ಸ್ಥಳೀಯ ಸಂಸ್ಥೆ ಚುನಾವಣೆ: ಮೈತ್ರಿಕೂಟ ರಚನೆಗೆ ಪ್ರಯತ್ನ – ರವಿಕೃಷ್ಣಾರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮೈತ್ರಿಕೂಟ ರಚನೆಯಾಗಿದ್ದೂ, ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಹ ಮೈತ್ರಿಕೂಟ ರಚನೆಯಾಗುವ ಸುಳಿವು ಸಿಕ್ಕಿದೆ. J.C.B (JDS, Congress, BJP) ಪಕ್ಷಗಳನ್ನು ಹೊರತುಪಡಿಸಿದ ಮೈತ್ರಿಕೂಟ ಇದಾಗಿರಲಿದೆ.

ರವಿ ಕೃಷ್ಣಾರೆಡ್ಡಿ, ಗೌರವಾಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದೂ, ನಮ್ಮ ರಾಜ್ಯದಲ್ಲಿ ಸಕ್ರಿಯವಾಗಿರುವ JDU, ಆಮ್ ಆದ್ಮಿ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷ ಸೇರಿದಂತೆ J.C.B.ಯೇತರ ಪಕ್ಷಗಳ ರಾಜ್ಯ ಘಟಕಗಳ ಮುಖಂಡರ ಅವಗಾಹನೆಗೆ ಎಂದು ಪ್ರಮುಖ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ.

ಫೇಸ್‌ಬುಕ್ ಪೋಸ್ಟ್ ವಿವರ

ಮಾನ್ಯರೇ, ಇನ್ನು 3-4 ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಬೆಂಗಳೂರಿನ GBA ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆ ಮತ್ತು TP/ZP ಚುನಾವಣೆಗಳು ಬರಲಿವೆ. ಈ ಸಂದರ್ಭದಲ್ಲಿ ನಮ್ಮ KRS ಪಕ್ಷವೂ ಸೇರಿದಂತೆ ಬಹುತೇಕ J.C.B.ಯೇತರ ಪಕ್ಷಗಳಿಗೆ ಎಲ್ಲಾ ಕಡೆಯೂ ಅಭ್ಯರ್ಥಿಗಳನ್ನು ನಿಲ್ಲಿಸುವುದು ಕಷ್ಟಸಾಧ್ಯ ಮತ್ತು ಚುನಾವಣಾ ಅಕ್ರಮಗಳನ್ನು ನಿಲ್ಲಿಸದೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದೂ ಅಸಾಧ್ಯ.

ಇದನ್ನೂ ಓದಿ: ಬೆಂಗಳೂರು | ಡಿಸೆಂಬರ್ 23ರಿಂದ 28ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ವರ್ಣ ಚಿತ್ರಗಳ ಸ್ವರ ಮೇಳ

ಈ ಹಿನ್ನೆಲೆಯಲ್ಲಿ ನಾವು (KRS ಪಕ್ಷ) ನೀವೆಲ್ಲರೂ ಸೇರಿ ಯಾಕೆ ಚುನಾವಣಾಪೂರ್ವ ಒಕ್ಕೂಟ ಮಾಡಿಕೊಂಡು ಜಂಟಿಯಾಗಿ ಹೋರಾಟ/ ಅಭಿಯಾನಗಳನ್ನು ರೂಪಿಸಿಕೊಂಡು ಚುನಾವಣೆಗೆ ಸಿದ್ಧವಾಗಬಾರದು ಮತ್ತು ಜನರಿಗೆ ಪರ್ಯಾಯವನ್ನು ನೀಡಬಾರದು? ಎಂದು ರವಿಕೃಷ್ಣಾರೆಡ್ಡಿ ಪ್ರಶ್ನಿಸಿದ್ದಾರೆ.

