ಅಖಿಲ ಭಾರತ ಮುಷ್ಕರ ಬೆಂಬಲಿಸಿ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಸುತ್ತಿದ್ದ ಮುಖಂಡರ ಬಂಧನ

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕರ್ನಾಟಕದಲ್ಲಿ ಕೃಷಿ ಕಾಯ್ದೆಗಳ ಶವಯಾತ್ರೆ ನಡೆಸುತ್ತಿದ್ದು, ಇದರ ಭಾಗವಾಗಿ ಬೆಂಗಳೂರಿನ ಟೌನ್‌ ಹಾಲ್‌ ಮುಂಭಾಗ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು,  ಪೋಲೀಸರು ಬಂಧಿಸಿ ಅನ್ನದಾತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ತಿಸಿದರು.

ರಾಜ್ಯದಲ್ಲಿ ನಾಲ್ಕೈದು ತಿಂಗಳಲ್ಲಿ ಹಲವು ಬಾರಿ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ಮಾಡಲಾಗಿದೆ. ಈ ಬಾರಿ ಎಲ್ಲ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಬಂದ್ ಬದಲು ಶವಯಾತ್ರೆ ನಡೆಸಲು ತೀರ್ಮಾನಿಸಿ ರಾಜಧಾನಿಯಲ್ಲಿ ನಡೆಸುತ್ತಿದ್ದ ಕೃಷಿ ಕಾಯ್ದೆಗಳ ಶವಯಾತ್ರೆ’ ಹೋರಾಟದಲ್ಲಿ  ಮಫ್ತಿಯಲ್ಲಿ ಬಂದು ಭಾಗವಿಸಿದ್ದ ಪೋಲೀಸರು ಮುಖಂಡರನ್ನು ಏಕಾ ಏಕಿ ಬಂಧಿಸಲು ಮುಂದಾದರು. ಪ್ರತಿಭಟನೆಕಾರರು ಪ್ರತಿರೋಧ ತೋರಿದರೂ ಪೋಲಿಸರು ಒತ್ತಾಯ ಪೂರ್ವಕವಾಗಿ ಮೊದಲೇ ತಂದು ನಿಲ್ಲಿಸಿದ್ದ ಬಸ್‌ ಗಳತ್ತ ತಳ್ಳಿ, ಬಸ್‌ ಹತ್ತುವಂತೆ ಒತ್ತಾಯ ಮಾಡಿದರು.

ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್‌, ಎಸ್.‌ ವರಲಕ್ಷ್ಮಿ‌,  ಕೆ.ಎನ್‌ ಉಮೇಶ್‌, ವಿಮಲಾ ಕೆ.ಎಸ್,  ಹೆಚ್.ಎಸ್‌ ಸುನಂದಾ ಸೇರಿದಂತೆ ಹಲವು ರೈತ ಮುಖಡರನ್ನು ಪೋಲೀಸರು ಬಂಧಿಸಿ ಮೈಸೂರು ರಸ್ತೆ ಬಳಿ ಇರುವ ಪೋಲಿಸ್‌ ಗ್ರೌಂಡ ಬಳಿ ಬಂಧಿಸಿ ಇಟ್ಟಿದ್ದಾರೆ.

ಮುಖಂಡನ್ನು ಬಂಧಿಸಿದ್ದರೂ ಕೂಡ ಹೋರಾಟದ ಕಿಚ್ಚು ಹೆಚ್ಚುತ್ತಲೇ ಇದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಹೋರಾಟಕ್ಕೆ ಸೇರ್ಪಡೆಯಾಗುತ್ತಲೇ ಇದ್ದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *