ಹಾಸನ | ಅಂಗನವಾಡಿ ನೌಕರರಿಗೆ ಸಿಡಿಪಿಒನಿಂದ ಲೈಂಗಿಕ ಕಿರುಕುಳ

ಹಾಸನ : ಅರಸೀಕೆರೆಯಲ್ಲಿ ಸಿಡಿಪಿಒ (CDPO) ಆಗಿ ಕಾರ್ಯನಿರ್ವಹಿಸುತ್ತಿರುವ ಶಂಕರ್ ಮೂರ್ತಿ ಅಂಗನವಾಡಿ ನೌಕರರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಹಾಸನ

ಈ ಕುರಿತು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಗಂಡ ಸತ್ತ ನೌಕರರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.‌ ವರಲಕ್ಷ್ಮಿ ಆರೋಪಿಸಿದ್ದಾರೆ.  ಸುಂದರವಾದ ಹೆಣ್ಣುಮಕ್ಕಳ ಬಳಿ ನೀನು ಸುಂದರವಾಗಿದ್ದೀಯಾ, ಗಂಡ ಇಲ್ಲವಂತೆ, ಮತ್ತೊಂದು ಮದುವೆ ಮಾಡಿಕೊಳ್ಳುವ ಯೋಚನೆ ಮಾಡು ಎಂದು ಒತ್ತಾಯಿಸುತ್ತಿದ್ದಾನೆ. ರಾತ್ರಿ 10 ಗಂಟೆಗೆ ಗುಡ್ ನೈಟ್ ಅಂತಾ ಮಸೇಜ್ ಹಾಕುವುದು. ನಾನು ನಿಮ್ಮ ಮನೆಗೆ ಬರುವೆ ಮುದ್ದೆ ಊಟಾ ಮಾಡಿ ಹಾಕ್ತೀಯಾ ಎಂದು ಪೀಡಿಸುವುದು.  ನೀನು ಇವತ್ತು ಈ ಡ್ರಸ್ ನಲ್ಲಿ ಚೆನ್ನಾಗಿ ಕಾಣ್ತಾ ಇದ್ದೀಯಾ ಎಂದು ಅಶ್ಲೀಲವಾಗಿ ಮಾತನಾಡುವುದು ಹೀಗೆ ವಿವಿಧ ಸ್ವರೂಪದ ಮಾತುಗಳು ಯಾವ ಮುಲಾಜುಗಳು ಇಲ್ಲದೇ ಸರಾಗವಾಗಿ ಬರುತ್ತದೆ. ಕೆಲವು ಅಸಾಹಯಕ ಮಹಿಳೆಯರನ್ನು ಉಪಯೋಗಿಸಲಾಗುತ್ತಿದೆ. ಅಂತಹ ಮಹಿಳೆಯರು ಹೆಸರು ಹೊರಗಡೆ ಬರುತ್ತದೆ ಎಂದು ಹೆದರಿ ದೂರು ಕೊಡುತ್ತಿಲ್ಲ ಎಂದು ವರಲಕ್ಷ್ಮಿ ತಿಳಿಸಿದ್ದಾರೆ.

ಇದನ್ನೂ ಓದಿ : ವಕ್ಫ್ ತಿದ್ದುಪಡಿ ಕಾಯ್ದೆ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ಹಾಸನ

ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಬರುವ ಪ್ರತಿ ಹಣದಲ್ಲಿಯೂ ಪಾಲು ಕೊಡಲೇಬೇಕು. ಬಾಡಿಗೆ ಹಣ, ಹೊಸ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಕೊಡುವ ಹಣವನ್ನು ಮಾರ್ಚ್ 10, 2025 ರಂದು 10 ಅಂಗನವಾಡಿಗಳಿಗೆ 3000 ರೂಗಳಂತೆ ಹಾಕಿ ಪ್ರತಿ ಕೇಂದ್ರದಿಂದ 2500 ರೂಗಳನ್ನು ವಾಪಸ್ಸು ತಗೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಗಣಸಿ ಸರ್ಕಲ್‌ನಲ್ಲಿ ಪೋಷಣ್ ಟ್ಯಾಕರ್‌ನ ಪ್ರೋತ್ಸಾಹ ಹಣ ಹಾಕಿ 20 ಜನ ಸಹಾಯಕಿಯರ ಬಳಿ 500 ಹಣ ವಸೂಲಿ ಮಾಡಿಲಾಗಿದೆ.  ಜಾವಗಲ್ ಸರ್ಕಲ್‌ನಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎರಡು ವರ್ಷದಿಂದ ಮೊಟ್ಟೆ ವಿತರಣೆ ಮಾಡಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ಆಹಾರ ಸಾಮಗ್ರಿಗಳನ್ನು ಇಳಿಸಿ. ಹೆಚ್ಚಿನ ಆಹಾರ ಸಾಮಾಗ್ರಿಗಳಿಗೆ ಸಹಿ ಪಡೆಯುವುದು, ಸಹಿ ಮಾಡದಿದ್ದರೆ ಅವರಿಗೆ ಕಿರುಕುಳ ಕೊಡುವುದು, ಕಸಬಾದಲ್ಲಿ ಅಸ್ತಿತ್ವದಲ್ಲಿಯೆ ಇರದ 7 ಅಂಗನವಾಡಿ ಕೇಂದ್ರಗಳಿಗೆ ನಿರಂತರ ಬಾಡಿಗೆ ಹಣ ಮಾಡಿ ಕಬಳಿಸಿಲಾಗಿದೆ.. ಬಾಂಡ್ ಮೆಚ್ಯುರಿಟಿ ಯಾದ ಭಾಗ್ಯಲಕ್ಷ್ಮಿ ಫಲಾನುಭವಿಗಳ ಬಳಿ ಹಣ ಸಂಗ್ರಹ ಮಾಡಲು ಕಾರ್ಯಕರ್ತೆಯರಿಗೆ ಒತ್ತಾಯಿಸುವುದು, ಫಲಾನುಭವಿಗಳು ಬಂದು ಕೇಳಿದಾಗ ನಾನು ಹಾಗೇ ಹೇಳಲಿಲ್ಲ ಅಂತಾ ಅವರಿಗೆ ತಿಳಿಸಿ ಅವರು ಹೋದನಂತರ ಕಾರ್ಯಕರ್ತೆಗೆ ಹಣ ಸಂಗ್ರಹ ಮಾಡಲೇಬೇಕು ಎಂದು ಹಿಂಸೆ ನೀಡುತ್ತಾರೆ ಎಂದು ಸಿಐಟಿಯು ಆರೋಪಿಸಿದೆ.

ಕೋಲಾರಿನಲ್ಲಿದ್ದಾಗ ತನ್ನ ಮನೆಯ ಗೃಹಪ್ರವೇಶಕ್ಕೆ ಪ್ರತಿ ಅಂಗನವಾಡಿ ಕಾರ್ಯಕರ್ತೆಯಿಂದ 100 ಕೊಡಬೇಕು ಎಂಬ ದೂರು ಈಗಗಾಲೇ ಕೇಂದ್ರ ಕಛೇರಿಯಲ್ಲಿದೆ. ಇಂತಹ ವ್ಯಕ್ತಿ ಇಲಾಖೆಗೆ ಕೆಟ್ಟಹೆಸರು ತರುವುದಲ್ಲದೇ ICDS ನ ಕಣ್ಣೋಟಕ್ಕೆ ಧಕ್ಕೆ ತರುತ್ತಿದ್ದಾರೆ. ಹಾಗಾಗಿ  ಇವರನ್ನು ವಜಾಗೊಳಿಸಬೇಕು ಎಂದು ಅಂಗನವಾಡಿ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್. ಎಸ್‌. ಸುನಂದಾ, ಜಿಲ್ಲಾಧ್ಯಕ್ಷೆ ಪುಷ್ಪಾ ಎಂ.ಬಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಂಜುಳಾ, ಮುಖಂಡರಾದ ಜಿ.ಪಿ ಶೈಲಜಾ, ಎಚ್.‌ ಎಸ್.‌ ಸುಮಿತ್ರಾ, ಬಿ.ಕೆ. ಸಂಗೀತಾ, ಜರೀನಾ, ಮೋಹನ್‌ ಕುಮಾರ್‌, ಎಂ.ಆರ್‌ ಗೀತಾ ವಿನಂತಿಸಿದ್ದಾರೆ.

ಇದನ್ನೂ ನೋಡಿ : “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media ಹಾಸನ

 

Donate Janashakthi Media

Leave a Reply

Your email address will not be published. Required fields are marked *