ಮ್ಯಾನ್ಮಾರ್‌| ಬೌದ್ಧ ಮಠದ ಮೇಲೆ ವಾಯುದಾಳಿ: 23 ಜನರು ಸಾವು

 ಮ್ಯಾನ್ಮಾರ್‌: ದೇಶದ ಸಾಗೈಂಗ್ ಪ್ರದೇಶದಲ್ಲಿರಿರುವ ಬೌದ್ಧ ಮಠವೊಂದರ ಮೇಲೆ ವಾಯುದಾಳಿ ನಡೆದಿದ್ದೂ, ಮಠದಲ್ಲಿ ಆಶ್ರಯ ಪಡೆದಿದ್ದ ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾಗೈಂಗ್ ಪಟ್ಟಣದ ಲಿನ್ ಟಾಲು ಗ್ರಾಮದಲ್ಲಿರುವ ಬೌದ್ಧ ಮಠವೊಂದರ ಮೇಲೆ ರಾತ್ರಿಯಿಡೀ ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದು ಅವರ ಪೈಕಿ 10 ಮಂದಿ ಸ್ಥಿತಿ ಗಂಭೀರವಾಗಿದ್ದಾರೆ.

ಇದನ್ನೂ ಓದಿ: ಬೆಂಚ್‌ ತಾರತಮ್ಯಕ್ಕೆ ಬ್ರೇಕ್‌ | ಸಮಾನ ಅವಕಾಶದ ಶಿಕ್ಷಣದತ್ತ ಕೇರಳ ಶಾಲೆಗಳು

ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುಂಪಿನ ಸದಸ್ಯರೊಬ್ಬರು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹಳ್ಳಿಯಲ್ಲಿರುವ ಮಠವೊಂದರ ಕಟ್ಟಡದ ಮೇಲೆ ಫೈಟರ್ ಜೆಟ್ ಸ್ಫೋಟಗಳನ್ನು ಬೀಳಿಸಿದ ನಂತರ ನಾಲ್ಕು ಮಕ್ಕಳು ಸೇರಿದಂತೆ 23 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಚಾವಾಗಲು ಹತ್ತಿರದ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಈ ಮಠದಲ್ಲಿ ಆಶ್ರಯ ಪಡೆದಿದ್ದರು.

ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *