ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.
ಸನ್‌ಫ್ಲವರ್ ರಿಫೈನ್ಡ್ ಆಯಿಲ್ ದರ 200 ರೂ.ಗಳ ಗಡಿ ಮುಟ್ಟಿದ್ದು, ಹೋಟೆಲ್ ಗಳಲ್ಲಿ ಪೂರಿ, ಚಪಾತಿ, ಪಲ್ಯ, ವಡೆ, ಬೋಂಡ, ಬಜ್ಜಿ, ಕಬಾಬ್, ಚೈನೀಸ್ ಫುಡ್ ಸೇರಿ ಹಲವು ವೆಜ್-ನಾನ್‌ವೆಜ್ ಪದಾರ್ಥಗಳನ್ನು ತಯಾರಿಸಲು ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ, ಏಪ್ರಿಲ್ 1 ರಿಂದ ಊಟ, ತಿಂಡಿಯ ದರ ಏರಿಕೆ ಮಾಡುವ ಸಂಬಂಧ ಹೋಟೆಲ್ ಮಾಲೀಕರ ಸಂಘವು ಸಭೆ ನಡೆಸಿ ತೀರ್ಮಾನ ಕೈಗೊಂಡಿದೆ. ಇಂದಿನ ಖಾದ್ಯ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಏಪ್ರಿಲ್ 1 ರಿಂದ ಏರಿಕೆಯಾಗಲಿದೆ ಎಂದು ಹೋಟೆಲ್ ಮಾಲಿಕರು ತಿಳಿಸಿದ್ದಾರೆ.
ಇದನ್ನೂ ಓದಿ : 7ನೇ ಬಾರಿ ಮತ್ತೆ ದರ ಏರಿಕೆ; ಬೆಂಗಳೂರಿನಲ್ಲಿ ರೂ.105ಕ್ಕೆ ಪೆಟ್ರೋಲ್ ದರ…!
ತಿಂಡಿಯ ದರ ಎಷ್ಟೆಷ್ಟಿತ್ತು.. ಈಗ ಎಷ್ಟಾಗುತ್ತೆ?
ಮಸಾಲೆ ದೋಸೆ 75 ರಿಂದ 80 ರೂ. ಏರಿಕೆ
ಇಡ್ಲಿ, ವಡೆ 40 ರೂ. ರಿಂದ 45 ರೂ.ಗೆ ಏರಿಕೆ
ಕಾಫಿ, ಟೀ ಬೆಲೆ 15 ರಿಂದ 20 ರೂ.ಗೆ ಏರಿಕೆ
ಚೌಚೌ ಬಾತ್ 70 ರೂ. 75 ರೂ. ಏರಿಕೆ
ಸೌಥ್ ಇಂಡಿಯನ್ ಊಟ 95 ರೂ. ಯಿಂದ 100 ರೂ.
ರೈಸ್ ಬಾತ್ 40 ರಿಂದ 50 ರೂ.ಗೆ ಹೆಚ್ಚಳ
ರವಾ ಇಡ್ಲಿ 45 ರೂ. ಯಿಂದ 50ಕ್ಕೆ ಏರಿಕೆ
ಅಕ್ಕಿ ರೊಟ್ಟಿ 45 ರಿಂದ 50 ರೂ.ಗೆ ಏರಿಕೆ
ಫ್ರೈಡ್ ರೈಸ್ 100 ರಿಂದ 110 ರೂ.ಗೆ ಏರಿಕೆ
ಗೋಬಿ ಮಂಚೂರಿ 100 ರಿಂದ 110 ರೂ.ಗೆ ಏರಿಕೆ
ಪನ್ನೀರ್ ಮಂಚೂರಿ 110 ರಿಂದ 120 ರೂ.ಗೆ ಹೆಚ್ಚಳ
ಒಂದು ಪ್ಲೇಟ್ ಪೂರಿ 70 ರೂ. ಯಿಂದ 75 ರೂ.ಗೆ ಏರಿಕೆ ಸಾಧ್ಯತೆ