ರಾಯಚೂರು | ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ವಿಶೇಷ ಅಕ್ಕ ಪಡೆ ರಚನೆ

ರಾಯಚೂರು: ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಮಹಿಳೆಯರು, ಮಕ್ಕಳ ಸುರಕ್ಷತೆಗೆ  ವಿಶೇಷ ಅಕ್ಕ ಪಡೆ ರಚಿಸಿ ಸಕಾಲಕ್ಕೆ ರಕ್ಷಣೆಯ ಜೊತೆಗೆ ಭದ್ರತೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

ಅಷ್ಟೇ ಅಲ್ಲದೇ, ಸಕಾಲಿಕ ಸಹಾಯಹಸ್ತ ಮತ್ತು ರಕ್ಷಣೆ ನೀಡುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು, ಹಕ್ಕುಗಳು, ಕಾನೂನು ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದು ಈ ಪಡೆಯ ಮುಖ್ಯ ಉದ್ದೇಶಗಳಾಗಿವೆ. ಸಾರ್ವಜನಿಕ ಸ್ಥಳಗಳು, ಮನೆಯಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟುವ ಕಾರ್ಯವನ್ನು ಅಕ್ಕ ಪಡೆ ನಿರ್ವಹಿಸಲಿದೆ.

ಇದನ್ನೂ ಓದಿ : ಹೈದರಾಬಾದ್ | ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ : ಹೈದರಾಬಾದ್​ ನಗರ ಮಾಲಿನ್ಯ ಮುಕ್ತವಾಗಿಸುವ ಗುರಿ – ರೇವಂತ್​ ರೆಡ್ಡಿ

ರಾಯಚೂರು ಅಕ್ಕ ಪಡೆಗೆ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದರು. ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಮಹಿಳಾ ಪಡೆ ಜಾಗದಲ್ಲಿ ಹೊಸ ಅಕ್ಕಪಡೆ ರಚಿಸಲಾಗಿದೆ.

ಮಹಿಳಾ ಸಿಬ್ಬಂದಿಗೆ ಕರಾಟೆ ಸೂಕ್ತ ತರಬೇತಿ ನೀಡಲಾಗಿದ್ದು, ರಕ್ಷಣೆ ಜೊತೆ ಜಾಗೃತಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಕ್ಕ ಪಡೆಗೆ ಒಂದು ವಿಶೇಷ ವಾಹನ ಒದಗಿಸಲಾಗಿದೆ. ಈ ತಂಡ ಓರ್ವ ಮಹಿಳಾ ಎಎಸ್ಐ , ಓರ್ವ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಸೇರಿ 15 ಜನ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್, ಐವರು ಮಹಿಳಾ ಹೋಂಗಾರ್ಡ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನು ಹೊಂದಿದೆ.

ಮಹಿಳಾ ಸಹಾಯವಾಣಿ 181, ತುರ್ತು ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ರೆ ಅಕ್ಕ ಪಡೆ ಸಂಕಷ್ಟದಲ್ಲಿರುವವರ ಸಹಾಯಕ್ಕೆ ರಕ್ಷಣವೇ ಆಗಮಿಸುತ್ತದೆ.

“ನೊಂದ ಮಹಿಳೆಯರು, ಮಕ್ಕಳು, ಬಾಲ ಕಾರ್ಮಿಕರ ರಕ್ಷಣೆ ಮತ್ತು ಬಾಲ ಭಿಕ್ಷಾಟನೆ, ಯುವತಿಯರನ್ನು ಚುಡಾಯಿಸುವುದನ್ನು ತಡೆಗಟ್ಟುವುದರ ಜೊತೆಗೆ ಅಪರಾಧ ಪ್ರಕರಣಗಳ ಕುರಿತು ಜಾಗೃತಿಯನ್ನು ಅಕ್ಕ ಪಡೆ ಮಾಡಲಿದೆ” ಎಂದು ಎಸ್​​ಪಿ ಎಂ.ಪುಟ್ಟಮಾದಯ್ಯ ತಿಳಿಸಿದ್ದಾರೆ.

“ಅಕ್ಕ ಪಡೆ ಕಾರ್ಯಾರಂಭಿಸಿದೆ. ಮಹಿಳೆಯರು, ಮಕ್ಕಳಿಗೆ ಯಾರಾದ್ರೂ ತೊಂದರೆ ಮಾಡಿದರೆ ಅಥವಾ ಏನಾದರೂ ಸಮಸ್ಯೆಯಾದರೆ 181ಗೆ ಕರೆ ಮಾಡಿದರೆ ನಾವು 10-15 ನಿಮಿಷದಲ್ಲಿ ಸ್ಥಳದಲ್ಲಿರುತ್ತೇವೆ” ಎಂದು ಅಕ್ಕ ಪಡೆಯ ಸಿಬ್ಬಂದಿ ಅಂಜನಮ್ಮ ಹೇಳಿದರು.

ಇದನ್ನೂ ನೋಡಿ : ಅಖ್ಲಾಕ್‌ ಗುಂಪು ಹತ್ಯೆ ಪ್ರಕರಣ & ಸೇಂಗಾರ್‌ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media

Donate Janashakthi Media

Leave a Reply

Your email address will not be published. Required fields are marked *