ಚಳ್ಳಕೆರೆ: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಮದ್ಯ ಕುಡಿದು ಗಲಾಟೆ ಮಾಡುತ್ತಿರುತ್ತಾರೆ. ಗಂಡಸರು ಕುಡಿದು ಬಂದು ಮನೆಗಳಲ್ಲಿ ದಿನಲೂ ಗಲಾಟೆ ಇದರಿಂದ ಸಂಸಾರದಲ್ಲಿ ನೆಮ್ಮದಿ ಹಾಳಾಗುತ್ತಿದ್ದು. ದಿನವೆಲ್ಲಾ ಕೆಲಸ ಮಾಡಿ ದುಡಿದ ಹಣ ಕುಡಿತಕ್ಕೆ ಖಾಲಿಯಾಗುತ್ತಿದೆ. ಇದರಿಂದ ಜೀವನ ನಡಸುವುದೇ ಕಷ್ಟವಾಗಿದೆ ಕೂಡಲೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮಹಿಳೆಯರು ಅಧಿಕಾರಿಗಳ ಕೈ ಮುಗಿದು ಕೇಳಿಕೊಂಡ ಪ್ರಸಂಗ ಜರುಗಿತು.
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಪಂ ವ್ಯಾಪ್ತಿಯ ಯಲಗಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಸೋಮವಾರ ಅಬಕಾರಿ ಇಲಾಖೆ ಹಾಗೂ ಶಾಸಕರಿಗೆ ಮನವಿ ನೀಡಿದ ಹಿಲ್ಲೆಯಲ್ಲಿ ಅಬಕಾರಿ ಇಲಾಖೆವತೆಯಿಂದ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಹಿಳೆಯರು ಮನವಿ ಮಾಡಿಕೊಂಡರು.
ಅಬಕಾರಿ ನಿರೀಕ್ಷಕ ಬಿ.ಆರ್.ಕೃಷ್ಣಪ್ಪ ಮಾತನಾಡಿ ಗ್ರಾಮಸ್ಥರ ವಿರೋಧದದ ನಡುವೆಯೂ ಪೆಟ್ಟಿಗೆ, ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದರೆ ೫ ವರ್ಷ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಈಗಾಗಲೆ ಓಬಳಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಹಾಗು ಗಾಂಜ ಮಾರಾಟ ಮಾಡಿ ಸಿದ್ದಬಿದ್ದು ಜೈಲು ಸೇರಿದ್ದು ನಿಮ್ಮಗ್ರಾಮದಲ್ಲಿ ಅಕ್ರಮಮದ್ಯ ಮಾರಾಟ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ.
ಪ್ರತಿ ನಿತ್ಯ ನಮ್ಮ ಇಲಾಖೆಯವರು ಗ್ರಾಮಕ್ಕೆ ಬಂದು ತಪಾಸಣೆ ಮಾಡಲಿದ್ದು ಒಂದು ವೇಳಿ ಸಿಕ್ಕಿ ಬಿದ್ದರೆ ಕಾನೂನು ಕ್ರಮ ಎದುರಸಬೇಕಾಗುತ್ತದೆ ಇಂದಿನಿAದ ಗ್ರಾಮದಲ್ಲಿ ಅಕ್ರಮಮದ್ಯ ಮಾರಾಟ ಹಾಗೂ ಕುಡಿದು ಬಂದು ಗಲಾಟೆ ಮಾಡಿದರೆ ಅಂತವರು ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಬಕಾರಿ ಉಪನಿರೀಕ್ಷರಾದ ರಂಗಸ್ವಾಮಿ, ತಿಪ್ಪಯ್ಯ, ಜಿಲ್ಲಾ ವಿಚಕ್ಷಣದ ದಳದ ಕುಮಾರ್, ಗ್ರಾಪಂ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.