ಬೆಂಗಳೂರು : ಸುಪ್ರೀಂ ಕೋರ್ಟ್ ಕುರಿತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆ ಖಂಡಿಸಿ ಹಾಗೂ ಸುಪ್ರಿಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿತರ ನ್ಯಾಯಮೂರ್ತಿಗಳ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರ ಬೆದರಿಕೆ ಮತ್ತು ಹಾಸ್ಯಾಸ್ಪದ ಹೇಳಿಕೆಯನ್ನು ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ಭದ್ರತಾ ಲೋಪದಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಧಾಳಿ ಖಂಡಿಸಿ ಅಖಿಲ ಭಾರತ ವಕೀಲರ ಒಕ್ಕೂಟ(AILU) ನೇತೃತ್ವದಲ್ಲಿ ವಕೀಲರು ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಿಶಿಕಾಂತ್ ದುಬೆ
ಇದನ್ನು ಓದಿ :-ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸರಕಾರಕ್ಕೆ ಬೆಂಬಲ- ಆದರೆ ಅದರಲ್ಲಿ ಸಂಕುಚಿತತೆ ಇರಬಾರದು :ಸರ್ವ ಪಕ್ಷ ಸಭೆಯಲ್ಲಿ ಸಿಪಿಐ(ಎಂ) ಆಗ್ರಹ ನಿಶಿಕಾಂತ್ ದುಬೆ
ಪ್ರತಿಭಟನೆಯನ್ನುದ್ದೇಶಿಸಿ AILU ಬೆಂಗಳೂರು ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಗೌಡ ರವರು ಮಾತನಾಡುತ್ತಾ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನುಗಳನ್ನು ರೂಪಿಸುವ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸಂಕುಚಿತಗೊಳಿಸುವ ನಿಟ್ಟಿನಲ್ಲಿ ರಾಜ್ಯಪಾಲರಾಗಲಿ ಮತ್ತು ರಾಷ್ಟ್ರಪತಿಗಳಾಗಲಿ ನಡೆದುಕೊಳ್ಳಬಾರದು. ರಾಜಕೀಯ ಕಾರಣಗಳಿಗಾಗಿ ಚುನಾಯಿತ ಸರ್ಕಾರದ ಕಾನೂನುಗಳಿಗೆ ಅನುಮೋದನೆ ಕೊಡಲು ನಿರಾಕರಿಸಬಾರದು ಅಥವಾ ತಡೆಯಿಡಿಯಬಾರದು ಎಂದು ಕಿಡಿಕಾರಿದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಉಪರಾಷ್ಟಪತಿಗಳಾದ ಜಗದೀಪ್ ಧನಕರ್ ರವರು ಹಾಗೂ ಬಿ.ಜೆ.ಪಿ ಸಂಸದ ನಿಶಿಕಾಂತ್ ದುಬೆ ರವರು ನೀಡಿದ ಹೇಳಿಕೆಯು ಸುಪ್ರೀಂಕೋರ್ಟ್ ಗೆ ಬೆದರಿಕೆ ಹಾಕುವಂತಿದೆ, ಇದು ತೀವ್ರ ಖಂಡನೀಯ ಎಂದರು.
ಇದನ್ನು ಓದಿ :-ವಿಭಜನಕಾರೀ ನಡೆಗಳನ್ನು ತಡೆಗಟ್ಟಬೇಕು – ಸಿಪಿಐ(ಎಂ) ಆಗ್ರಹ ನಿಶಿಕಾಂತ್ ದುಬೆ
ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕು. ಸಂವಿಧಾನದ ಉಲ್ಲಂಘನೆಯಾದಾಗ ಅದರ ರಕ್ಷಣೆಗೆ ಸುಪ್ರೀಂ ಕೋರ್ಟ್ ನಿಂತಿರುವುದನ್ನು ಸಹಿಸಲಾಗದೇ ಸುಪ್ರೀಂ ಕೋರ್ಟ್ ನ ತೀರ್ಪಿನಬಗ್ಗೆ ಅನಗತ್ಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಎ.ಐ.ಎಲ್.ಯು ಜಿಲ್ಲಾ ಉಪಾಧ್ಯಕ್ಷರಾದ ಶರಣ ಬಸವಮರದ್ ಕುಟುಕಿದರು.
ಕೇಂದ್ರ ಸರ್ಕಾರದ ಭದ್ರತಾ ಲೋಪದಿಂದ ಕಾಶ್ಮೀರದ ಪಹಲ್ಗಾಮ ದಲ್ಲಿ ಭಯೋತ್ಪಾದಕರ ಕೃತ್ಯ ಖಂಡನೀಯ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ 28 ಜನ ಅಮಾಯಕ ಜನರು ಮಡಿದಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ. ಇದಕ್ಕೂ ಮುನ್ನ ಈ ಧಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿ.ಜೆಪಿ ಮತ್ತು ಕೆಲ ಮಾಧ್ಯಮಗಳು ಭಯೋತ್ಪಾದನಾ ಕೃತ್ಯವನ್ನು ಉಂದು ಸಮುದಾಯದವಿರುದ್ಧ ದ್ವೇಷ ಬಿತ್ತಲು ಬಳಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಎ.ಐ.ಎಲ್.ಯು ಜಿಲ್ಲಾ ಸಹಕಾರ್ಯದರ್ಶಿ ಹುಳ್ಳಿ ಉಮೇಶ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎ.ಐ.ಎಲ್.ಯು ಜಿಲ್ಲಾ ಕಾರ್ಯದರ್ಶಿಗಳಾದ ಶಿವಾರೆಡ್ಡಿ, ಖಜಾಂಚಿಗಳಾದ ಶಿವಶಂಕರಪ್ಪ, ರಾಜ್ಯ ಮುಖಂಡರಾದ ರಾಮಚಂದ್ರ ರೆಡ್ಡಿ, ಮುರಳೀಧರ ಪೇಶ್ವ, ಎಐಎಲ್.ಯು ಮುಖಂಡರಾದ ಎ.ಎಸ್.ಶಿವಾರೆಡ್ಡಿ, ರಂಗಸ್ವಾಮಿ, ರಾಮಲಿಂಗಾರೆಡ್ಡಿ, ರೂಪ.ಬಿ.ಎಂ, ಮುಂತಾದವರು ಭಾಗವಹಿಸಿದ್ದರು.