- ವಿಸ್ಕಾನ್ಸಿನ್‍ನಲ್ಲಿ ಮರುಎಣಿಕೆಗೆ ಟ್ರಂಪ್ ಒತ್ತಾಯ
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಗಿದು ಹೆಚ್ಚೂಕಡಿಮೆ 20 ಗಂಟೆ ಗತಿಸಿದರೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಇನ್ನೂ ಏಳೆಂಟು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಗಿದಿಲ್ಲ. ಆಗಲೇ ಸೋಲಿನ ಭಯದಿಂದ ಚುನಾವಣೆ ಪ್ರಶ್ನಿಸಿ ಸುಪ್ರೀಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದ ಅಧ್ಯಕ್ಷ ಟ್ರಂಪ್ ಈಗ, ವಿಸ್ಕಾನ್ಸಿನ್‍ನಲ್ಲಿ ಮತಗಳ ಮರುಎಣಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
It’s clear that when the count is finished, we believe we will be the winners. pic.twitter.com/qVk0igZlrF
— Joe Biden (@JoeBiden) November 5, 2020
ಈ ಐವತ್ತು ರಾಜ್ಯಗಳಿಂದ ಒಟ್ಟು 538 ಎಲೆಕ್ಟೋರೇಟ್ಗಳ ಆಯ್ಕೆ ಆಗಬೇಕಿದೆ. ಇದರಲ್ಲಿ ಒಂದು ಪಕ್ಷ ಬಹುಮತ ಪಡೆಯಲು 270 ಎಲೆಕ್ಟೋರೇಟ್ಗಳ ಆಯ್ಕೆ ಆಗಬೇಕು. ಬೈಡನ್ ಅವರ ಡೆಮಾಕ್ರಾಟಿಕ್ ಪಕ್ಷ 264 ಹಾಗೂ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 214 ಎಲೆಕ್ಟೋರಲ್ ವೋಟ್ಗಳನ್ನ ಪಡೆದಿದೆ. ಈ ಮೂಲಕ ಟ್ರಂಪ್ಗಿಂತ ಬೈಡನ್ ಮೇಲುಗೈ ಹೊಂದಿದ್ದಾರೆ.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ: ಟ್ರಂಪ್ ವಿರುದ್ಧ ಮುನ್ನಡೆ ಸಾಧಿಸಿದ ಜೋ ಬಿಡೆನ್
ಅಲಾಸ್ಕಾ, ಆರಿಜೋನಾ, ಜಾರ್ಜಿಯಾ, ಮೈನೆ, ಮಿಷಿಗನ್, ನೆವಾಡ, ನಾರ್ತ್ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಫಲಿತಾಂಶ ಇನ್ನೂ ಪೂರ್ಣ ಪ್ರಕಟವಾಗಿಲ್ಲ. ಈ ಒಂಬತ್ತು ರಾಜ್ಯಗಳಲ್ಲಿ ಟ್ರಂಪ್ ಐದು ರಾಜ್ಯಗಳಲ್ಲಿ ಮುನ್ನಡೆ ಹೊಂದಿದ್ಧಾರೆ. ಬೈಡನ್ ಅವರು ಅರಿಜೋನಾದಲ್ಲಿ ದೊಡ್ಡ ಮೇಲುಗೈ ಸಾಧಿಸಿದ್ದಾರೆ.
ಆದರೆ, ಎಲ್ಲರ ಕಣ್ಣುಕುಕ್ಕಿರುವುದು ವಿಸ್ಕಾನ್ಸಿನ್ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ಕಾರ್ಯ. ಇವೆರಡು ರಾಜ್ಯಗಳು ಹಾಗೂ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಆಕ್ರಮಗಳು ನಡೆದಿವೆ ಎಂದು ಟ್ರಂಪ್ ದೂರಿದ್ದಾರೆ. ಮಿಷಿಗನ್ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳ ಚುನಾವಣೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಟ್ರಂಪ್ ನಿರ್ಧರಿಸುವ ಸಾಧ್ಯತೆ ಇದೆ. ಹಾಗೆಯೇ, ವಿಸ್ಕಾನ್ಸಿನ್ ರಾಜ್ಯದ ಚುನಾವಣೆಯ ಮರು ಮತ ಎಣಿಕೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.