ಜೂಜಾಟ ನಿಷೇಧಿಸಲು ಪೊಲೀಸ್ ಕಾಯ್ದೆ 1963 ಗೆ ತಿದ್ದುಪಡಿ ಸಿದ್ದತೆ

ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಹಾವಳಿಯಿಂದ ಅನೇಕ ಅವಘಡಗಳು ನಡೆಯುತ್ತಿರುವುದು ರಾಜ್ಯದಲ್ಲಿ ಹೆಚ್ಚಾಗಿವೆ. ಪ್ರಮುಖವಾಗಿ ಯುವಕರು ಹಾದಿ ತಪ್ಪಿ ಭವಿಷ್ಯವನ್ನು ಹಾಳು ಮಾಡಿಕೊಳ್ತಿದ್ದಾರೆ. ಇದೀಗ ಆನ್ಲೈನ್ ಜೂಜಾಟವನ್ನು ತಡೆಗಟ್ಟೋಕೆ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರವು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟವನ್ನು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆ, 1963 ಗೆ ತಿದ್ದುಪಡಿ ತರಲು ಸರ್ವಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಕೆಆರ್‌ಎಸ್ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ವಿವರ ಇಲ್ಲಿದೆ

ಇಂಟರ್ನೆಟ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಅಥವಾ ಇತರೆ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸಲಾಗುವ ಚಟುವಟಿಕೆ ಮೇಲೆ ಹಣ, ಟೋಕನ್‌ಗಳು, ವರ್ಚುವಲ್ ಕರೆನ್ಸಿ ಗಳ ಮೂಲಕ ನಡೆಸುವ ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಗಳಿಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ.

ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ನಿಯಮಗಳನ್ನು ಕೂಡ ಹೊಸ ಮಸೂದೆಯಲ್ಲಿ ಸೇರಿಸಲಾಗುತ್ತಿದೆ.

ಇದನ್ನೂ ನೋಡಿ: ಅನ್ನ ತಿನ್ನುವವರೆಲ್ಲ ರೈತರ ಹೋರಾಟ ಬೆಂಬಲಿಸಬೇಕು | ಚನ್ನರಾಯಪಟ್ಟಣ ಹೋರಾಟಕ್ಕೆ ಸಾಹಿತಿ ಕಲಾವಿದರ ಸಾತ್

Donate Janashakthi Media

Leave a Reply

Your email address will not be published. Required fields are marked *