ಬೆಂಗೂರು: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ಸಮಿತಿಯು ಅಲಹಾಬಾದ್ ಹೈಕೋರ್ಟ್ ನ ಸನ್ಮಾನ್ಯ ನ್ಯಾಯಾಧೀಶರಾದ ಶ್ರೀ ರಾಮಮನೋಹರ ರಾಮಾಯಣ ಮಿಶ್ರಾ ಪೋಕ್ಸೋ ಕಾಯ್ದೆಗೆ ಸಂಬಂಧಪಟ್ಟಂತೆ 11 ವರ್ಷದ ಬಾಲಕಿಯೊಬ್ಬಳ ಲೈಂಗಿಕ ದೌರ್ಜನ್ಯ ಕುರಿತು ನೀಡಿದ ತೀರ್ಪನ್ನು ಕಂಡು ಆಘಾತ ವ್ಯಕ್ತಪಡಿಸುವುದಲ್ಲದೆ ಸದರಿ ತೀರ್ಪು ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷೆ ಡಾ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್
ಇಂಥ ತೀರ್ಪುಗಳು ಬಲತ್ಕಾರಿಗಳನ್ನು ಉತ್ತೇಜಿಸುತ್ತವೆ ಅಲ್ಲದೆ ಮಹಿಳೆಯರು ಮತ್ತು ಮಕ್ಕಳನ್ನು ಅಸುರಕ್ಷಿತ ವಲಯಕ್ಕೆ ದೂಡುತ್ತವೆ. ಮಹಿಳೆಯರ ರಕ್ಷಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹೈಕೋರ್ಟ್
11 ವರ್ಷದ ಹೆಣ್ಣುಮಗುವನ್ನು ಅವಳ ಮನೆಗೆ ಮುಟ್ಟಿಸುವ ನೆಪದಲ್ಲಿ ಬಲತ್ಕಾರಿ ದುಷ್ಟನೊಬ್ಬ ಆ ಮಗುವನ್ನು ಪಕ್ಕದ ಹುದುಲಿಗೆ ಕರೆದುಕೊಂಡು ಹೋಗಿ ಮುಟ್ಟಬಾರದ ಅಂಗವನ್ನು ಮುಟ್ಟುತ್ತ, ಮಗುವಿನ ಪೈಜಾಮದ ಲಾಡಿಯನ್ನು ಬಿಚ್ಚುತ್ತ ಅಸಹ್ಯವಾಗಿ ವರ್ತಿಸುವಷ್ಟರಲ್ಲಿ ಮಗು ಜೋರಾಗಿ ಕಿರುಚಿಕೊಂಡಾಗ ಅವಳ ಸಂಬಂಧಿಕರಾದ ದಾರಿಹೋಕರು ಚೀರುವಿಕೆಯನ್ನು ಆಲಿಸಿ ದುಷ್ಕರ್ಮಿಗಳನ್ನು ಬೆನ್ನಟ್ಟಿಸಿಕೊಂಡು ಹೋಗಿದ್ದರಿಂದ ಅವರು ಓಡಿ ಹೋಗಿದ್ದಾರೆ ಎಂದರು.
ಇದನ್ನೂ ಓದಿ: ಕಾಡುವ ವಲಸಿಗ ಫಿಲಂಗಳು -2 : “ದಿ ಪಾರ್ಟಿ ಈಸ್ ಓವರ್” ಮತ್ತು “ಸಾಮಿಯ”
ತಕ್ಷಣವೇ ಕಾಸಗಂಜ್ ಟ್ರಾಯಲ್ ಕೋರ್ಟ್ ನಲ್ಲಿ ದುಷ್ಕರ್ಮಿಗಳ ವಿರುದ್ಧ ಪೋಕ್ಸೋ ಕಾಯ್ದೆಯನ್ನು ಹೇರಲಾಯಿತ್ತಾದರೂ ಅಲಹಾಬಾದ್ ಉಚ್ಚ ನ್ಯಾಯಾಲಯ ಸದರಿ ಕೇಸ್ ನ್ನು ತಿರುಗು ಮುರುಗು ಮಾಡಿದ್ದಲ್ಲದೆ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಿದೆ. ಅದು ತನ್ನ ತೀರ್ಪಿನಲ್ಲಿ ಸ್ತನ ಹಿಸುಕುವುದು ಅಥವಾ ಪೈಜಾಮಾದ ಲಾಡಿ ಬಿಚ್ಚುವುದನ್ನು ಬಲತ್ಕಾರ ಎಂದು ಪರಿಗಣಿಸಲಾಗದು ಎಂದು ಹೇಳಿದೆಯಲ್ಲದೆ ಪೋಕ್ಸೋ ಕಾಯ್ದೆಗೆ ಒಳಪಡಿಸಲು ಸಮುಚಿತ ಆಧಾರಗಳು ಇಲ್ಲ. ಆದ್ದರಿಂದ ಸದರಿ ಕೇಸ್ ನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ದಾಖಲಿಸದೆ ಲೈಂಗಿಕ ಕಿರಕುಳ ಮಾತ್ರವೆಂದು ಪರಿಗಣಿಸಬೇಕು ಎಂದು ಹೇಳಿದೆ. ಹೈಕೋರ್ಟ್
ನಿರ್ಭಯ ಪ್ರಕರಣದ ನಂತರ ಮಹಿಳಾ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರ ಸಮರಧೀರ ಹೋರಾಟದ ತರುವಾಯ ರಚನೆಯಾದ ಜೆ.ಎಸ್ ವರ್ಮಾ ಸಮಿತಿಯು ಅತ್ಯಾಚಾರದ ಪರಿಭಾಷೆಯನ್ನು ನಿರ್ದುಷ್ಟಗೊಳಿಸಿದೆ. ವರ್ಮಾ ಸಮಿತಿಯ ಶಿಫಾರಸ್ಸಿನಲ್ಲಿ ಮೆಜಿಸ್ಟ್ರೇಟ್ ಇದಿರುನಲ್ಲಿ ಅಪ್ರಾಪ್ತ ಬಾಲಕಿಯರ ಹೇಳಿಕೆಯು ಸಂಪೂರ್ಣ ಸಾಕ್ಷ್ಯವೆಂದು ಪರಿಗಣಿಸಬೇಕು ಎಂದಿದೆ.
ಮಾನ್ಯ ಉಚ್ಚತಮ ನ್ಯಾಯಾಲಯವು ಕೂಡ ತನ್ನೊಂದು ತೀರ್ಪಿನಲ್ಲಿ ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಗಳನ್ನು ದುರುದ್ದೇಶದಿಂದ ಸ್ಪರ್ಶಿಸುವುದು ಕೂಡ ಬಲತ್ಕಾರವೆಂದೇ ಪರಿಗಣಿಸಬೇಕು ಎಂದು ಹೇಳಿದೆ. ಸುಪ್ರೀಂಕೋರ್ಟ್ ತತ್ಸಂಬಂಧಿ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನ ತೀರ್ಪನ್ನು ಬದಲಾಯಿಸಿತ್ತು ಎಂದರು.
ಹೀಗಿರುವಾಗಲೂ ಅಲಹಾಬಾದ ಹೈಕೋರ್ಟ್ ಸಿಂಗಲ್ ಬೆಂಚಿನ ಈ ತೀರ್ಪು ಪ್ರಜ್ಞಾವಂತರನ್ನು ದಿಗ್ಭ್ರಮೆಗೊಳಿಸಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂಥ ತೀರ್ಪುಗಳು ಬಲತ್ಕಾರಿಗಳಿಗೆ ಕೆಟ್ಟ ರೀತಿಯಲ್ಲಿ ಕುಮ್ಮಕ್ಕು ನೀಡುತ್ತವೆ.
ಜನವಾದಿ ಮಹಿಳಾ ಸಂಘಟನೆಯು ಸದರಿ ತೀರ್ಪನ್ನು ಉಗ್ರವಾಗಿ ಖಂಡಿಸುತ್ತದೆ ಅಲ್ಲದೆ ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸ್ ನ್ನು ಕೈಗೆತ್ತಿಕೊಂಡು ಟ್ರಯಲ್ ಕೋರ್ಟ್ ನೀಡಿದ ತೀರ್ಪನ್ನು ಉರ್ಜಿತಗೊಳಿಸಿ ಬಲತ್ಕಾರಿಗಳಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತದೆ. ಇಂಥ ಮಹಿಳಾ ವಿರೋಧಿ ಹಾಗೂ ವಿವೇಚನಾರಹಿತ ತೀರ್ಪುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media