ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಹೆಚ್ಚಿನ ಹಣ ಮೀಸಲಿಡಿ – ವಿದ್ಯಾರ್ಥಿಗಳ ಆಗ್ರಹ

ವಿಜಯನಗರ: ರಾಜ್ಯ ಬಜೆಟ್ ನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ 30% ಮೀಸಲಿಡಬೇಕು ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಶಾಸಕರರಾದ HR ಗವಿಪ್ಪ ರಿಗೆ SFI ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಬಜೆಟ್

ಈ ಸಂದರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ ವಿಜಯನಗರವು ಹೊಸ ಜಿಲ್ಲೆಯಾಗಿದ್ದು ಇಲ್ಲಿ ಸುಮೂರು 7 ಲಕ್ಷಕ್ಕು ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಪಡೆಯುತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಗತ್ಯ ಕಾಲೇಜುಗಳು ಇಲ್ಲಿದೆ ಹೊರ ರಾಜ್ಯ ಮತ್ತು ಇತರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗುತಿದ್ದಾರೆ. ಬಜೆಟ್

ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆ ಮೂಲ ಸೌಕರ್ಯದಿಂದ ಕುಂಟಿತಗೊಂಡಿವೆ(ವಿಷಯವಾರು ಶಿಕ್ಷಕರ ಕೊರತೆ, ಮತ್ತು ಕುಡಿಯುವ ನೀರು ಮತ್ತು ಶೌಚಾಲಯ, ಆವರಣಗಳಿಲ್ಲ. ಕಟ್ಟಡಗಳ ತೀವ್ರ ದುರಸ್ಥಿ ಇನ್ನಿತರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ಎಲ್.ಕೆ.ಜಿ ಮತ್ತು ಪ್ರೌಢ ಶಿಕ್ಷಣದವರೆಗೆ ವಂತಿಕೆ (ಡೊನೇಷನ್) ಹೆಸರಲ್ಲಿ ವಿದ್ಯಾರ್ಥಿ ಪೋಷಕರಿಂದ ಹಣ ವಸೂಲಿಗೆ ನಿಂತಿವೆ ಇದನ್ನು ಸರ್ಕಾರ ತಡೆಯುವುದು ಜರೂರಿದೆ ಎಂದು ಆಗ್ರಹಸಿಲಾಯಿತು. ಬಜೆಟ್

ಇದನ್ನೂ ಓದಿ: ನವದೆಹಲಿ| ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ

SFI ಜಿಲ್ಲಾ ಸಹಕಾರ್ಯದರ್ಶಿ ಪವನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಅತಿಹೆಚ್ಚು ಗ್ರಾಮೀಣ ಪ್ರದೇಶದ ಬಡರೈತ, ದಲಿತ ಮಕ್ಕಳು ಶೇ.50ರಷ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಹೆಣಗುತ್ತಿದ್ದಾರೆ.

ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗಾಗಿ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಈ ಹಿಂದೆ ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ, ಶಾಸಕರವರಿಗೆ, ಹಾಗೂ ಜಿಲ್ಲಾಧಿಕಾರಿಗಳಾದ ತಮಗೆ ಮನವಿಯನ್ನು ನೀಡಿದ್ದೇವೆ. ಅದರಭಾಗವಾಗಿ ಇಂದಿರಾ ಕ್ಯಾಂಟೀನ್ ಮತ್ತು ಸರ್ಕಾರಿ ಕಾನೂನು ಪದವಿ ಕಾಲೇಜು ಮುಂಜೂರು ಮಾಡಲಾಗಿದೆ ಇದಕ್ಕೆ SFI ಸಂಘಟನೆಯು ಸ್ವಾಗತಿಸುತ್ತಿದೆ ಎಂದು ಹೇಳಿದರು.

ತಾಲೂಕು ಅಧ್ಯಕ್ಷರಾದ ಲಕ್ಷ್ಮಿ ಮಾತನಾಡಿ ತುರ್ತಾಗಿ ಹೊಸಪೇಟೆ ನಗರದಲ್ಲಿ ಆರಂಭಿಸಬೇಕು ಮತ್ತು ಇನ್ನು ಉಳಿದಂತ ಬೇಡಕೆಗಳನ್ನು ಈ ಮನವಿ ಪತ್ರದಲ್ಲಿ ತಿಳಿಸಲಾಗಿದೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಶಾಸಕರ ವ್ಯಪ್ತಿಯಲ್ಲಿ ಬರವಂತ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಎಸ್ಎಫ್ಐ ಮನವಿ ಮಾಡಿದೆ.

