ಅನೈತಿಕ ಅಂಗವೈಕಲ್ಯದ ಸರ್ಕಾರ : ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು; ಫೆ.03 : ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ಸುಳ್ಳುಗಳನ್ನ ಹೇಳಿಸಿದೆ, ಭಾಷಣದಲ್ಲಿ ಸತ್ಯ ಇಲ್ಲ, ಸುಳ್ಳಿನ ಕಂತೆಯಾಗಿದೆ. ಇದಕ್ಕೆ ಮುಂದಾಲೋಚನೆ‌ ಇಲ್ಲ, ದೂರದೃಷ್ಟಿಯೂ ಇಲ್ಲ, ಅವರ ಭಾಷಣದಲ್ಲಿ ಯಾವುದೇ ಸತ್ವ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕುಟುಕಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು ಬಜೆಟ್ ನಲ್ಲಿ ಯಾವುದೇ ಸತ್ವವಿಲ್ಲ, ನಮ್ಮ ಯೋಜನೆಗಳನ್ನೇ ಪ್ರಸ್ತಾಪ ಮಾಡಿದ್ದಾರೆ. ನಮ್ಮ ಸರ್ಕಾರದ ಯೋಜನೆಯ ಸಾಧನೆಯನ್ನೇ ಅವರು ತಮ್ಮದು ಎಂದು ಹೇಳಿಕೊಂಡಿದ್ದಾರೆ. ಇದು ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ. ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರಿಗೆ ಅವರದೆಯಾದ ಒಂದು ಘನತೆ, ಗೌರವ ಇರುತ್ತದೆ. ಆದರೆ ಸರ್ಕಾರ ರಾಜ್ಯಪಾಲರಿಂದಲೂ ಸುಳ್ಳು ಹೇಳಿಸಿದೆ. ವಸ್ತುಸ್ಥಿತಿ ಏನಿದೆಯೋ ಅದನ್ನ ಹೇಳಿಸಬೇಕು. ನಮ್ಮ ಕಾರ್ಯಕ್ರಮಗಳನ್ನೇ ಇವರು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನು : ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಬಿಜೆಪಿ ಸರ್ಕಾರ ಚುನಾವಣೆಯಿಂದ ಆರಿಸಿಬಂದ ಸರ್ಕಾರವು ಅಲ್ಲ, ಜನರಿಂದ ಆರಿಸಿ ಬಂದ ಸರ್ಕಾವು ಅಲ್ಲ, ಅದು ಜನತೆಯ ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ ಅವರ ಅನೈತಿಕ ಅಂಗವೈಕಲ್ಯದ ಸರ್ಕಾರವಿದು.

ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಅನ್ನುತ್ತಿದ್ರು, ಆದರೆ ಈಗ ಇವರ ಸರ್ಕಾರ ಏನಾಗಿದೆ? ಟೇಕಾಫ್ ಅಲ್ಲ ಸರ್ಕಾರವೇ ಆಫ್ ಆಗ್ಬಿಟ್ಟಿದೆ. ದಾರಿಯಲ್ಲಿ ನಿಂತ ಡಕೋಟ ಬಸ್ ಸರ್ಕಾರವಾಗಿದೆ. ಯಡಿಯೂರಪ್ಪಗೆ ಬಸ್ ಓಡಿಸೋಕೆ‌ ಬರ್ತಿಲ್ಲ, ಗೇರ್ ಹಾಕೋಕೆ ಬರ್ತಿಲ್ಲ. ನಾಲ್ಕು‌ ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡ್ತಿದ್ದಾರೆ. ಜೋರಾಗಿ ಎಳೆದಾಡಿದರೆ ಗೇರ್ ಕಿತ್ತಿರುವ ಡಕೋಟ ಎಕ್ಸ್ ಪ್ರೆಸ್ ನಂತೆ ಹಾಗಬಹುದು ಎಂದು ಸರ್ಕಾರವನ್ನು ವ್ಯಂಗ್ಯಮಾಡಿದ್ದಾರೆ.

ಒಂದೂವರೆ ವರ್ಷವಾದ್ರೂ ಸರ್ಕಾರ ಸರಿಯಾದ ಒಂದು ಹಳಿಯಲ್ಲಿ ನಿಂತಿಲ್ಲ, ಐದು ದಿನದಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದ್ದಾರೆ. ಮಾಧುಸ್ವಾಮಿಗೆ ಮೂರು ಭಾರಿ ಖಾತೆ ಬದಲಾಯಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ. ಸಮರ್ಥ ಮುಖ್ಯಮಂತ್ರಿಯಾದವರು ಮಾಡುವ ಕೆಲಸವಾ? ಇದು. ಮಾಧುಸ್ವಾಮಿ ಪಾಪ ಮುಂದೆ ಕೂತು ಒಳ್ಳೆಯ ಕೆಲಸ ಮಾಡುತ್ತಿದ್ದವರು, ಅವರನ್ನು ಹಿಂದಕ್ಕೆ ಹಾಕಿಬಿಟ್ಟರು.

ಬೆಂಗಳೂರು ಅಭಿವೃದ್ಧಿ ಯಾರಿಗೂ ಕೊಡಲಿಲ್ಲ? ಅರವಿಂದ ಲಿಂಬಾವಳಿ ಬೆಂಗಳೂರಲ್ಲವೇ ? ಅವರಿಗೆ ಕೊಡಬಹುದಿತ್ತು, ಸುರೇಶ್ ಕುಮಾರ್ ಬಹಳ ಹಳಬರು, ಇಲ್ಲೇ ಹುಟ್ಟಿ ಬೆಳೆದವರು, ಅವರಿಗಾದರೂ ಕೊಡಬಹುದಿತ್ತು, ಬೆಂಗಳೂರು ಅಭಿವೃದ್ಧಿಯನ್ನು ಯಡಿಯೂರಪ್ಪ ನವರು ತಮ್ಮಬಳಿಯೆ ಇಂಟುಕೊಂಡಿದ್ದಾರೆ. ಪಾಪ, ನರಕ ಎಲ್ಲವೂ ಇಲ್ಲೇ ಇದೆ, ಇಲ್ಲೇ ಅನುಭವಿಸಿ ಹೋಗಬೇಕು ಎಂದು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಕುಟುಕಿದರು.

ಕೊರೊನಾ ಹೆಸರಿನಲ್ಲಿ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಕೊಕ್ಕೆ ಹಾಕಲಾಗಿದೆ. ಎಲ್ಲದಕ್ಕೂ ಕೊರೊನಾ ನೆಪ ಹೇಳುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವ ತುರ್ತು ಏನಿತ್ತು ? ಎಂದು ಪ್ರಶ್ನಿಸಿದರು.

ಈ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಬೀದಿಗೆ ತರಲಾಗಿದೆ.  ಪರಿಸ್ಥಿತಿ ಜ್ವಾಲಾ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಸ್ಫೋಟಗೊಂಡರೆ ಸರ್ಕಾರ ಕೊಚ್ಚಿ ಹೋಗಲಿದೆ. ರೈತರನ್ನು ಎದುರು ಹಾಕಿಕೊಂಡವರು ಯಾರು ಕೂಡ ಉಳಿದಿಲ್ಲ, ರೈತ ವಿರೋಧಿ ಕಾನೂನು ಜಾರಿಗೆ ತಂದು ಅವರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *