ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿಯಲ್ಲಿ ಅಂಗನವಾಡಿ ಮೇಲ್ಚಾವಣಿ ಕುಸಿದು ಬಿದ್ದು 7 ಮಕ್ಕಳು ಗಾಯಗೊಂಡಿದ್ದಾರೆ.
ಅಂಗನವಾಡಿ ಮೇಲ್ಚಾವಣಿ ಕುಸಿದು ಶಾಲೆಯಲ್ಲಿದ್ದಂತಹ 7 ಮಕ್ಕಳ ಪೈಕಿ 4 ಮಕ್ಕಳಿಗೆ ಗಾಯವಾಗಿದ್ದು ಅದರಲ್ಲಿ ಒರ್ವ ಮಗುವಿಗೆ ತೀವವಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಇದನ್ನೂ ಓದಿ : ರೈತ ನಾಯಕ, KPRS ರಾಜ್ಯಾಧ್ಯಕ್ಷ ಕಾಂ. ಜಿಸಿ ಬಯ್ಯಾರೆಡ್ಡಿ ನಿಧನ -KPRS ಶ್ರದ್ಧಾಂಜಲಿ
ಮಕ್ಕಳ ತಲೆ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಸದ್ಯಕ್ಕೆ ಮಕ್ಕಳನ್ನು ಬಂಗಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೆಂದು ದಾಖಲಿಸಲಾಗಿದೆ.
ಗಾಯಗೊಂಡ 7 ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಈ ವೇಳೆ ಘಟನೆ ಸ್ಥಳದಲ್ಲಿ ನಾರಾಯಣಸ್ವಾಮಿ ಭೇಟಿ ನೀಡಿ ಅಲ್ಲದ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ನೋಡಿ : ಅಕ್ಷರದವ್ವ ಸಾವಿತ್ರಿಬಾಯಿ ಫುಲೆ | ಮಂಜುಳಾ ಹುಲಿಕುಂಟೆ Janashakthi Media