ಬೆಂಗಳೂರು: ರಾಜ್ಯಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆಯ ಚರ್ಚೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಟಿಪ್ಪಣಿ ಮಾಡಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.
ಇದು ದೇಶಾದ್ಯಂತ ಜನರ ಭಾವನೆಗಳನ್ನು ಕೆರಳಿಸಿದೆ ಎಂದಿರುವ ಅದು, ಡಾ.ಅಂಬೇಡ್ಕರ್ ಭಾರತದ ಸಂವಿಧಾನ ಶಿಲ್ಪಿ, ಅಂತಹ ಭಾರತದ ಸಂವಿಧಾನದ ಬಗ್ಗೆ ಮಾತನಾಡುತ್ತಾ ಅಮಿತ್ ಷಾ ಈ ಟಿಪ್ಪಣಿಗಳನ್ನು ಮಾಡಿದ್ದಾರೆ ಎಂಬುದು ಅವರ ಮನುವಾದಿ ದೃಷ್ಟಿಕೋನವನ್ನು ಬಯಲಿಗೆ ತಂದಿದೆಯಷ್ಟೇ ಎಂದು ಟೀಕಿಸಿದೆ.
ಇದನ್ನೂ ಓದಿ : ಅಂಬೇಡ್ಕರ್ ಅವರ ಕುರಿತು ಶಾ ಆಡಿದ ಅವಮಾನಕಾರಿ ಮಾತುಗಳನ್ನು ವಾಪಸ್ ಪಡೆಯಬೇಕು: ಪ್ರಧಾನಿ ಮೋದಿಗೆ ‘ಇಂಡಿಯಾ’ ಒಕ್ಕೂಟ ಆಗ್ರಹ
ಪ್ರಧಾನ ಮಂತ್ರಿ ಮೋದಿಯವರು ಅಮಿತ್ ಷಾ ರನ್ನು ಸಮರ್ಥಿಸಿಕೊಂಡಿರುವುದು ವಿವೇಚನಾರಹಿತವಾಗಿದೆ. ಅಮಿತ್ ಷಾ ಅವರಿಗೆ ಗೃಹ ಸಚಿವರ ಹುದ್ದೆಯಲ್ಲಿ ಉಳಿಯುವ ಹಕ್ಕು ಇಲ್ಲ ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಇದನ್ನೂ ನೋಡಿ : ಅಂಬೇಡ್ಕರ್ ಕುರಿತ ಹೇಳಿಕೆ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Janashakthi Media