ನವದೆಹಲಿ: ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡನೆಯಾಗಿರುವ, ದುಡಿಯುವ ವರ್ಗದ ವಿರೋಧಿಯಾಗಿರುವ ಕೇಂದ್ರ ಸರಕಾರದ ಬಜೆಟ್ ವಿರುದ್ಧ ಹೋರಾಡಲು ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ (AIFAWH) ಕರೆ ನೀಡಿದೆ. ವಿರುದ್ಧ
ಈ ಕುರಿತಾಗಿ ಫೆಡರೇಶನ್ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎ ಆರ್ ಸಿಂಧು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಎಸ್ ಸುನಂದಾ ಅವರು ಇಂದು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ. ವಿರುದ್ಧ
ಕೇಂದ್ರ ಬಜೆಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿದಂತೆ ಯಾವುದೇ ಸ್ತ್ರೀಂ ಕೆಲಸಗಾರರ ಸಂಬಳದಲ್ಲಿ ಹೆಚ್ಚಳ ಮಾಡಿಲ್ಲ. ಸೇವಾ ಯೋಜನೆಗಳಿಗೆ ಸಾಕಷ್ಟು ಪ್ರಮಾಣದ ಹಣಕಾಸು ಮೀಸಲಿರಿಸದೇ ವಿಕಸಿತ ಭಾರತ ಸಾಧಿಸುವುದು ಅಸಾಧ್ಯ ಎಂದೂ ಹೇಳಿಕೆಯಲ್ಲಿ ಅಭಿಪ್ರಾಯಿಸಲಾಗಿದೆ. 2025-26ನೇ ಸಾಲಿನ ಬಜೆಟ್ ಕಾರ್ಮಿಕ ವಿರೋಧಿಯಾಗಿದ್ದು ಫೆಡರೇಷನ್ ಅದರ ವಿರುದ್ಧ ಹೋರಾಡಲಿದೆ ಅಷ್ಟೇ ಅಲ್ಲ ಫೆಬ್ರವರಿ 5ರಂದು ಹೋರಾಟ ಮಾಡಲಿರುವ ಕೇಂದ್ರ ಕಾರ್ಮಿಕ ಸಂಘಗಳ ಜೊತೆ ಕೈ ಜೋಡಿಸಲಿದೆ ಎಂದೂ ಅವರು ಹೇಳಿದ್ದಾರೆ. ವಿರುದ್ಧ
ಇದನ್ನೂ ಓದಿ: ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ, ಕರ್ನಾಟಕಕ್ಕೆ ಖಾಲಿ ಚೊಂಬು: ಸಿಎಂ ಸಿದ್ದರಾಮಯ್ಯ ಕಿಡಿ
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ದೇಶದ ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡಿರುವುದನ್ನು ಫೆಡರೇಷನ್ ತೀವ್ರವಾಗಿ ಖಂಡಿಸುತ್ತದೆ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿರುದ್ಧ
ಈ ಮೊದಲು ICDS ಎಂದು ಕರೆಯುತ್ತಿದ್ದ ಈಗಿನ ಸಕ್ಷಮ್ ಅಂಗನವಾಡಿ ಹಾಗೂ ಪೋಷಣ್ -2.0 ಈ ಪೌಷ್ಟಿಕಾಹಾರ ಯೋಜನೆಗಳಿಗೆ ತಗಲುವ ವೆಚ್ಚಗಳನ್ನು ಹೆಚ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ಟಿನಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಸಕ್ಷಮ್ ಅಂನಗನವಾಡಿ ಮತ್ತು ಪೋಷಣ್ 2.0 ಯೋಜನೆಗಳಿಗೆ 2023-24 ನೇ ಬಜೆಟ್ಟಿನಲ್ಲಿ 21809.64 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ವಿರುದ್ಧ
ಈಗ 2025-26ನೇ ಸಾಲಿನ ಬಜೆಟ್ಟಿನಲ್ಲಿ ಇವುಗಳಿಗೆ 21960.00 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಅಂದರೆ ಕೇವಲ 150.36 ಕೋಟಿ ರೂಪಾಯಿಗಳನ್ನು ಮಾತ್ರ ಹೆಚ್ಚಿಸಲಾಗಿದೆ. ಆದರೆ, ಪೂರಕ ಪೌಷ್ಟಿಕಾಹಾರ ಯೋಜನೆಗಳಿಗೆ 2017ರಲ್ಲಿ ವೆಚ್ಚ ನಿಯಮಗಳನ್ನು ನಿಗದಿಪಡಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ 10 ಕೋಟಿ ಫಲಾನುಭವಿಗಳು ( ಅವರಲ್ಲಿ ಕೋಟಿ ಮಕ್ಕಳು, 2 ಕೋಟಿ ಗರ್ಭಿಣಿ ಮಹಿಳೆಯರಿಗೆ ವರ್ಷದಲ್ಲಿ 300 ದಿನಗಳ ಕಾಲ ಪೂರಕ ಪೌಷ್ಟಿಕಾಹಾರ ಒದಗಿಸಲಾಗುತ್ತಿದೆ. ಏಳು ವರ್ಷಗಳ ಅವಧಿಯಲ್ಲಿ ಈ ಬಜೆಟ್ಟಿನಲ್ಲಿ ಪೂರಕ ಪೌಷ್ಟಿಕಾಹಾರ ಯೋಜನೆಯ ಅನುಷ್ಠಾನಕ್ಕೆ ಹೆಚ್ಚುವರಿ ಮಾಡಿರುವುದು ಪ್ರತಿ ಮಗುವಿಗೆ ಕೇವಲ ಐದು ಪೈಸೆಯನ್ನು ಮಾತ್ರ ಹೆಚ್ಚುಮಾಡಲಾಗಿದೆ ಎಂಬುದು ಗಮನಿಸಬೇಕಾದ ಅಂಶ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರಿ ಅಂಕಿ ಅಂಶಗಳ ಪ್ರಕಾರವೇ ದೇಶದಲ್ಲಿ 0-6 ವರ್ಷಗಳ ಒಳಗಿನ ಮಕ್ಕಳಲ್ಲಿ 37% ಮಕ್ಕಳು ಅಂದರೆ ಕನಿಷ್ಠ 6 ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 17% ಅಂದರೆ 2.7 ಕೋಟಿ ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ ಎಂಬುದನ್ನು ಬಿಂಬಿಸುತ್ತಿವೆ. ದೇಶದಲ್ಲಿ ಪ್ರತಿವರ್ಷ ಐದು ವರ್ಷದ ಒಳಗಿನ 8.8 ಕೋಟಿ ಮಕ್ಕಳು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ ಎಂದೂ ಸರಕಾರಿ ಅಂಶಗಳೇ ಹೇಳುತ್ತಿವೆ.
ಸರಕಾರದ 2022ನೇ ಸಾಲಿನ ಬಜೆಟ್ಟಿನಲ್ಲಿ ದೇಶದಲ್ಲಿನ 14 ಲಕ್ಷ ಅಂಗನವಾಡಿ ಶಾಲೆಗಳಲ್ಲಿ ಎರಡುಲಕ್ಷ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡುವುದಾಗಿ ಹೇಳಿತ್ತು. ಆದರೆ, ಅದರಲ್ಲಿ ಕೇವಲ ಒಂದು ಲಕ್ಷ ಕೇಂದ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ವರ್ಷ ICDS ಪ್ರಾರಂಭವಾಗಿ ಐವತ್ತು ವರ್ಷಗಳಾಗುತ್ತಿವೆ. ಆದಾಗ್ಯೂ ದೇಶದಲ್ಲಿನ 3.38 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. 4.61 ಲಕ್ಷ ಕೇಂದ್ರಗಳಲ್ಲಿ ಕನಿಷ್ಠ ಶೌಚಾಲಯ ಸೌಲಭ್ಯಗಳು ಇಲ್ಲ. ಹೀಗಿರುವಾಗ ದೇಶ “ವಿಶ್ವಗುರು” ಎಂದು ಹೇಳಿಕೊಳ್ಳುವ ಕೇಂದ್ರ ಸರಕಾರವು ತನ್ನ ಮಕ್ಕಳನ್ನು ಹೇಗೆ ಪರಿಗಣಿಸುತ್ತಿದೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ ?!
ಈ ಬಜೆಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ “ಬೇಟಿ ಬಚಾವೋ ಬೇಟಿ ಪಡಾವೋ / ಪಿಎಂ ಮಾತೃ ವಂದನಾ ಯೋಜನೆಗಳಿಗೆ ಕೂಡಾ ಹೆಚ್ಚಿನ ಅನುದಾನ ಕೊಟ್ಟಿಲ್ಲ ಎನ್ನುವುದು ಕೂಡಾ ಗಮನಿಸಬೇಕಾದ ಅಂಶ. ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 2018 ರಿಂದ ಕನಿಷ್ಠ ಗೌರವಧನ ಪಡೆದು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಕೂಡಾ ಈ ಬಜೆಟ್ಟಿನಲ್ಲಿ ಏನೂ ಹೆಚ್ಚಳ ಮಾಡಿಲ್ಲ. ಅಂಗನವಾಡಿ ನೌಕರರಿಗೆ ಗ್ರಾಚ್ಯಟಿ ಕೊಡಲೇಬೇಕೆಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದಾಗ್ಯೂ ಕೇಂದ್ರ ಸರಕಾರ ಈ ಬಜೆಟ್ಟಿನಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಬ್ಯೂಟಿ ಬಗ್ಗೆ, ಅವರ ಗೌರವಧನ ಹೆಚ್ಚಿಸುವ ಬಗ್ಗೆ ಪ್ರಸ್ತಾಪವೇ ಇಲ್ಲ.
ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರನ್ನು ಗ್ರೂಪ್ ಸಿ ಮತ್ತು ಡಿ ನೌಕರರನ್ನಾಗಿ ಖಾಯಂ ಮಾಡಬೇಕೆಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿರುವುದನ್ನು ಕೂಡಾ ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡಿದೆ. ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಅತ್ಯಂತ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಕ್ಷರ ದಾಸೋಹ (ಮಧ್ಯಾನ್ಹ ಬಿಸಿ ಊಟ) ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಹಾಗೂ ಇತರ ಸ್ಟೀಮ್ ಕೆಲಸಗಾರರನ್ನು ಕೂಡಾ ಈ ಬಜೆಟ್ಟಿನಲ್ಲಿ ನಿರ್ಲಕ್ಷಿಸಲಾಗಿದೆ. ಅಷ್ಟೇ ಅಲ್ಲ. ಈ ಸೀಮ್ಗಳಲ್ಲಿ ಕೆಲಸ ಮಾಡುವವರಿಗೆ ಬಜೆಟ್ಟಿನಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ.
ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ ಮಾಡಲು ಕರೆ:-
ಕೇಂದ್ರ ಸರಕಾರ ಸಂಸತ್ತಿನಲ್ಲಿ ಇಂದು ಮಂಡಿಸಿರುವ 2025-26ನೇ ಸಾಲಿನ ಬಜೆಟ್ ಕಾರಣ ಕಾರ್ಮಿಕ ವಿರೋಧಿ ಹಾಗೂ ಕಾರ್ಪೋರೇಟ್ ಪರವಾಗಿದೆ. ಹಾಗಾಗಿ, ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದೇಶಾದ್ಯಂತ ಬಜೆಟ್ ಪ್ರತಿ ಸುಡುವ ಮೂಲಕ ಪ್ರತಿಭಟನೆ ನಡೆಸುವಂತೆ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ (AIFAWH) ಕರೆ ನೀಡಿದೆ.
ಅಲ್ಲದೇ, ಕೇಂದ್ರದ ಬಜೆಟ್ ವಿರೋಧಿಸಿ ಫೆಬ್ರವರಿ ಐದರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಯಲ್ಲಿ ದೇಶಾದ್ಯಂತ ತಾವೂ ಕೂಡಾ ಭಾಗವಹಿಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 13ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶ:- ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಮಕ್ಕಳ ಅಭಿವೃದ್ಧಿಗಾಗಿ, ಕನಿಷ್ಠ ವೇತನ ಹಕ್ಕಿಗಾಗಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಂಚಣಿ ಸೌಲಭ್ಯಗಳಿಗಾಗಿ ಆಗ್ರಹಿಸಿ, ಮುಂದಿನ ಹೋರಾಟಗಳು ಮತ್ತು ಕಾನೂನಾತ್ಮಕ ಆಯಾಮಗಳ ಬಗ್ಗೆ ಚರ್ಚಿಸುವುದಕ್ಕಾಗಿ, ಮುಂದಿನ ರಾಷ್ಟ್ರವ್ಯಾಪಿ ಹೋರಾಟಗಳ ರೂಪುರೇಷೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಫೆಡರೇಷನ್ ಅಖಿಲ ಭಾರತ ಸಮಾವೇಶವನ್ನು ಇದೇ ಫೆಬ್ರವರಿ 13ರಂದು ದೆಹಲಿಯ ತಲಕೋಟ್ರಾ ಸ್ಟೇಡಿಯಂನಲ್ಲಿ ಸಂಘಟಿಸಿದೆ ಎಂದು ಅದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ ಆರ್ ಸಿಂಧು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (CITU) ದ ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಎಸ್ ಸುನಂದಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ. ಸ್ಥಳ:- ವಿಧಾನ ಸೌಧ