ದೆಹಲಿ | ವಿಜಯದ ದಿಕ್ಕಿನಲ್ಲಿ ಎಡ-ವಿದ್ಯಾರ್ಥಿ ಒಕ್ಕೂಟ

ದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ವಿದ್ಯಾರ್ಥಿ ಸಂಘದ ಚುನಾವಣೆ ಮತ್ತೆ ಕಾವೇರಿದೆ. ಈ ಬಾರಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ AISA (ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್), SFI (ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಮತ್ತು DSF (ಡೆಮಾಕ್ರಟಿಕ್ ಸ್ಟುಡೆಂಟ್ಸ್ ಫೆಡರೇಷನ್) ಮೈತ್ರಿಕೂಟ ABVPಗೆ ಬಹು ದೊಡ್ಡ ಸವಾಲನ್ನೊಡ್ಡಲಿದೆ.  ದೆಹಲಿ

ಇದನ್ನೂ ಓದಿ : ಕಡುಬಡತನದಿಂದ ಮುಕ್ತವಾದ ಕೇರಳ

ಹಿಂದಿನ ಚುನಾವಣೆಯಲ್ಲಿ AISA-DSF ಬಣ ಮತ್ತು SFI-BAPSA ಬಣ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಎಡ ವಿದ್ಯಾರ್ಥಿ ಸಂಘಟನೆಯ ಮತಗಳು ವಿಭಜನೆಗೊಂಡ ಪರಿಣಾಮ ABVPಗೆ ಲಾಭದಾಯಿಕವಾಗಿತ್ತು.

ಎಡ ಒಕ್ಕೂಟದ ಅಭ್ಯರ್ಥಿಗಳ ಪಟ್ಟಿಯಲ್ಲಿ, ಐಸಾ (AISA) ದಿಂದ ಅದಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದಾರೆ,  ಎಸ್ ಎಫ್ ಐ (SFI)ನಿಂದ ಗೋಪಿಕಾ ಉಪಾಧ್ಯಕ್ಷ ಸ್ಥಾನಕ್ಕೆ,
ಡಿಎಸ್ಎಫ್ (DSF) ನಿಂದ ಸುನಿಲ್ ಯಾದವ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಐಸಾದಿಂದ (AISA) ದಾನಿಶ್ ಅಲಿ ಸಹಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿ ಯಲ್ಲಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ JNU ಕ್ಯಾಂಪಸ್‌ನಲ್ಲಿ ಎಬಿವಿಪಿ (ABVP) ಕೇಂದ್ರ ಸರ್ಕಾರದ ಬಲದಿಂದ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಎಬಿವಿಪಿ (ABVP) 23 ಕೌನ್ಸಿಲರ್ ಸ್ಥಾನಗಳನ್ನು ಗೆದ್ದಿತ್ತು , ಇದು ಎಬಿವಿಪಿ ಇತಿಹಾಸದಲ್ಲೇ ದೊಡ್ಡ ಸಾಧನೆ. ಕಳೆದ ಬಾರಿ ಸಹ ಕಾರ್ಯದರ್ಶಿ ಸ್ಥಾನದಲ್ಲಿ ಕೂಡ ಎಬಿವಿಪಿ (ABVP) ವಿಜಯಗಳಿಸಿತ್ತು.

ಈ ಕಾರಣ, ಕಳೆದ ವರ್ಷದ ಹಿನ್ನಡೆಯ ಪರಿಣಾಮ, ಈ ಬಾರಿ ಗಟ್ಟಿಯಾದ ಎಡ-ಒಕ್ಕೂಟ. ರಚನೆಯಾಗಿದೆ. ಹಾಸ್ಟೆಲ್ ಸಮಸ್ಯೆ, ಶುಲ್ಕ ಏರಿಕೆ ವಿರೋಧದ ಹೋರಾಟಗಳೆಲ್ಲ ಸಕ್ರಿಯ ಪಾತ್ರದ ಕಾರಣದಿಂದ ಬಹುಸಂಖ್ಯಾತ ವಿದ್ಯಾರ್ಥಿವಲಯದಲ್ಲಿ ಎಡಪಂಥೀಯರ ಪರವಾಗಿ ಅಲೆಯಿದೆ.

ಅಂತಿಮವಾಗಿ ಎಬಿವಿಪಿ (ABVP) ಮತ್ತು ಎಡ ಒಕ್ಕೂಟದ ನಡುವೆ ನಡೆಯತ್ತಿರುವ ಈ ಮಹತ್ವದ ಚುನಾವಣೆ JNU ಕ್ಯಾಂಪಸ್‌ನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಇದನ್ನೂ ನೋಡಿ : ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025

Donate Janashakthi Media

Leave a Reply

Your email address will not be published. Required fields are marked *