ಕೋಲಾರ:ಕೋವಿಡ್ 19ಗೆ ಸಂಬಂಧಿಸಿದಂತೆ ಲಾಕ್ಡೌನ್ ತೆರವುಗೊಳಿಸಿದ್ದರು ನಿಯಮಗಳನ್ನು ಉಲ್ಲಂಘಿಸದೇ ಪಾಲನೆ ಮಾಡುವ ಮೂಲಕ ಕೊರೊನಾವನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ತಿಳಿಸಿದರು.
ತಾಲೂಕಿನ ವೇಮಗಲ್ ನ ಬಯಲು ರಂಗಮಂದಿರದಲ್ಲಿ ಸಮಾಜಸೇವಕ ಹಾಗೂ ಉದ್ಯಮಿ ಚಂದನ್ ಗೌಡ ಆಶಾ,ಅಂಗನವಾಡಿ ಕಾರ್ಯಕರ್ತೆರಿಗೆ ಹಾಗೂ ಅಂಗವಿಕಲರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು ಕೊರೊನಾ ಬಂದಾಗಿನಿಂದ ಜನರಿಗೆ ಅರಿವು ಮೂಡಿಸುವ ಜೊತೆಗೆ ರೋಗ ಹರಡದಂತೆ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತರು ಜಿಲ್ಲೆಯಲ್ಲಿ ಅಮೋಘವಾಗಿ ಕಾರ್ಯನಿವಾಹಿಸಿದ್ದಾರೆ ಎಂದರು
ಕೊರೊನಾ ಹೋಗಲಾಡಿಸಲು ಕನಿಷ್ಠ ಒಂದು ಎರಡು ವರ್ಷ ಹೋರಾಡಬೇಕಾಗಿದೆ ಸರ್ಕಾರದಿಂದ ಮತ್ತು ಜಿಲ್ಲಾಡಳಿತಯಿಂದ ಬರುವ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಸಾರ್ವಜನಿಕರು ಕೊರೊನಾ ವಾರಿಯರ್ಸ್ ಯೊಂದಿಗೆ ಸಹಕರಿಸಬೇಕು ಭಯವಿಲ್ಲದೇ ಸೇವೆ ಮಾಡುವ ನಿಮ್ಮನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಆಶಾ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇದಿನೇ ಕಡಿಮೆಯಾಗುತ್ತಾ ಇದೆ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿದ್ದಾರೆ, ಇವರು ಇಲ್ಲದಿದ್ದರೆ ಜನರ ಆರೋಗ್ಯ ದೇವರ ಕೈಯಲ್ಲೂ ಕಾಪಾಡಲು ಆಗುತ್ತಿರಲಿಲ್ಲ. ಭಗವಂತನ ಸ್ವರೂಪದಲ್ಲಿ ಆಶಾ ಕಾರ್ಯಕರ್ತರು ಕಾಪಾಡುತ್ತಿದ್ದಾರೆ ಎಂದರು
ಉದ್ಯಮಿ ಚಂದನ್ ಗೌಡ ಚಿಕ್ಕ ವಯಸ್ಸಿನಲ್ಲೇ ಜನರ ಸೇವೆ ಸಲ್ಲುಸಿರುತ್ತಿರುವುದು ಅಮೋಘ. ಇವರು ಕೋವಿಡ್ ವಾರಿಯರ್ಸ್ ಗೆ ದಿನಸಿ ಕಿಟ್ ಗಳನ್ನು ಎಲ್ಲಾ ಹೋಬಳಿಯಲ್ಲಿ ನೀಡುತ್ತಿದ್ದಾರೆ. ಇವರ ರೀತಿಯಲ್ಲಿ ಎಲ್ಲರೂ ಮನಸ್ಸು ಮಾಡಿ ಕಷ್ಟದ ಸಮಯದಲ್ಲಿ ಇದ್ದವರಿಗೆ ಸಹಾಯ ಮಾಡಿದರೆ ಅವರು ಕೂಡ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದು ತಿಳಿಸಿದರು.
ಉದ್ಯಮಿ ಹಾಗೂ ಸಮಾಜ ಸೇವಕ ಎನ್.ಚಂದನ್ ಗೌಡ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಗಡಿ ಭಾಗದಲ್ಲಿ ದೇಶವನ್ನು ಕಾಪಾಡುವ ಯೋಧರ ರೀತಿ ಕೊರೊನಾ ನಿಯಂತ್ರಣಕ್ಕೆ ಯುದ್ಧಮಾಡಿದ ರೀತಿಯಲ್ಲಿ ವಾರಿಯರ್ಸ್ ಗಳಾಗಿ ಆರೋಗ್ಯ ಇಲಾಖೆ, ಪೊಲೀಸ್, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು, ಹಾಗೂ ಅಂಗನವಾಡಿಯವರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು ಕೊರೊನಾ ಮೂರನೇ ಅಲೆ ತಡೆಯುವ ಪಾತ್ರವು ವಾರಿಯರ್ಸ್ ಮೇಲಿದೆ. ಸಾರ್ವಜನಿಕರಿಗೆ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಹಾಗೂ ಕೊರೊನಾ ನಿಯಮ ಪಾಲನೆ ಮಾಡುವ ಬಗಯ ಇನ್ನಷ್ಟು ಅರಿವು ಮೂಡಿಸಬೇಕು ಎಂದರು
ಈ ಸಂದರ್ಭದಲ್ಲಿ ವೇಮಗಲ್ ವೃತ ನಿರೀಕ್ಷಕ ಶಿವರಾಜ್, ವೈದ್ಯಾಧಿಕಾರಿ ವೆಂಕಟಾಚಲಪತಿ, ಬೆಳಮಾರನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಗೌಡ, ಸಮಾಜ ಸೇವಕರಾದ ಸಂಪತ್, ರಂಚಿತ್ ಇದ್ದರು