ರಷ್ಯಾ ಸರ್ಕಾರಿ ಮಾಧ್ಯಮಗಳಿಗೆ ಗೂಗಲ್-ಯುಟ್ಯೂಬ್‌ನಲ್ಲಿ ನಿಷೇಧ!

ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ತೀವ್ರಗೊಂಡಿರುವ ಯುದ್ಧ ಸಮರದಿಂದಾಗಿ ಅನೇಕ ಸಾಮಾಜಿಕ ಮಾಧ್ಯಮಗಳು ತಮ್ಮನಿಲುವನ್ನು ಪ್ರದರ್ಶಿಸುತ್ತಿವೆ. ಫೇಸ್‌ಬುಕ್, ಟ್ವಿಟರ್‌, ತಮ್ಮ ವೇದಿಕೆಗಳಲ್ಲಿ ರಷ್ಯನ್ ಮಾಧ್ಯಮಗಳನ್ನು ನಿರ್ಬಂಧಿಸಿವೆ. ಅದೇ ರೀತಿ ಅಂತರ್ಜಾಲ ಕಂಪನಿ ಗೂಗಲ್ ಇದೇ ಹಾದಿಯನ್ನು ತುಳಿದಿದೆ. ಫೆಬ್ರವರಿ 26ರಿಂದ ಗೂಗಲ್ ತನ್ನ ವೇದಕೆಯಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಆರ್ ಟಿ ಮತ್ತು ರಷ್ಯನ್ ಚಾನೆಲ್‌ಗಳನ್ನು ನಿರ್ಬಂಧಿಸಿವೆ. ಇದರೊಂದಿಗೆ, ಈ ಮಾಧ್ಯಮಗಳು ಹಣಗಳಿಸುವ ಕಂಟೆಂಟ್ ಕೂಡ ಸ್ಥಗಿತಗೊಳಿಸಲಾಗಿದೆ.

ರಷ್ಯಾದ ಸರ್ಕಾರಿ ಮಾಧ್ಯಮಗಳು ಗೂಗಲ್‌ ಹಾಗೂ ಅದರ ಇತರೆ ಸಹಸಂಸ್ಥೆಗಳ ಮೂಲಕ ಆರ್ಥಿಕ ಲಾಭ ಪಡೆಯುವುದಕ್ಕೆ ನಿಷೇಧ ಹಾಕಲಾಗಿದೆ. ಯೂಟ್ಯೂಬ್‌ನಲ್ಲಿರುವ ರಷ್ಯಾ ಸರ್ಕಾರಿ ಮಾಧ್ಯಮಗಳ ವಾಹಿನಿಗಳು ಈಗ ಜಾಹೀರಾತು ಲಾಭ ಪಡೆಯಲು ಆಗುತ್ತಿಲ್ಲ.

ಗೂಗಲ್‌ನಲ್ಲಿಯೂ ಮಾಧ್ಯಮಗಳಿಗೆ ಯಾವುದೇ ಜಾಹೀರಾತು ಸಿಗುತ್ತಿಲ್ಲ. ಫೇಸ್‌ಬುಕ್‌ ಕೂಡ ರಷ್ಯಾ ಮಾಧ್ಯಮಗಳು ಆರ್ಥಿಕ ಲಾಭ ಪಡೆಯುವುದಕ್ಕೆ ನಿರ್ಬಂಧ ಹೇರಿವೆ. ಆದರೆ ಈ ಸಂಸ್ಥೆಗಳ ಕ್ರಮ ಕೇವಲ ರಷ್ಯಾದ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿವೆ!.

ರಷ್ಯಾ ಸರ್ಕಾರದ ಆರ್ಥಿಕ ನೆರವು ಪಡೆದಿರುವ ಮಾಧ್ಯಮಗಳು ಯೂಟ್ಯೂಬ್‌ ನಲ್ಲಿ ಜಾಹೀರಾತುಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ಅಥವಾ ಜಾಹೀರಾತುಗಳನ್ನು ಇರಿಸಲು ಹುಡುಕಾಟ ಮತ್ತು ಜಿಮೇಲ್ ಅನ್ನು ಬಳಸುವುದು ಸೇರಿದಂತೆ ಯಾವುದೇ ಇತರ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್, ವಕ್ತಾರ ಮೈಕೆಲ್ ಅಸಿಮನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಭಾನುವಾರ ವರದಿ ಮಾಡಿದೆ. “ನಾವು ಹೊಸ ಬೆಳವಣಿಗೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅಸಿಮನ್ ಹೇಳಿದರು.

ಇದು ಅಸಾಧಾರಣ ಸಂದರ್ಭ ಎಂದಿರುವ ಗೂಗಲ್ ನ ಯುಟ್ಯೂಬ್ ಘಟಕವು ಹಣಗಳಿಸುವ ಹಲವಾರು ಚಾನಲ್‌ಗಳ ಸಾಮರ್ಥ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ. ಯುರೋಪಿಯನ್ ಒಕ್ಕೂಟದಂತಹ ಇತ್ತೀಚಿನ ನಿರ್ಬಂಧಗಳೊಂದಿಗೆ ಸಂಯೋಜಿತವಾಗಿರುವ ಹಲವಾರು ರಷ್ಯಾದ ಚಾನಲ್‌ಗಳನ್ನು ಇವು ಒಳಗೊಂಡಿವೆ.

ಜಾಹೀರಾತು ನಿಯೋಜನೆಯನ್ನು ಹೆಚ್ಚಾಗಿ ಯುಟ್ಯೂಬ್‌ ನಿಯಂತ್ರಿಸುತ್ತದೆ. ಸಂಘಟಿತ ವಂಚನೆಯಲ್ಲಿ ತೊಡಗಿರುವ ತನ್ನ ನೀತಿಗಳನ್ನು ಉಲ್ಲಂಘಿಸುವ ಚಾನಲ್‌ಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಲಾಗಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಹೇಳಿದೆ.

ಶುಕ್ರವಾರದಂದು, ಫೇಸ್‌ಬುಕ್ ನ ಪೇರೆಂಟಲ್ ಕಂಪನಿ ಮೇಟಾ ಜಾಹೀರಾತುಗಳನ್ನು ಚಲಾಯಿಸುವ ಮತ್ತು ಮೆಟಾದ ಪ್ಲಾಟ್‌ಫಾರ್ಮ್‌ನಲ್ಲಿ ಹಣಗಳಿಸುವ ರಷ್ಯಾದ ಸ್ಟೇಟ್ ಮೀಡಿಯಾ ಸಾಮರ್ಥ್ಯವನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *