ಅಮರಾವತಿ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿರ್ಬಂಧ: ಆಂದ್ರಾ ಸರ್ಕಾರ ಸಮಿತಿ ರಚನೆ

ಅಮರಾವತಿ : ಆಂಧ್ರಪ್ರದೇಶ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿರ್ಬಂಧಿಸುವ ಸಾಧ್ಯತೆಯ ಕುರಿತು ಅಧ್ಯಯನ ನಡೆಸಲು  ಸಚಿವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದರು.

ಈ ಸಮಿತಿಯಲ್ಲಿ ಐಟಿ ಸಚಿವ ನಾರಾ ಲೋಕೇಶ್ ನೇತೃತ್ವದ ಸಚಿವರ ಗುಂಪು ಮತ್ತು ಆರೋಗ್ಯ ಸಚಿವ ಸತ್ಯಕುಮಾರ್ ಹಾಗೂ ನನ್ನನ್ನು ಸೇರಿದಂತೆ ಇತರ ಸದಸ್ಯರಿದ್ದೇವೆ. ಈ ಸಮಿತಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ದೇಶಗಳು ಈ ಕುರಿತು ಅನುಸರಿಸುತ್ತಿರುವ ಮಾದರಿಗಳನ್ನ ಅಧ್ಯಯನ ಮಾಡಲಿದ್ದು, ಅತ್ಯುತ್ತಮ ಮಾದರಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಮಾಧ್ಯಮ ದುರುಪಯೋಗವನ್ನು ಹೇಗೆ ನಿಯಂತ್ರಿಸಬೇಕು ಹಾಗೂ ರಾಜ್ಯವು ಎಲ್ಲಿಯವರೆಗೆ ಇದನ್ನು ಅಳವಡಿಸಿಕೊಳ್ಳಬಹುದು ಎಂಬ ವರದಿ ತರುತ್ತೇವೆ ಆಸ್ಟ್ರೇಲಿಯಾ ಮಾತ್ರವಲ್ಲ ಜಗತ್ತಿನಾದ್ಯಂತ ಹಲವು ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಿ ನಮ್ಮ ರಾಜ್ಯದಲ್ಲೂ ಈ ನಿರ್ಬಂಧ ಜಾರಿಗೆ ತರುತ್ತೇವೆ ಎಂದರು.

ಇದನ್ನೂ ಓದಿ : ಉಡುಪಿ | ಬಾಲನ್ಯಾಯ ಕಾಯ್ದೆ ಜಾರಿಗೆ ಜಾಗೃತಿ ಅಗತ್ಯ: ಮಕ್ಕಳ ಸುರಕ್ಷತೆ ಕುರಿತು ತಿಪ್ಪೇಸ್ವಾಮಿ

ಇತ್ತೀಚಿಗೆ ಆಸ್ಟ್ರೇಲಿಯಾ ಸರ್ಕಾರವೂ 16 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ಮಿತಿಯನ್ನು ನಿಗದಿಪಡಿಸುವ ಕಾನೂನನ್ನು ಹೊರತಂದಿದೆ.

ಅಲ್ಲದೇ ಈ ವರದಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು. ಇದನ್ನು ನಿರ್ಬಂಧಿಸುವುದೇ ಅಥವಾ ನಿಷೇಧ ಹೇರುವುದಾ ಎಂಬುದನ್ನು ಚಿಂತಿಸಲಾಗುವುದು. ಇದಕ್ಕಿಂತ ಮುಖ್ಯವಾಗಿ ಇದನ್ನು ಹೇಗೆ ನಿಯಂತ್ರಿಸುವುದು ಮುಖ್ಯ ಕಾರ್ಯವಾಗಿದೆ ಎಂದು ತಿಳಿಸಿದರು.

ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ವಯಸ್ಸಿನ ಪುರಾವೆ ದಾಖಲೆಗಳನ್ನು ಅಪ್ಲೋಡ್​ ಮಾಡಲು ಕೇಳಬೇಕು. ಇದರಿಂದ ಅವರ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಫೇಸ್​ಬುಕ್​ ಕುರಿತು ಉದಾಹರಿಸಿದ ಸಚಿವರು, ಈ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ವಯಸ್ಸನ್ನು ಕೇಳಿದರೂ, ಇದರಲ್ಲಿ ನಮೂದಿಸಿದ ಜನ್ಮ ದಿನಾಂಕದ ದೃಢೀಕರಣವನ್ನು ಪರಿಶೀಲಿಸುವುದಿಲ್ಲ ಈ ಸಾಮಾಜಿಕ ಜಾಲತಾಣಗಳು ವಯಸ್ಸಿನ ದೃಢೀಕರಣಕ್ಕೆ ಪುರಾವೆಗಳನ್ನು ಕೇಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿದ ನಂತರ ಗೃಹಸಚಿವಾಲಯ ತನ್ನ ಶಿಫಾರಸುಗಳನ್ನು ಒಂದು ತಿಂಗಳಲ್ಲಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

ದಾವೋಸ್‌ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ಲೋಕೇಶ್ ಅವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದರು.

ಇದನ್ನೂ ನೋಡಿ : ಸಮುದಾಯ -50 | ಬಾದಲ್ ಸರ್ಕಾರ್ – ತೃತೀಯ ರಂಗಭೂಮಿ ಪರಿಕಲ್ಪನೆ ಮತ್ತು ಪ್ರಭಾವ Janashakthi Media

Donate Janashakthi Media