ಬೆಂಗಳೂರು: ಬೆಂಗಳೂರಿನಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳಿಂದ ದಾಳಿ ಮಾಡಿದಾಗ ಮನೆಯಲ್ಲಿ 42 ಕೋಟಿ ರೂ. ಕಪ್ಪು ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರು ನವೆಂಬರ್-27 ರಂದು ಸಂಜೆ ನಿಧನರಾಗಿದ್ದಾರೆ. ಇವರು ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ ಅವರ ಆಪ್ತ ಸ್ನೇಹಿತರು ಆಗಿದ್ದರು.
ಆರೋಗ್ಯ ತೀವ್ರ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಐಟಿ ರೈಡ್‌ನ ವೇಳೆ ಸುಮಾರು 42 ಕೋಟಿ ರೂ. ಕಂತೆ ಕಂತೆ ಹಣದ ಸಮೇತ ಸಿಕ್ಕಿಬಿದ್ದಿದ್ದ ಅಂಬಿಕಾಪತಿ ರಾಜ್ಯಾದ್ಯಂತ ತೀವ್ರ ಸುದ್ದಿಯಾಗಿದ್ದರು.
ಇದನ್ನೂ ಓದಿ:ರಾಜಕೀಯ ಉದ್ದೇಶವಿಲ್ಲದೆ ಐಟಿ ದಾಳಿ ನಡೆಯುವುದಿಲ್ಲ| ಡಿ.ಕೆ. ಶಿವಕುಮಾರ್
ಈ ವೇಳೆ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದ್ದ 42 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಪ್ರಕರಣದಿಂದ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ತೀವ್ರ ತಿಕ್ಕಾಟವು ಶುರುವಾಗಿತ್ತು. ಇನ್ನು ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅಂಬಿಕಾಪತಿ ಈಗ ದೇಹತ್ಯಾಗ ಮಾಡಿದ್ದಾರೆ.