ಅಕ್ರಮ ದಂಡಕ್ಕೆ ಮುಂದಾದ ಸರಕಾರ – ಕೆ.ಎನ್ ಉಮೇಶ್ ಆರೋಪ

ಬೆಂಗಳೂರು ಫೆ 06 : ಜನವರಿ 26 ರಂದು ರೈತ ಕಾರ್ಮಿಕರಿಗಾಗಿ “ನಾವು ನೀವು, ಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಗಣರಾಜ್ಯೋತ್ಸವ ಕಾಯ೯ಕ್ರಮ ಸಂಘಟಿಸಿದಕ್ಕೆ ಕರೋನ ಹರಡಲು ಸಹಕಾರಿಯಾಗಿದೆ ಎಂದು ಆರೋಪಿಸಿ ಉಪ್ಪಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರವರು ಸಿಪಿಐಎಂ ಮುಖಂಡ ಬಿ.ಎಸ್ ರಘು ರವರಿಗೆ ನೋಟೀಸ್ ನೀಡಿದ್ದಾರೆ.

ನೋಟಿಸ್ ನಲ್ಲಿ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಪ್ರಸ್ತಾಪವಿದೆ. ಈ ನಡೆಯನ್ನು ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಉಮೇಶ್ ಆಕ್ಷೇಪಿಸಿದ್ದು ಸರಕಾರ ಹಾಗೂ ಪೊಲೀಸರ ಕ್ರಮವನ್ನು ವಿರೋದಿಸಿದ್ದಾರೆ. ಅಕ್ರಮ ದಂಡಕ್ಕೆ ಸರಕಾರ ಮುಂದಾಗಿದ್ದು ಇದಕ್ಕೆ ಹೆದರುವುದಿಲ್ಲ ಎಂದಿದ್ದಾರೆ.

ದಂಡ ವಿಧಿಸುವ ಅಧಿಕಾರವನ್ನು ಪೋಲಿಸ್ ಇನ್ಸ್‌ಪೆಕ್ಟರ್ ರವರಿಗೆ ನೀಡಿರುವ ಪ್ರಾವಧಾನ ಕನಾ೯ಟಕ ಸಾಂಕ್ರಾಮಿಕ ರೋಗ ತಡೆ ತಿದ್ದುಪಡಿ ಸುಗ್ರೀವಾಜ್ಞೆ ಹೊಂದಿಲ್ಲ ಮಾತ್ರ ವಲ್ಲದೆ, ಸದರಿ ನಿಯಮವು ಶಾಸನ ಸಭೆಯ ಅಂಗೀಕಾರವನ್ನು ಹೊಂದಿರದ ಸಂವಿಧಾನ ಬಾಹಿರ ಹಾಗು ಸಹಜ ನ್ಯಾಯದ ತತ್ವದ ಉಲ್ಲಂಘನೆಯಾಗಿದೆ ಎಂದು ತಕರಾರು ಆಕ್ಷೇಪಣೆಯನ್ನು ಸಲ್ಲಿಸಿದ್ದಾಗಿ ಕೆ.ಎನ್ ಉಮೇಶ್ ತಿಳಿಸಿದ್ದಾರೆ.

ಪೊಲೀಸ್ ಹಾಗೂ ಸರಕಾರದ ಈ ಕ್ರಮವನ್ನು ಅನೇಕರು ವಿರೋಧಿಸಿದ್ದಾರೆ. ಸಂವಿಧಾನ ಸಂರಕ್ಷಿಸಿ ಎಂದವರೆ ಮೇಲೆ ದಂಡ ಹಾಕಿದರೆ ಹೇಗೆ?

ಉಪ ಚುನಾವಣೆಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಿಲ್ಲವೆ? ಕಳೆದ ಎರಡು ವಾರಗಳ ಹಿಂದೆ ಅಮಿತ್ ಶಾ ಬೆಳಗಾವಿಗೆ ಬಂದಾಗ 3 ಲಕ್ಷ ಜನ ಸೇರಿರಲಿಲ್ಲವೆ? ಆಹಾರದ ಕಿಟ್ ಹಂಚುವಾಗ ಬಿಜೆಪಿಯ ಶಾಸಕರು ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿರಲಿಲ್ಲವೆ? ರೈತರ ಪರವಾಗಿ, ಸಂವಿಧಾನ ರಕ್ಷಣೆ ಮಾಡಿ ಎಂದವರಿಗೆ ಮಾತ್ರ ನೀವು ದಂಡಾ ಹಾಕುತ್ತಿರಾ? ಎಂದು ಸರಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

Donate Janashakthi Media

One thought on “ಅಕ್ರಮ ದಂಡಕ್ಕೆ ಮುಂದಾದ ಸರಕಾರ – ಕೆ.ಎನ್ ಉಮೇಶ್ ಆರೋಪ

  1. ದಾವಣಗೆರೆಯಲ್ಲಿ ಶ್ರೀನಿವಾಸ್ ದಾಸ ಕರಿಯಪ್ಪ ರವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅವರು ತಮ್ಮ ಹುಟ್ಟು ಹಬ್ಬವನ್ನು ವಿಜೃಂಭಣಯಿಂದ ಆಚರಿಸಿಕೊಂಡಿದ್ದಾರೆ. ಆಗ ಸಾವಿರಾರು ಜನ ಸೇರಿದ್ದರು. ಅವರಿಗೆ ದಂಡವನ್ನು ಯಾಕೆ ಹಾಕಿಲ್ಲ. ಎಂದು ಪ್ರಶ್ನಿಸಬೇಕು.

Leave a Reply

Your email address will not be published. Required fields are marked *