ಬೆಂಗಳೂರು : ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೌರವಧನ ನೀಡುತ್ತಿಲ್ಲ ಎಂದು ಅಂಗನವಾಡಿ ಸಿಬ್ಬಂದಿ ರಾಜ್ಯ ಮತ್ತು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತ ಪಡೆಸಿದ್ದಾರೆ.
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಬಂದಿರದ ಕಾರಣ ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೌರವಧನ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ನಮಗೆ ತಿಂಗಳಿಗೆ ನೀಡುವ ಗೌರವಧನದಿಂದಲೇ ನಮ್ಮ ಜೀವನ ನಡೆಸಬೇಕು. ಆದರೆ, ಈ ಸರ್ಕಾರ ಬಂದ ಮೇಲೆ ನಮಗೆ ಪ್ರತಿ ತಿಂಗಳು ಸರಿಯಾಗಿ ಗೌರವಧನ ನೀಡುತ್ತಿಲ್ಲ. ಎರಡು, ಮೂರು ತಿಂಗಳಿಗೊಮ್ಮೆ ನೀಡುತ್ತಿದ್ದಾರೆ. ಕೇಳಿದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಂತೆ. ಇನ್ನು ಜೂನ್, ಜುಲೈ, ಆಗಸ್ಟ್ ತಿಂಗಳ ಸಂಬಳ ಬರಬೇಕಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿ : ಈರುಳ್ಳಿ ಉತ್ಪಾಧನೆದಲ್ಲಿ ಭಾರೀ ಕುಸಿತ; ಬೆಲೆ ದುಬಾರಿ
ಈ ಕುರಿತು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ,ಜನಶಕ್ತಿ ಮೀಡಿಯ ಜೊತೆ ಮಾತನಾಡಿದ್ದು, ಅಂಗನವಾಡಿ ಬಾಡಿಗೆ ಕಟ್ಟಡದ ಬಾಡಿಗೆ, ಮಕ್ಕಳಿಗೆ ಮೊಟ್ಟೆ, ತರಕಾರಿ ಖರೀದಿಗೂ ಕೂಡ ಹಣ ಕೊಡುತ್ತಿಲ್ಲ. ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆಯರೇ ಹಣಕೊಟ್ಟು ಖರೀದಿ ಮಾಡಿಕೊಂಡು ಬಂದು ಮಾಡಬೇಕು. ಇವರ ಬಳಿ ಹಣ ಇಲ್ಲ ಅಂದರೂ ಸಾಲ ಮಾಡಿ ತಂದು ಅಂಗನವಾಡಿಗಳನ್ನು ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 40/60 ಅನುಪಾತದಲ್ಲಿ ಅನುದಾನ ಬರುತ್ತದೆ, ಇವರ ವೇತನ ವಿಳಂಬಕ್ಕೆ ಯಾರು ಹೊಣೆ ಎಂಬುದನ್ನು ಅಧಿಕಾರಿಗಳೆ ಉತ್ತರಿಸಬೇಕಿದೆ.
ಇದನ್ನು ನೋಡಿ : ಏನಿದು ಏಕೀಕೃತ ಪಿಂಚಣಿ? ಹಳೆ ಪಿಂಚಣಿ ಯೋಜನೆ ಜಾರಿಯಾಗಿಲಿ ಎನ್ನುತ್ತಿರುವ ಸರ್ಕಾರಿ ನೌಕರರು Janashakthi Media