ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಬಜೆಟ್ ನ್ಯಾಯ ಒದಗಿಸಿಲ್ಲ – ವರಲಕ್ಷ್ಮೀ

ಬೆಂಗಳೂರು : ಯೋಜನಾ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಬಜೆಟ್ ನ್ಯಾಯ ಒದಗಿಸಿಲ್ಲ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಆರೋಪಿಸಿದ್ದಾರೆ.

ಅಂಗನವಾಡಿ ಬಿಸಿಯೂಟ ನೌಕರರ ಹಲವು ಧೀರೋದಾತ್ತ ಹೋರಾಟಗಳಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಮಾತುಕತೆಯ ವೇಳೆ ತಿಳಿಸಲಾಗಿತ್ತು ಆದರೆ ಈ ಬಜೆಟ್ ನಲ್ಲಿ ಸೇರಿಲ್ಲ, ಅಂಗನವಾಡಿ ನೌಕರರಿಗೆ ಕೊಟ್ಟ ಗ್ರಾಜ್ಯುಟಿ 2011ರಿಂದ ನಿವೃತ್ತಿ ಯಾದ ಸುಮಾರು 35ಸಾವಿರ ಜನರಿಗೆ ಅನ್ವಯಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

3325 ಮಿನಿ ಅಂಗನವಾಡಿ ಕೇಂದ್ರ ಗಳಿಗೆ ಸಹಾಯಕಿಯರನ್ನು ನೇಮಕದ ಕುರಿತ ಪ್ರಸ್ತಾಪವೇ ಇಲ್ಲ, ಇದರಿಂದಾಗಿ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಫಲಾನುಭವಿಗಳಿಗೆ ಸಂಪೂರ್ಣ ನ್ಯಾಯ ಒದಗಿಸಿಲ್ಲ. ಅಂಗನವಾಡಿ ಫಲಾನುಭವಿಗಳಿಗೆ ಸಂಪೂರ್ಣ ಗುಣಮಟ್ಟದ ಪೌಷ್ಟಿಕ ಆಹಾರ ಕೊಡವ ಬಗ್ಗೆ ಬಜೆಟ್ ನಲ್ಲಿ ಖಾತ್ರಿ ಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಯೂಟ ನೌಕರರು ಈಗಾಗಲೇ 6000 ಬಿಸಿಯೂಟ ನೌಕರರನ್ನು 60ವರ್ಷ ವಯಸ್ಸಾಗಿದೆ ಎಂಬ ನೆಪವೊಡ್ಡಿ ಕೆಲಸದಿಂದ ತಗೆಯಲಾಗಿದೆ. ಜೂನ್ 2023ಕ್ಕೆ ಮತ್ತೆ 3000ಜನರನ್ನು ತಗೆಯಲಾಗುತ್ತದೆ. ಇವರಿಗೆ ಇಡಗಂಟು ಕೊಡವು ಬಗ್ಗೆ ಪ್ರಸ್ತಾಪ ಮಾಡದೇ ಕೇವಲ 1000ರೂ ಗಳನ್ನು ಹೆಚ್ಚು ಮಾಡಿಲಾಗಿದೆ. ಈ ಬಜೆಟ್ ನಿಂದ ಹೆಚ್ಚೇನು ನ್ಯಾಯ ಸಿಕ್ಕಿಲ್ಲ ಎಂದು ವರಲಕ್ಷ್ಮೀ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *