ಕೆಲಸಕ್ಕಿದ್ದ ಕಂಪನಿಯಲ್ಲೇ ಬಹುಕೋಟಿ ಮೌಲ್ಯದ ಡೇಟಾ ಕದ್ದ ಅಧಿಕಾರಿ!

ಬೆಂಗಳೂರು: 87 ಕೋಟಿ ರೂ ಮೌಲ್ಯದ ಡೇಟಾ ಕಳ್ಳತನ ಮಾಡಿರುವ ಆರೋಪ ಮಾರತ್ತಹಳ್ಳಿಯಲ್ಲಿರುವ ಅಮೇಡಿಯಸ್‌ ಸಾಫ್ಟ್‌ವೇರ್‌ಲ್ಯಾಲ್ಸ್ ಕಂಪನಿಯ ರಿಸರ್ಚ್‌ ವಿಭಾಗದ ಮಾಜಿ ಸೀನಿಯರ್‌ಮ್ಯಾನೇಜರ್‌ ಅಶುತೋಷ್‌ ನಿಗಮ್‌ ಎಂಬುವವರ ವಿರುದ್ಧ ಕೇಳಿ ಬಂದಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸ

ಕಂಪನಿಯ ಪ್ರತಿನಿಧಿಯಾಗಿರುವ ಜುಲ್‌ ಕಫೀಲ್‌ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. 2020ರ ಫೆ.1ರಿಂದ ಅಶುತೋಷ್‌ ನಿಗಮ್‌ ಎಂಬುವವರು ಕಂಪನಿಯ ರಿಸರ್ಚ್‌ ವಿಭಾಗದ ಸೀನಿಯರ್‌ಮ್ಯಾನೇಜರ್‌ಆಗಿ ಕೆಲಸಕ್ಕೆ ಸೇರಿದ್ದರು.

ಇದನ್ನೂ ಓದಿ: ಬೆಂಗಳೂರು | ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸಕ್ಕೆ ಕತ್ತರಿ : ಆದಿತ್ಯ ಮುಖರ್ಜಿ ಆರೋಪ

ಕಂಪನಿಯ ಬಹುಕೋಟಿ ಮೌಲ್ಯದ ಸಾಫ್ಟ್‌ವೇರ್‌ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದರು. ಕಂಪನಿಯ ಆಂತರಿಕ ಭದ್ರತಾ ತಪಾಸಣೆ ಮಾಡಿದಾಗ, ಇವರು ಕಳೆದ ಅಕ್ಟೋಬರ್‌11ರಂದು ಕಂಪನಿಯ ಅನುಮತಿ ಇಲ್ಲದೇ, ಭದ್ರತಾ ವ್ಯವಸ್ಥೆಗಳನ್ನು ದಾಟಿ ಅತ್ಯಂತ ರಹಸ್ಯವಾದ ಸೋರ್ಸ್‌ ಕೋಡ್‌ ಹಾಗೂ ಇತರ ಗೌಪ್ಯ ದಾಖಲೆಗಳನ್ನು ತಮ್ಮ ವೈಯಕ್ತಿಕ ಇ-ಮೇಲ್‌ ಮೂಲಕ ಕಳವು ಮಾಡಿರುವುದು ಕಂಡು ಬಂದಿದೆ.

ಸುಮಾರು 80 ಲಕ್ಷ ಯುರೋಗಳಷ್ಟು ಅಂದರೆ, ಭಾರತೀಯ ರೂಪಾಯಿಯಲ್ಲಿ 87 ಕೋಟಿ ರೂ. ಮೌಲ್ಯದ ಡಿಜಿಟಲ್‌ ಆಸ್ತಿಯನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಕಂಪನಿಯ ಅಧಿಕಾರಿಗಳು ಡಿಜಿಟಲ್‌ ಸಾಕ್ಷ್ಯಗಳೊಂದಿಗೆ ಅಶುತೋಷ್‌ ಅವರನ್ನು ವಿಚಾರಣೆ ನಡೆಸಿದಾಗ, ಅವರು ತಮ್ಮ ತಪ್ಪನ್ನು ಒಪ್ಪಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಅಶುತೋಷ್‌ ನಿಗಮ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ನೋಡಿ: ಸತ್ಯಾನ್ವೇಷಣೆ 100 | ಸತ್ಯದೊಂದಿಗೆ ಮಾಡಿದ ಪ್ರಯೋಗಗಳ ಅನುಸಂಧಾನವೇ ಗಾಂಧೀಜಿಯವರ ಆತ್ಮಕಥನ – ಡಾ. ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *