ಭಾರೀ ಮಳೆ : ದೆಹಲಿ ಏರ್​​ಪೋರ್ಟ್​ ಮೇಲ್ಛಾವಣಿ ಕುಸಿತ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ ಅವಾಂತರದಿಂದ ಏರ್ ಪೋರ್ಟ್ ಮೇಲ್ಛಾವಣಿಯೇ ಕುಸಿದು ಬಿದ್ದಿರುವುದು ವರದಿಯಾಗಿದೆ.

ಈ ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಡರಾತ್ರಿ ದೆಹಲಿಯಲ್ಲಿ ವರುಣಾರ್ಭಟ ಜೋರಾಗಿದ್ದು, ಇಂದು ಮುಂಜಾನೆ ವೇಳೆ ಏರ್ ಪೋರ್ಟ್ ಮೇಲ್ಛಾವಣಿ ಕುಸಿದು ಬಿದ್ದಿದೆ. ವಾಹನಗಳು ಜಖಂಗೊಂಡಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಅರಣ್ಯ ಒತ್ತುವರಿ: ಉಪಗ್ರಹ ಆಧಾರಿತ ಎಚ್ಚರಿಕೆ ವ್ಯವಸ್ಥೆ ರೂಪಿಸಲು ಖಂಡ್ರೆ ಸೂಚನೆ

ಘಟನೆ ಬೆನ್ನಲ್ಲೇ ಮೂರು ಅಗ್ನಿಶಾಮಕ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಟರ್ಮಿನಲ್ ಒಂದರ ಪಿಕ್ ಹಾಗೂ ಡ್ರಾಪ್ ಸ್ಥಳದಲ್ಲಿ ಈ ಘಟನೆ ನಡದಿದೆ. ಇದರಿಂದ ಗಾಯಾಳುಗಳ ಸಂಖ್ಯೆ 6ಕ್ಕೇರಿದೆ. ಪಿಕ್ ಅಪ್ ಹಾಗೂ ಡ್ರಾಪ್ ಮಾಡಲು ಆಗಮಿಸಿ ಹಲವು ವಾಹನಗಳಿಗೆ ಹಾನಿಯಾಗಿದೆ.ತಾತ್ಕಾಲಿಕವಾಗಿ ಟರ್ಮಿನಲ್ 1ರ ನಿರ್ಗಮನ, ಚೆಕ್-ಇನ್ ಕೌಂಟರ್ ಸ್ಥಗಿತಗೊಳಿಸಲಾಗಿದ್ದು, ಕೆಲ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ.

ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಪೂರ್ಣಗೊಳಿಸಿದೆ. ಮೆಲ್ಛಾವಣಿ ಕುಸಿತದಲ್ಲಿ 6 ಮಂದಿ ಸಿಲುಕಿದ್ದರು. ಮೇಲ್ಛಾವಣಿ ಕುಸಿತದಿಂದ 6 ಮಂದಿ ಗಾಯಗೊಂಡಿದ್ದು. ಈ ಪೈಕಿ ಓರ್ವ ಗಾಯಾಳು ಮೃತಪಟ್ಟಿದ್ದಾರೆ . ಉಳಿದ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಸಿತಗೊಂಡಿರುವ ಮೇಲ್ಛಾವಣಿ ಅಡಿಯಲ್ಲಿ ಮತ್ಯಾರು ಸಿಲುಕಿಕೊಂಡಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 20 ಲಕ್ಷ ರೂ. ಅಲ್ಲದೇ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೊಷಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮೂರು ತಿಂಗಳ ಹಿಂದಷ್ಟೆ ಈ ಟರ್ಮಿನಲ್‌ ಉದ್ಘಾಟಿಸಿದ್ದರು.

ಇದನ್ನೂ ನೋಡಿ: ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media

Donate Janashakthi Media

Leave a Reply

Your email address will not be published. Required fields are marked *