ಮುಂಬಯಿ: ಮುಖೇಶ್ ಅಂಬಾನಿ ಮನೆ ಬಳಿ ಈಚೇಗೆ ಸ್ಪೋಟಕಗಳು ಒಳಗೊಂಡ ವಾಹನ ಫೆಬ್ರವರಿ 25ರಂದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳಿನಿಂದ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಇಂದು ಮುಂಬಯಿನ ಪೊಲೀಸ್ ಆಯುಕ್ತ ಹುದ್ದೆಯಿಂದ ಅಮಾನತುಗೊಂಡಿದ್ದ ಪರಮ್ ಬೀರ್ ಸಿಂಗ್ ಅವರನ್ನು ವಿಚಾರಣೆ ನಡೆಸಿದೆ.
ಸಚಿನ್ ವಾಝೆ ಮತ್ತು ಇತರ ಮುಂಬಯಿ ಪೊಲೀಸರಿಗೆ ಸಂಬಂಧಪಟ್ಟ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವುದಾಗಿ ಎನ್ಐಎ ತಿಳಿಸಿದೆ.
ಇದನ್ನು ಓದಿ : ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಪರಮ್ ಬೀರ್ ಸಿಂಗ್ ಆರೋಪಿಸಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ನೆನ್ನೆ ರಾತ್ರಿ ಪ್ರಾಥಮಿಕ ತನಿಖೆಗೆ ಆರಂಭಿಸಿತು.
ಇದನ್ನು ಓದಿ : ಭ್ರಷ್ಟಾಚಾರ ಆರೋಪ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ರಾಜೀನಾಮೆ
ಬಾಂಬ್ ಬೆದರಿಕೆಗೆ ಸಂಬಂಧಿಸಿ ಬಂಧನದಲ್ಲಿರುವ ಮುಂಬಯಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರಿಗೆ 16 ವರ್ಷಗಳ ಬಳಿಕ ಮತ್ತೆ ಜವಾಬ್ದಾರಿ ನೀಡಿರುವ ಕುರಿತಾಗಿ ಪರಮ್ ಬೀರ್ ಸಿಂಗ್ ಅವರನ್ನು ಪ್ರಶ್ನಿಸಲಾಗಿದೆ ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಝೆ ಅವರನ್ನು ಅಪರಾಧ ವಿಭಾಗಕ್ಕೆ ಆಯ್ಕೆ ಮಾಡಿರುವುದು ಮತ್ತು ಅವರನ್ನು ನಿಯೋಜಿಸಲಾದ ಪ್ರಕರಣಗಳ ಬಗ್ಗೆಯೂ ಪ್ರಶ್ನಿಸಲಾಯಿತು ಎಂದು ತಿಳಿದು ಬಂದಿದೆ.