ನವದೆಹಲಿ |ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿಯ ಸೂಚನೆ ತಕ್ಷಣ ತುರ್ತು ಭೂಸ್ಪರ್ಶ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್​ಗೆ ಬೆಂಕಿಯ ಸೂಚನೆ ಹಿನ್ನೆಲೆಯಲ್ಲಿ  ತಕ್ಷಣ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ದೆಹಲಿಯಿಂದ ಇಂದೋರ್‌ಗೆ ಟೇಕ್​ ಆಫ್​ ಆಗಿ 30 ನಿಮಿಷಗಳ ಕಾಲ ಹಾರಾಟ ನಡೆಸಿದ ವಿಮಾನದ ಬಲಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ  ಸೂಚನೆ ಮರಳಿ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಏರ್ ಇಂಡಿಯಾ ಏರ್‌ಲೈನ್ಸ್ ಮೂಲಗಳು ತಿಳಿಸಿವೆ.
ನವದೆಹಲಿ

ಇಂದು ಬೆಳಗ್ಗೆ 6:15ರ ಸುಮಾರಿಗೆ ವಿಮಾನ ತುರ್ತು ಲ್ಯಾಂಡಿಂಗ್​​ ಮಾಡಲಾಗಿದೆ. ಸುಮಾರು 90ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿಸಲಾಗಿದೆ. ಏರ್​​​​ ಇಂಡಿಯಾ ಪ್ರಕಟಣೆಯ ಪ್ರಕಾರ, ಎ320 ನಿಯೋ ವಿಮಾನದ ಒಂದು ಎಂಜಿನ್​ನ್ನು ಆಫ್ ಮಾಡಲಾಯಿತು. ಬಳಿಕ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.

ನವದೆಹಲಿ

ಇದನ್ನೂ ಓದಿ: ಅಲಾಸ್ಕಾ ದಲ್ಲಿ ಟ್ರಂಪ್-ಪುಟಿನ್ ಶೃಂಗಸಭೆ : ಉಕ್ರೇನ್ ಶಾಂತಿಯತ್ತ ನಡೆ ಸಾಧ್ಯವೇ?

“ಆಗಸ್ಟ್​ 31ರಂದು ದೆಹಲಿಯಿಂದ ಇಂದೋರ್​ಗೆ ಹಾರಾಟ ನಡೆಸುತ್ತಿದ್ದ ಎ320 ನಿಯೋ ವಿಮಾನ ಕಾಕ್‌ಪಿಟ್​ ಸಿಬ್ಬಂದಿಗೆ ಬಲ ಎಂಜಿನ್​ನಲ್ಲಿ ಬೆಂಕಿಯ ಸೂಚನೆ ಸಿಕ್ಕಿದ್ದರಿಂದ, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ಮರಳಿತು” ಎಂದು ಟಾಟಾ ಗ್ರೂಪ್ ಮಾಲೀಕತ್ವದ ಏರ್‌ಲೈನ್ಸ್ ಮಾಹಿತಿ ನೀಡಿದೆ.

ಏರ್​ ಇಂಡಿಯಾ ಮಾಹಿತಿ ಪ್ರಕಾರ, “ಎ320 ನಿಯೋದಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಅದು ಶೀಘ್ರದಲ್ಲೇ ಇಂದೋರ್‌ಗೆ ಹಾರಾಟ ನಡೆಸಲಿದೆ. ವಾಯು ಸುರಕ್ಷತಾ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಪರಿಣಾಮ, ವಿಮಾನ ಪ್ರಯಾಣಿಕರು ಅನಪೇಕ್ಷಿತ ವಿಳಂಬವನ್ನು ಎದುರಿಸಿದ್ದರು. ಇದೇ ವಿಮಾನದಲ್ಲಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ಅವರು ಪ್ರಯಾಣಿಸುತ್ತಿದ್ದರು. ಘಟನೆ ಬಗ್ಗೆ ‘ವಿಮಾನವು ರನ್‌ವೇ ಮೇಲೆ ಜಾರಿದಂತೆ ಭಾಸವಾಯಿತು’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಚಿಕ್ಕ ಕೆಂಪಮ್ಮ ನೀಡಿದ ದೂರಿಗೂ ಸೌಜನ್ಯ ಪ್ರಕರಣಕ್ಕೂ ಲಿಂಕ್‌ !!Janashakthi Media

Donate Janashakthi Media

Leave a Reply

Your email address will not be published. Required fields are marked *