ಬೇಡಿಕೆಗಳು

1. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾಲೇಜುಗಳ ಸಮೀಪದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೇಗನೆ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು.

2. ಸರ್ಕಾರಿ ಕಾನೂನು ಪದವಿ ಕಾಲೇಜು ಅತೀ ಬೇಗನೆ ಪ್ರಾರಂಭಿಸಬೇಕು.

3. ಸರ್ಕಾರಿ ಮೆಡಿಕಲ್ ಮತ್ತು ಸರ್ಕಾರಿ ಇಂಜಿನಿಯಾರಿಂಗ್ ಪದವಿ ಕಾಲೇಜು ಮಂಜೂರು ಮಾಡಬೇಕು.

4. ಸರ್ಕಾರಿ ಬಿ.ಎಡ್, ಬಿಪಿ.ಎಡ್ ಮತ್ತು ಸ್ನಾತಕೊತ್ತರ ಪದವಿ ಕೇಂದ್ರ ಆರಂಭಿಸಬೇಕು.

5. ರಾಜ್ಯದಲ್ಲಿ 9 ಹೊಸ ವಿಶ್ವ ವಿದ್ಯಾಲಯ ಮುಚ್ಚಲು ಮುಂದಾಗಿರುವ ಕ್ರಮವನ್ನು ಎಸ್ ಎಫ್ ಐ ಖಂಡಿಸುತ್ತದೆ ಮತ್ತು ಸರ್ಕಾರವು ಕೂಡುಲೆ ಈ ಆದೇಶವನ್ನು ಇಂಪಡೆಯಬೇಕು.

6. ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು.

7. ರಾಜ್ಯದ 8ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕು.

8. ಹಾಸ್ಟೆಲ್ ವಿದ್ಯಾರ್ಥಿಗಳ ಭತ್ಯವನ್ನು 3,000 ಕ್ಕೆ ಹೆಚ್ಚಿಸಬೇಕು.

9. ಹೊಸಪೇಟೆ ನಗರದಲ್ಲಿ ಬಸ್ ಸ್ಟಾಂಡ್ ನಿಂದ ಕಾಲೇಜುಗಳಿಗೆ ತಲುಪಲು ಮತ್ತು SC 3, 1 ಬಾಲಕರ ವಸತಿ ನಿಲಯದಿಂದ 4,5 ಕಿಲೋಮೀಟರ್ ದೂರ ಇದೆ ಹಾಗೂ SSLC & PUC ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದೆ ಹಾಗಾಗಿ ತಕ್ಷಣವೇ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊಸಪೇಟೆ ನಗರದಲ್ಲಿ ಬಸ್ ಬಿಡುಬೇಕು.

10. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ 30% ಮಿಸಲಿಡಿಬೇಕು.

11. ಶಾಲಾ ಕಾಲೇಜುಗಳಲಿ ಖಾಲಿ ಇರುವ ಶಿಕ್ಷಕ ಮತ್ತು ತಾಂತ್ರಿಕ ಉದ್ದೆಗಳನ್ನು ಭರ್ತಿ ಮಾಡಬೇಕು.

12. ಶಾಲೆ ಕಾಲೇಜುಗಳ ಕಟ್ಟಡ ದುರಸ್ತಿ ಗೊಂಡಿವೆ. ಅವುಗಳನ್ನು ತೆರವು ಮಾಡಿ, ಆಧುನಿಕ ತಂತ್ರಜ್ಞಾನ ಅಳವಡಿಸಿದ ಕಟ್ಟಡ ನಿರ್ಮಾಣ ಮಾಡಬೇಕು.

13. ಡಿಗ್ರಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಬೇಕು.

14. GNM ಸರ್ಕಾರಿ ಕಾಲೇಜು ತೆಗೆಯಬೇಕು.

15. ಸಂಶೋಧನಾ ವಿದ್ಯಾರ್ಥಿಗಳಿಗೆ 25000 ಮಾಸಿಕ ಆರ್ಥಿಕ ಸಹಾಯ ದನ ನೀಡಬೇಕು.

ಇದನ್ನೂ ನೋಡಿ: ನಶಿಸಿಹೋಗುತ್ತಿರುವ ಕನ್ನಡ ಶಾಲೆಗಳು – ಪುರುಷೋತ್ತಮ ಬಿಳಿಮಲೆ ಕಳವಳJanashakthi Media

Donate Janashakthi Media

Leave a Reply

Your email address will not be published. Required fields are marked *