನು ಪ್ರಾರಂಭಿಸಬೇಕು. ಬಹುಶಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಜೆಟ್ ಗೃಹ ಲಕ್ಷ್ಮಿ ಹಣ ಸೇರಿದೆ ಎಂದು ಕಾಣುತ್ತದೆ. ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಇಲಾಖೆಗೆ ಮತ್ತಷ್ಟು ಅನುದಾನ ಅಗತ್ಯತೆ ಇತ್ತು. ಕೇಂದ್ರ ಸರ್ಕಾರ ಅಂಗನವಾಡಿಗಳಿಗೆ ಕೊಡುವ ಬಜೆಟ್ ನ್ನು ಪಾಲನ್ನು ಹೆಚ್ಚಿಸದೇ ಇರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡುವ ಬದಲು ರದ್ದು ಮಾಡಬೇಕು, ಕನಿಷ್ಠ ವೇತನ 36 ಸಾವಿರ ನೀಡಬೇಕು, ಸಂಘಟಿತ, ಅಸಂಘಟಿತ ಹಾಗೂ ಸ್ಕೀಮ್‌ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶ್ರಮಜೀವಿಗಳು ಸಿಐಟಿಯು ನೇತೃತ್ವದಲ್ಲಿ ಮಾರ್ಚ್‌ 03 ರಿಂದ ಕಾರ್ಮಕರು ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳನ್ನು ಈಡೇರಿಸುವ ಬದಲು ಮೂಗುಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *