ಚಿಕ್ಕಮಗಳೂರು : ದಲಿತ ಚಾಲಕನೊಬ್ಬನನ್ನು ಜಾತಿಯಿಂದ ನಿಂದಿಸಿ ಆತನ ಮೇಲೆ ಹಲ್ಲೆ ಮಾಡಿರುವ ಘಟನೆಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರು ಮರಡಿ ಗ್ರಾಮದ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ. ಈ ಕೃತ್ಯವನ್ನು ಖಂಡಿಸಿರುವ ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಗೊಳಗಾದ ಜೆಸಿಬಿ ಡ್ರೈವರ್ ಮಾರುತಿ ಎಂಬುವವನನ್ನು ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ದಲಿತ
ಸೋಮವಾರ ಜ.1 ರಂದು ಸವರ್ಣೀಯರ ಬಡಾವಣೆಯಲ್ಲಿ ಜೆಸಿಬಿ ಮೂಲಕ ಮನೆ ಕೆಡವುವ ಕೆಲಸ ಮಾಡುವ ವೇಳೆ ಇನ್ನೊಂದು ಸಮುದಾಯವರು ಬಂದು ನನ್ನ ಜಾತಿ ಯಾವುದು ಎಂದು ಕೇಳಿದರು. ನಾನು ದಲಿತ ಜಾತಿ ಎಂದು ಗೊತ್ತಾದ ಮೇಲೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಗ್ರಾಮಕ್ಕೆ ಬಂದಿದ್ದಕ್ಕೆ ದಂಡವನ್ನೂ ವಸೂಲಿ ಮಾಡಿದ್ದಾರೆ ಎಂದು ಚಾಲಕ ಮಾರುತಿ ದೂರಿದ್ದಾರೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಗ್ರಾಮದಲ್ಲಿ ಡಿಎಸ್ಎಸ್ ಸಂಘಟನೆಯವರು ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಎಂ.ಕರಿಯಣ್ಣ, ರಾಜ್ಯ ಮಾದಿಗ ಸಮಾಜದ ಗೌರವಾಧ್ಯಕ್ಷ ಓಂಕಾರಪ್ಪ, ಸಂಘಟನಾ ಕಾರ್ಯದರ್ಶಿ ರಾಜು, ಕಡೂರು ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪ್ರಮೋದ್, ಪದಾಧಿಕಾರಿಗಳಾದ ಯತೀಶ್, ನಂಜುಂಡ, ಹನುಮಂತಪ್ಪ, ನಾಗರಾಜ್, ಗೋವಿಂದರಾಜು, ಹರೀಶ್, ಅಭಿ, ಪ್ರದೀಪ್, ಪ್ರಮುಖರಾದ ಕೆ.ನಾಗರಾಜ್, ಬಾಲರಾಜ್ ಮತ್ತಿತರರಿದ್ದರು.
ಇದನ್ನೂ ಓದಿ : ಬಿಜೆಪಿ ನಾಯಕನ ಭೂ ಕಬಳಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದ ವೃದ್ಧ ದಲಿತ ರೈತರಿಬ್ಬರಿಗೆ ಇಡಿ ಸಮನ್ಸ್!
ಡಿಎಚ್‌ಎಸ್ ಖಂಡನೆ : ಜೆಸಿಬಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮಾರುತಿಗೆ ಜಾತಿ ತಾರತಮ್ಯ ಮಾಡಿ ಹಲ್ಲೆ ನಡೆಸಿರುವುದು ಹಾಗೂ ದಂಡ ವಿಧಿಸಿರುವುದನ್ನು ದಲಿತ ಹಕ್ಕುಗ ಸಮಿತಿ ಖಂಡಿಸುತ್ತದೆ ಎಂದು ರಾಜ್ಯ ಮುಖಂಡ ಎನ್. ರಾಜಣ್ಣ ತಿಳಿಸಿದ್ದಾರೆ.
ಈ ಕೂಡಲೆ, ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿಕೊಟ್ಟು ದೌರ್ಜನ್ಯ ನಡೆಸಿದ ಎಲ್ಲರನ್ನು ಬಂಧಿಸಬೇಕು. ಮಾರುತಿ ಬಳಿ ಇದ್ದ ಹಣವನ್ನು ಕಸಿದುಕೊಂಡು ಜಾತಿ ನಿಂದನೆ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕು, ಆತನಿಗೆ ಕೂಡಲೇ ಪರಿಹಾರ ನೀಡಿ ಮುಂದೆ ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕೆಂದು ರಾಜಣ್ಣ ಆಗ್ರಹಿಸಿದ್ದಾರೆ. ದಲಿತ
ಈ ವಿಡಿಯೋ ನೋಡಿ : ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? ಅಭಿಮಾನದ ಅತಿರೇಕವನ್ನು ಮಾರುಕಟ್ಟೆಯಾಗಿಸಿದ ಕ್ರಿಕೆಟ್