ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ?

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಂಪುಟ ವಿಸ್ತರಣೆ ಮುಗಿದಿದ್ದು, ಸಚಿವ ಸ್ಥಾನದ ಜಿದ್ದಾಜಿದ್ದಿಗೆ ತೆರೆ ಬಿದ್ದಿದೆ. ಇಂದು ಎರಡನೇ ಹಂತದಲ್ಲಿ 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಒಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ಒಟ್ಟು 34 ಜನರ ಸರ್ಕಾರದ ಸಂಪುಟ ಸೇರಿದ್ದಾರೆ.

ಇದೀಗ ಮತ್ತೊಂದು ಕುತೂಹಲಕ್ಕೂ ತೆರೆ ಬಿದ್ದಿದ್ದು, ಖಾತೆ ಹಂಚಿಕೆ ಕೂಡ ಅಂತಿಮವಾಗಿದೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ಖಾತೆ ಹಂಚಿಕೆ ಕೂಡ ಬಹುತೇಕ ಅಂತಿಮವಾಗಿದ್ದು, ಯಾವ..ಯಾವ ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿ ಸಿಕ್ಕಿದೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಯಾರಿಗೆ ಯಾವ್ಯಾವ ಜವಾಬ್ದಾರಿ..?

ಸಿದ್ದರಾಮಯ್ಯ -ಹಣಕಾಸು, DPAR ಮತ್ತು ಗುಪ್ತಚರ ಇಲಾಖೆ.

ಡಿ.ಕೆ.ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ

ಡಾ.ಜಿ.ಪರಮೇಶ್ವರ್ -ಗೃಹ ಸಚಿವ

ಹೆಚ್.​ಕೆ.ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ

ಕೆಎಚ್​.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ

ಕೆ.ಜೆ.ಜಾರ್ಜ್​ -ಇಂಧನ ಖಾತೆ ಎಂ.ಬಿ.ಪಾಟೀಲ್ -ಐಟಿ,

ಬಿಟಿ ರಾಮಲಿಂಗಾ ರೆಡ್ಡಿ -ಸಾರಿಗೆ

ಸತೀಶ್ ಜಾರಕಿಹೊಳಿ -ಲೋಕಪಯೋಗಿ

ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್

ಜಮೀರ್ ಅಹ್ಮದ್ ಖಾನ್-ವಸತಿ, ವಕ್ಫ್​​ ಅಂಡ್ ಅಲ್ಪಸಂಖ್ಯಾತ

ಕೃಷ್ಣ ಬೈರೇಗೌಡ -ಕಂದಾಯ ದಿನೇಶ್ ಗಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಲುವರಾಯಸ್ವಾಮಿ -ಕೃಷಿ

ಕೆ.ವೆಂಕಟೇಶ್ -ಪಶುಸಂಗೋಪನೆ

ಹೆಚ್​.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ ಈಶ್ವರ್ ಖಂಡ್ರೆ-ಅರಣ್ಯ ಮತ್ತು ಪರಿಸರ

ಕೆ.ಎನ್.ರಾಜಣ್ಣ-ಸಹಕಾರ

ಶರಣಪ್ಪ ಬಸಪ್ಪ ದರ್ಶಾನಾಪುರ್ -ಸಣ್ಣ ಕೈಗಾರಿಕೆ

ಶಿವನಾಂದ್ ಪಾಟೀಲ್ -ಜವಳಿ ಮತ್ತು ಸಕ್ಕರೆ ಖಾತೆ

ಆರ್​ಬಿ ತಿಮ್ಮಾಪುರ್ -ಅಬಕಾರಿ ಮತ್ತು ಮುಜರಾಯಿ

ಎಸ್​.ಎಸ್.ಮಲ್ಲಿಕಾರ್ಜುನ್ -ಗಣಿ ಮತ್ತು ಭೂವಿಜ್ಞಾನ

ಶಿವರಾಜ್ ತಂಗಡಗಿ -ಹಿಂದುಳಿದ ವರ್ಗಗಳ ಕಲ್ಯಾಣ

ಶರಣ್ ಪ್ರಕಾಶ್ ಪಾಟೀಲ್ -ಉನ್ನತ ಶಿಕ್ಷಣ

ಮಂಕಾಳ್ ವೈದ್ಯ-ಮೀನುಗಾರಿಕೆ ಮತ್ತು ಬಂದರು

ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳೆ ಮತ್ತು ಮಕ್ಕಳ ಕಲ್ಯಾಣ

ರಹೀಂ ಖಾನ್ -ಪೌರಾಡಳಿತ

ಡಿ.ಸುಧಾಕರ್ -ಮೂಲಸೌಕರ್ಯ

ಸಂತೋಷ್ ಲಾಡ್– ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ

ಎನ್​.ಎಸ್​.ಬೊಸೆರಾಜು -ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ

ಭೈರತಿ ಸುರೇಶ್– ನಗರಾಭಿವೃದ್ಧಿ

ಮಧು ಬಂಗಾರಪ್ಪ– ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಎಂ.ಸಿ.ಸುಧಾಕರ್-ವೈದ್ಯಕೀಯ

ಬಿ.ನಾಗೇಂದ್ರ -ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ

ಇದನ್ನೂ ಓದಿ: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಮಾನ ಮನಸ್ಕ ಪಕ್ಷಗಳ ನಾಯಕರು ಭಾಗಿ

 

 

 

Donate Janashakthi Media

Leave a Reply

Your email address will not be published. Required fields are marked *