ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮನ ಪ್ರಯಾಣಿಕರಿಂದ ʻಬಳಕೆದಾರರ ಅಭಿವೃದ್ಧಿ ಶುಲ್ಕʼ ಸಂಗ್ರಹ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಸದ್ಯ ನಿರ್ಗಮನ ಪ್ರಯಾಣಿಕರಿಂದ ಮಾತ್ರ ಸಂಗ್ರಹಿಸಲಾಗುತ್ತಿದ್ದು, ಮುಂದಿನ ಫೆಬ್ರವರಿ 1ರಿಂದ ಆಗಮನ ಪ್ರಯಾಣಿಕರು ಶುಲ್ಕ ಪಾವತಿ ಮಾಡಬೇಕಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅಭಿವೃದ್ಧಿ ಶುಲ್ಕವನ್ನು ವಿಧಿಸಲು ಮತ್ತು ನಿರ್ಗಮಿಸುವ ಪ್ರಯಾಣಿಕರ ಮೇಲೆ ಅಭಿವೃದ್ಧಿ ಶುಲ್ಕ ಹೆಚ್ಚಳ ಮಾಡಲು ಅನುಮತಿಯನ್ನು ಕಲ್ಪಿಸಿದೆ.

ಇದನ್ನು ಓದಿ: ಮಂಗಳೂರು ವಿಮಾನ ನಿಲ್ದಾಣ ಅಧಿಕೃತವಾಗಿ ಅದಾನಿ ಗ್ರೂಪ್‌ಗೆ ಹಸ್ತಾಂತರ

ಎಪ್ರಿಲ್‌ ಮಾಸದಿಂದ ದೇಶೀಯ ನಿರ್ಗಮನ ಪ್ರಯಾಣಿಕರು 150 ರೂ. ಬದಲು 560 ರೂ. ಪಾವತಿಸಬೇಕು. ಈ ಶುಲ್ಕ ಪ್ರತೀ ವರ್ಷ ಏರಲಿದೆ. ಅಂತರಾಷ್ಟ್ರೀಯ ನಿರ್ಗಮನ ಪ್ರಯಾಣಿಕರು ಈಗ ರೂ.825 ಪಾವತಿಸುತ್ತಿದ್ದರೆ ಈ ಶುಲ್ಕ ಎಪ್ರಿಲ್‌ನಿಂದ ರೂ.1,105 ಆಗಲಿದ್ದು, ಮುಂದಿನ ವರ್ಷ ಮತ್ತೆ ಏರಲಿದೆ. ಆಗಮನ ದೇಶೀಯ ಪ್ರಯಾಣಿಕರು ಎಪ್ರಿಲ್‌ನಿಂದ ಮೊದಲ ಬಾರಿಗೆ 150 ರೂ. ಶುಲ್ಕ ಪಾವತಿಸಲಿದ್ದು, ಮುಂದಿನ ವರ್ಷ ಮಾರ್ಚ್‌ ಬಳಿಕ ಅದು ರೂ. 240ಕ್ಕೆ ಹೆಚ್ಚಳವಾಗಲಿದೆ.

ಕಳೆದ 12 ವರ್ಷದಿಂದ ಬಳಕೆದಾರರ ಶುಲ್ಕವನ್ನು ಏರಿಕೆ ಮಾಡಿರಲಿಲ್ಲ. ಈಗ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸುವುದು, ರನ್‌ವೇ ವಿಸ್ತರಣೆ ಸಹಿತ ವಿವಿಧ ಅಭಿವೃದ್ಧಿ ನಡೆಸುವ ಕಾರಣದಿಂದ ಶುಲ್ಕ ಏರಿಕೆಗೆ ನಿರ್ಧರಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಇದನ್ನು ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರ್ಮಿಕರಿಗೆ ಅವಕಾಶವಿಲ್ಲ

Donate Janashakthi Media

Leave a Reply

Your email address will not be published. Required fields are marked *