ಕೊಟ್ಟೂರು: ಆಕ್ರಮವಾಗಿ ಪಡಿತರ ಧಾನ್ಯವನ್ನು ಸಾಗಿಸುತ್ತಿದ್ದ ಲಾರಿಯನ್ನು ಇಲ್ಲಿನ ತಹಶೀಲ್ದಾರ್ ಎಂ.ಕುಮಾರಸ್ವಾಮಿ ನೇತೃತ್ವದ ತಂಡ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಪಡೆಸಿಕೊಂಡಿದ್ದಾರೆ.
ಲಾರಿಯ ತುಂಬಾ 550 ಚೀಲ ಅಕ್ರಮ ಪಡಿತರ ದಾಸ್ತಾನು ತುಂಬಿಕೊಂಡು ಕೊಟ್ಟೂರು ಪಟ್ಟಣದಿಂದ ಕೂಡ್ಲಿಗಿ ಕಡೆಗೆ ಹೊರಟಿದ್ದ ಲಾರಿಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಹಸಿಲ್ದಾರ್ ಎಂ. ಕುಮಾರಸ್ವಾಮಿ ಮತ್ತು ಆಹಾರ ಇಲಾಖೆಯ ಅಧಿಕಾರಿ ಗೀತಾಂಜಲಿ ಇವರುಗಳು ಅನುಮಾನಗೊಂಡು ಲಾರಿಯನ್ನು ಪರಿಶೀಲನೆ ನಡೆಸಿದಾಗ ಸೂಕ್ತ ದಾಖಲೆ ಇಲ್ಲದ ಕಾರಣ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿಯ ಹಿನ್ನೆಲೆ ಪಡಿತರ ಸರಬರಾಜು ಮಾಡುವ ಗೋದಾಮುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ KA 40 A 1862 ಚಿಕ್ಕಬಳ್ಳಾಪುರ ಜಿಲ್ಲೆ ನೊಂದಾಣಿ ಇರುವ ವಾಹನ ಪಡಿತರ ತುಂಬಿಕೊಂಡಿದ್ದ ಲಾರಿ ಓಡಾಡುತ್ತಿರುವುದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆಹಾರ ಇಲಾಖೆ ವಾಹನ ಬದಲು ಖಾಸಗಿ ವಾಹನದಲ್ಲಿ ಪಡಿತರವನ್ನು ಸರಬರಾಜು ಮಾಡಬೇಕಾದರೆ ಜಿಲ್ಲಾಧಿಕಾರಿಗಳ ಅನುಮತಿ ಬೇಕು ಈ ವಾಹನಕ್ಕೆ ಯಾವುದೇ ಅನುಮತಿಯಿಲ್ಲದೆ ಪಡಿತರ ದಾಸ್ತಾನು ತುಂಬಿಕೊಂಡಿದ್ದಾರೆ ಜೊತೆಗೆ ಬಿಲ್ಲಿನಲ್ಲಿ ಅಕ್ಟೋಬರ್ 17 ರಂದು ಡೆಲಿವರಿ ಎಂದು ನಮೂದಾಗಿದೆ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ತಹಶೀಲ್ದಾರ್ ಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.