ದಯವಿಟ್ಟು ಈ ಕುರಿತಾಗಿ ಯೋಚಿಸಿ. ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ನಾವೊಬ್ಬರೇ ಬದಲಾಯಿಸಲು ಸಾಧ್ಯವಿಲ್ಲ ಮತ್ತು ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಪ್ರಾಮಾಣಿಕವಾಗಿ ಹೋರಾಡುತ್ತಿರುವವರು ನಾವೊಬ್ಬರೇ ಅಲ್ಲ ಎನ್ನುವ ಅರಿವಿನಿಂದಲೇ, ಇಂತಹ ಪ್ರಯತ್ನವನ್ನು ನಾವೆಲ್ಲರೂ ಸೇರಿ ಯಾಕೆ ಮಾಡಬಾರದು ಎಂದು 2022ರಲ್ಲಿಯೇ ಅತ್ಯಂತ ಗೌರವಪೂರ್ವಕವಾಗಿ KRS ಪಕ್ಷವು ತಮ್ಮೆಲ್ಲರನ್ನೂ JDU ಪಕ್ಷದ ಮಹಿಮಾ ಪಟೇಲರ ಜೊತೆಗೂಡಿ ಸಮಾಲೋಚನೆಗೆ ಕರೆದಿತ್ತು ಮತ್ತು ಆಗ ನೀವುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಿರಿ. ಅದರೆ ಕಾರಣಾಂತರಗಳಿಂದ ಒಕ್ಕೂಟವಾಗಿ ಸ್ಪರ್ಧಿಸೋಣ ಎನ್ನುವ ವಿಚಾರವಾಗಿ ನೀವುಗಳು ಮುಂದುವರೆಯಲಿಲ್ಲ ಎಂದು ಹೇಳಿದ್ದಾರೆ.

ಈಗ ಮತ್ತೊಮ್ಮೆ ಅಂತಹ ಸಂದರ್ಭ ಮತ್ತು ಅವಕಾಶ ಬಂದಿದೆ ಮತ್ತು ಇದು ರಾಜ್ಯದ ಜನತೆಗೂ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮನ್ನು ನಾವು ಇಷ್ಟರಲ್ಲಿಯೇ ಅಧಿಕೃತವಾಗಿ ಸಂಪರ್ಕಿಸಿ ಮಾತನಾಡಲಿದ್ದೇವೆ. ದಯವಿಟ್ಟು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಎಂದು ಈ ಮೂಲಕ ಸಾರ್ವಜನಿಕವಾಗಿ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಬನ್ನಿ, ನಾವೆಲ್ಲರೂ ನಮ್ಮ ಪ್ರತ್ಯೇಕ ಅಸ್ಮಿತೆಗಳನ್ನು ಉಳಿಸಿಕೊಂಡೇ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಜೊತೆಗೂಡಿ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡೋಣ; ನಾಡಿನ ಜನರ ಹಿತಕ್ಕಾಗಿ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. ವಂದನೆಗಳು ಎಂದು ರವಿಕೃಷ್ಣಾರೆಡ್ಡಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಚುನಾವಣೆಗೆ ದಿನಗಣನೆ: ಕಾಂಗ್ರೆಸ್ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು 5 ನಗರ ಪಾಲಿಕೆಯಾಗಿ ಬದಲಾವಣೆ ಮಾಡಿ, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಎಂದು ಮಾಡಿದೆ. 369 ವಾರ್ಡ್‌ಗಳಿದ್ದು, ಚುನಾವಣೆ ನಡೆಸಬೇಕಿದೆ.

ರಾಜ್ಯದ ವಿವಿಧ ತಾಲೂಕು, ಜಿಲ್ಲಾ ಪಂಚಾಯಿತಿಗಳ ಅಧಿಕಾರಾವಧಿ ಪೂರ್ಣಗೊಂಡಿದ್ದು, ಚುನಾವಣೆ ನಡೆಯಬೇಕು. ಅಲ್ಲದೇ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆಗಳಿಗೆ ಸಹ ಚುನಾವಣೆ ನಡೆಯಬೇಕು.

ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಸ್ತಿತ್ವದಲ್ಲಿದೆ. ಎರಡೂ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಬಹುದು. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವ ಕಾರಣ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ.

ಇದನ್ನೂ ನೋಡಿ: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಸ್ಥಿತಿಗತಿಯೇನು ಸಚಿವರೇ? Janashakthi Media

Donate Janashakthi Media

Leave a Reply

Your email address will not be published. Required fields are marked *