ಕಾಂಗ್ರೆಸ್​ ಬೆಂಬಲಿಸಿದ್ದ ಬಿಜೆಪಿ ಮುಖಂಡರ ಮನೆಗಳ ಮೇಲೆ ಐಟಿ ದಾಳಿ

ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದ ಇಬ್ಬರು ಬಿಜೆಪಿ ಮುಖಂಡರ ಮನೆ ಮತ್ತು ಕಚೇರಿಗಳ ಮೇಳೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ಸದಸ್ಯರಾಗಿರುವ ಸಹೋದರರಾದ ಛಲಪತಿ ಮತ್ತು ಪ್ರಸಾದ್ ಮನೆ ಮೇಲೆ ದಾಳಿ ನಡೆದಿದೆ. ಛಲಪತಿ ಮತ್ತು ಪ್ರಸಾದ್ ಇಬ್ಬರು ಅವಳಿ ಸೋದರರಾಗಿದ್ದು, ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿದ್ದರು. ಆದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದಾರೆ.

ಪುರಸಭೆ ಸದಸ್ಯರ ಜೊತೆಯಲ್ಲಿ ಪ್ರಸಾದ್ ಬೊಮ್ಮಸಂದ್ರ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದು, ಸೋದರರಿಬ್ಬರು ಕೈಗಾರಿಕೋದ್ಯಮಿಗಳಾಗಿದ್ದಾರೆ.

ಇಂದು ಬೆಳಗ್ಗೆ ಮೂರು ಕಾರ್​ಗಳಲ್ಲಿ ಬಂದ ಎಂಟು ಜನ ಅಧಿಕಾರಿಗಳು ಕೈಗಾರಿಕಾ ಕಛೇರಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಛಲಪತಿ ಮನೆಯಲ್ಲಿ ಎರಡೂವರೆ ಲಕ್ಷ ನಗದು ಪತ್ತೆಯಾಗಿದೆ. ಇನ್ನು ಪ್ರಸಾದ್ ಅವರ ನಿವಾಸಲ್ಲಿ 5000 ರೂಪಾಯಿ ಸಿಕ್ಕಿದ್ದು, ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಮನೆಯಿಂದ ಹೊರಬಂದ ಪ್ರಸಾದ್ ಅಭಿಮಾನಿಗಳತ್ತ ಕೈಬೀಸಿ, ಧೈರ್ಯವಾಗಿರಿ ಎಂದು ಹೇಳಿದರು.

ಕಾಂಗ್ರೆಸ್ ಗೆಲುವು ಖಚಿತ ಎಂದ ಅಭಿಮಾನಿಗಳು : ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದನ್ನು ಸಹಿಸದೇ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಸೇಡಿನ ರಾಜಕಾರಣಕ್ಕೆ ನಾವು ಹೆದರುವುದಿಲ್ಲ. ಐಟಿ, ಇಡಿ ದಾಳಿಗೆ ನಾವು ಬಗ್ಗುವುದಿಲ್ಲ. ಬಿಜೆಪಿಯವರು ಯಾವುದೇ ಅಸ್ತ್ರ ಪ್ರಯೋಗಿಸಿದರೂ ನಮ್ಮ ಮುಂದೆ ಯಾವುದೂ ನಡೆಯವುದಿಲ್ಲ. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಛಲಪತಿ ಹಾಗೂ ಪ್ರಸಾದ್ ಅಭಿಮಾನಿಗಳು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *