ಗೋಹತ್ಯೆ ನಿಷೇಧ ಜಾರಿ ಎಂದ ಅಮಿತ್‌ ಶಾ

ಪಾಟ್ನಾ: ಸತತ ಮೂರನೇ ಬಾರಿಗೆ ಎನ್‍ಡಿಎ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಪಾಟ್ನಾದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಬಯಸುವ ಪಿಎಫ್‍ಐ ಅಂತಹ ನಿಷೇಧಿತ ಸಂಘಟನೆಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಮತ್ತು ಆರ್‍ಜೆಡಿ ನಿರತವಾಗಿವೆ. ರಾಜ್ಯದ ಅಭಿವೃದ್ಧಿಗೆ ಏನು ಬೇಕು ಎಂಬುದರ ಕುರಿತು ಈ ಎರಡು ಪಕ್ಷಗಳು ತಲೆಕೆಡಿಸಿಕೊಳ್ಳಲ್ಲ ಎಂದು ಶಾ ಆರೋಪಿಸಿದರು.

ಇದನ್ನೂ ಓದಿ: ಅರವಿಂದ್‌ ವಿರುದ್ಧ ಮತ್ತೊಂದು ಚಾರ್ಜ್ ಶೀಟ್‌ ಸಲ್ಲಿಸಿದ ಈಡಿ 

ಅಲ್ಲದೇ, ಭಾರತ-ನೇಪಾಳ ಗಡಿಯನ್ನು ರಕ್ಷಿಸುವುದು ಎನ್‍ಡಿಎ ಸರ್ಕಾರದ ಮೂರನೇ ಅವಧಿಯ ಆದ್ಯತೆಗಳಲ್ಲಿ ಒಂದಾಗಿದೆ.ಗೋವು ಕಳ್ಳಸಾಗಾಣಿಯಲ್ಲಿ ತೊಡಗಿರುವ ಅಪರಾಧಗಳನ್ನು ತಲೆಕೆಳಗಾಗಿ ನೇಣು ಹಾಕಲಾಗುತ್ತದೆ. ಈ ಮೂಲಕ ಗೋವು ರಕ್ಷಣೆ ಮಾಡಲಾಗುತ್ತದೆ. ಮತ್ತೆ ಎನ್ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂಧರೆ ಗೋಹತ್ಯೆ ನಿಷೇಧಿಸಲಾಗುವುದು ಎಂದು ಅಮಿತ್‌ ಶಾ ಹೇಳಿದರು.

ಇದನ್ನೂ ನೋಡಿ: ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media

Donate Janashakthi Media

Leave a Reply

Your email address will not be published. Required fields are marked *