ಸುಪ್ರೀಂ ಕೋರ್ಟ್‌: ಮೊಹಮ್ಮದ್ ಜುಬೈರ್ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಮಂಜೂರು

ನವದೆಹಲಿ: ನಾವು ಆತನನ್ನು ಟ್ವೀಟಿಸುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ. ಆತನ ವಾಕ್ ಸ್ವಾತಂತ್ರ್ಯದ ಹಕ್ಕು ಕಸಿಯುವುದಕ್ಕೆ ಸಾಧ್ಯವಿಲ್ಲ. ಆತ ಕಾನೂನಿಗೆ ಉತ್ತರದಾಯಿಯಾಗಿದ್ದಾನೆ. ಸಾಕ್ಷ್ಯಗಳು ಸಾರ್ವಜನಿಕವಾಗಿ ಲಭ್ಯವಿರಲಿದೆ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ ಮೊಹಮ್ಮದ್‌ ಜುಬೈರ್‌ ವಿರುದ್ಧ ದಾಖಲಾಗಿದ್ದ ಎಲ್ಲಾ 6 ಎಫ್‌ಐಆರ್‌ ಪ್ರಕರಣಗಳಿಗೆ ಜಾಮೀನು ಮಂಜೂರು ಮಾಡಿದೆ.

ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದ ನಂತರ ಬಿಡುಗಡೆಯಾಗಲಿದ್ದಾರೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ನೇತೃತ್ವದ ನ್ಯಾಯಪೀಠ ಆದೇಶಿಸಿದೆ. ಇದು ಕಾನೂನಿನ ಒಂದು ಸೆಟ್ ತತ್ವವಾಗಿದೆ ಬಂಧನದ ಅಧಿಕಾರವನ್ನು ಮಿತವಾಗಿ ಅನುಸರಿಸಬೇಕು. ಪ್ರಸ್ತುತ ಪ್ರಕರಣದಲ್ಲಿ ಅವರನ್ನು ನಿರಂತರ ಬಂಧನದಲ್ಲಿ ಇರಿಸಲು ಮತ್ತು ಅಂತ್ಯವಿಲ್ಲದ ಶಿಕ್ಷೆಗೆ ಒಳಪಡಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದೆ.

20,000 ರೂಪಾಯಿಗಳ ಬಾಂಡ್ ಅನ್ನು ಪಟಿಯಾಲಾ ಹೌಸ್ ನ ಸಿಎಂಎಂ ಎದುರು ಹಾಜರುಪಡಿಸಬೇಕು ಹಾಗೂ ಅದನ್ನು ಹಾಜರುಪಡಿಸುತ್ತಿದ್ದಂತೆಯೇ ಅರ್ಜಿದಾರರನ್ನು ಸಂಜೆ 6 ಗಂಟೆ ಒಳಗೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ಉತ್ತರ ಪ್ರದೇಶ ಹಾಗೂ ದೆಹಲಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ಉಲ್ಲೇಖಿತ ಆರೋಪಗಳು ಒಂದೇ ರೀತಿ ಇವೆ. ಮೊಹಮ್ಮದ್‌ ಜುಬೈರ್ ಬಂಧನ ಮುಂದುವರೆಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಗಳೆಲ್ಲವನ್ನು ದೆಹಲಿ ಹೈಕೋರ್ಟಿಗೆ ವರ್ಗಾಯಿಸಿ ಎಂದು ಮೊಹಮ್ಮದ್‌ ಜುಬೇರ್ ಮನವಿ ಮಾಡಿದ್ದರು. ಆರೋಪಿತರ ಮೇಲಿನ ಪ್ರಕರಣದ ಎಲ್ಲ ತನಿಖೆಗಳನ್ನೂ ಉತ್ತರ ಪ್ರದೇಶ ಪೊಲೀಸರಿಂದ ದೆಹಲಿ ಪೊಲೀಸರ ವಿಶೇಷ ವಿಭಾಗಕ್ಕೆ ವರ್ಗಾವಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸೀತಾಪುರ್, ಲಖೀಂಪುರ್ ಖೇರಿ,  ಮುಜಾಫರ್ ನಗರ್ , ಗಾಜಿಯಾಬಾದ್ ನಲ್ಲಿ ತಲಾ  ಒಂದು ಮತ್ತು  ಹಾಥರಸ್ ನಲ್ಲಿ ಎರಡು ಪ್ರಕರಣಗಳು ಮೊಹಮ್ಮದ ಜುಬೇರ್ ವಿರುದ್ಧ ದಾಖಲಾಗಿದೆ.  ಸುದ್ದಿನಿರೂಪಕರ ಬಗ್ಗೆ ಅಣಕವಾಡಿದ,  ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಮತ್ತು ದೇವರ ಬಗ್ಗೆ  ಪ್ರಚೋದನಾತ್ಮಕ ವಿಷಯ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *