ಮೆಡಿಕಲ್ ಶಾಪ್ ಸಿಬ್ಬಂದಿ ಎಡವಟ್ಟು : ಅಮಾಯಕ ರೋಗಿ ಬಲಿ

ಹುಬ್ಬಳ್ಳಿ: ಡಾಕ್ಟರ್ ಆಗಲಿ, ಮೆಡಿಕಲ್ ನವರಾಗಲಿ ಕೊಂಚ ಎಚ್ಚರ ತಪ್ಪಿದರೆ ಅದರಿಂದಾಗುವ ಅಪಾಯ ಅಷ್ಟಿಷ್ಟಲ್ಲ. ಅದು ಪ್ರಾಣಕ್ಕೂ ಕುತ್ತು ಬರುತ್ತದೆ. ಇದೀಗ ಅದಲು ಬದಲು ಮಾತ್ರೆಯಿಂದ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ.

ಹುಬ್ಬಳ್ಳಿಯ ಮೆಡಿಕಲ್ ಶಾಪ್ ಸಿಬ್ಬಂದಿ ಎಡವಟ್ಟಿಗೆ ಹನಮಂತಪ್ಪ ಪಾಟೀಲ (62) ಮೃತಪಟ್ಟಿದ್ದಾರೆ. ಅವರ ಮನೆಯಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ! ಹುಬ್ಬಳ್ಳಿಯ ವೆಲ್‌ನೆಸ್‌ ಫಾರೆವರ್ ಮೆಡಿಕಲ್ ಶಾಪ್‌ನಿಂದ ಇವರು ಔಷಧ ತೆಗೆದುಕೊಂಡದ್ದೇ ಅವರ ಪ್ರಾಣಕ್ಕೆ ಮುಳುವಾಗಿದೆ.

ಘಟನೆಯ ಹಿನ್ನಲೆ : ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹನಮಂತಪ್ಪ ಧಾರವಾಡದ ಮಾನಸಿಕ ತಜ್ಞ ಡಾ.ಪಾಂಡುರಂಗಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಂಡುರಂಗಿ ಅವರ ಆಸ್ಪತ್ರೆಯಲ್ಲಿ ಹನಮಂತಪ್ಪ ಅವರಿಗೆ ನೀಡಬೇಕಾದ ಮಾತ್ರೆ ಇಲ್ಲದ ಕಾರಣ ಏಪ್ರಿಲ್​ 29ರಂದು ಹನುಮಂತಪ್ಪ ಪುತ್ರ ಪ್ರವೀಣ್ ಅಲ್ಲೆ ಇದ್ದ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ಕೇಳಿದಾಗ ಈ ಕಂಪನಿಯದ್ದಿಲ್ಲ, ಬೇರೆ ಕಂಪನಿಯದ್ದು ಇದೆ. ಕೆಲಸ ಮಾಡುತ್ತೆ ಏನು ಸಮಸ್ಯೆ ಆಗಲ್ಲ ಎಂದಿದ್ದಾರೆ.

ಮಗ ಕೂಡ ಮೆಡಿಕಲ್ ನವರು ಹೇಳಿದಂತೆ ಆ ಮಾತ್ರೆಗಳನ್ನೇ ತೆಗೆದುಕೊಂಡು ಹೋಗಿದ್ದಾರೆ. 12 ದಿನ ಅದೇ ಮಾತ್ರೆಗಳನ್ನು ನೀಡಿದ್ದಾರೆ. ಆದರೆ ದಿನನ ಕಳೆದಂತೆ ಅನಾರೋಗ್ಯ ಹೆಚ್ಚಾಗಿದೆ. ಬಳಿಕ ಆಸ್ಪತ್ರೆಗೆ ಅದೇ ವೈದ್ಯರ ಬಳಿ ಕರೆದುಕೊಂಡು ಹೋದಾಗ ಡಿಪ್ರೆಶನ್ ಮಾತ್ರೆ ಬದಲು, ಕ್ಯಾನ್ಸರ್ ಮಾತ್ರೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದೇಹದ ಒಳಗೆ ಸಂಪೂರ್ಣ ಹಾಳಾಗಿದ್ದ ಕಾರಣ ಹನುಮಂತಪ್ಪ ಮೃತಪಟ್ಟಿದ್ದಾರೆ. ಈ ಸಂಬಂಧ ಮೆಡಿಕಲ್ ಶಾಪ್ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೈದ್ಯರು ಬರೆದು ಕೊಡುವ ಔಷಧದ ಚೀಟಿಯನ್ನು ಮೆಡಿಕಲ್‌ ಷಾಪ್‌ನಲ್ಲಿ ತೋರಿಸಿ ಅವರು ಕೊಟ್ಟದ್ದನ್ನು ಹಾಗೆಯೇ ತರುವುದು ಸಾಮಾನ್ಯ. ಅಂಗಡಿಯವರು ಸರಿಯಾಗಿಯೇ ಕೊಟ್ಟಿರುತ್ತಾರೆ ಎಂದು ನಂಬಿ, ಅವರು ಕೊಟ್ಟದ್ದು ಸರಿಯಿದೆಯೇ ಇಲ್ಲವೇ ಎಂದು ನೋಡಲು ಹೋಗುವುದೇ ಇಲ್ಲ. ಕನಿಷ್ಠ ವೈಧ್ಯರಿಗೂ ತೋರಿಸುವುದಿಲ್ಲ. ಮೆಡಿಕಲ್ ಶಾಪ್ ನವರು ಇತರೆ ಕಂಪನಿಗಳ ಮಾತ್ರೆ ಏನೂ ಸಮಸ್ಯೆ ಇಲ್ಲ ಎಂದು ಮನವೊಲಿಸುವ ಕೆಲಸಗಳನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *