ತಿರುವನಂತಪುರಂ :ಕೇರಳದ ತಿರುವನಂತಪುರಂ ನಲ್ಲಿ ನಡೆಯುತ್ತಿದ್ದಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 13 ನೇ ರಾಷ್ಟ್ರೀಯ ಸಮ್ಮೇಳನ ಇಂದು ಮುಕ್ತಾಯವಾಯಿತು. ಇದೇ ವೇಳೆ ಸಮ್ಮೇಳನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಪಿ.ಕೆ.ಶ್ರೀಮತಿ ಪ್ರಧಾನ ಕಾರ್ಯದರ್ಶಿ ಯಾಗಿ ಮರಿಯಂ ಧವಳೆ, ಖಜಾಂಚಿಯಾಗಿ ಎಸ್.ಪುಣ್ಯವತಿ ಮತ್ತು ಸಹ ಕಾರ್ಯದರ್ಶಿಗಳಲ್ಲೊಬ್ಬರಾಗಿ ಕರ್ನಾಟಕದ ದೇವಿ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಡಾ. ಮೀನಾಕ್ಷಿ ಬಾಳಿ ಮತ್ತು ಗೌರಮ್ಮ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಯ್ಕೆಯಾಗಿದ್ದಾರೆ. ಒಟ್ಟು 103 ಜನರ ಕೇಂದ್ರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಯಾವುದೇ ಪ್ರಮುಖ ಪದಾಧಿಕಾರಿಗಳಿಗೆ ಮೂರು ಅವಧಿಯ ಮಿತಿಯನ್ನು ಸಂವಿದಾನದಲ್ಲಿಯೇ ಹೊಂದಿರುವ ಕಾರಣಕ್ಕಾಗಿ ಈ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಪ್ರೊ.ಮಾಲಿನಿ ಭಟ್ಟಾಚಾರ್ಯರವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿ ಸನ್ಮಾನಿಸಲಾಯಿತು.