ನವದೆಹಲಿ | ಬಿಹಾರ ಚುನಾವಣೆ ಕಳಪೆ ಪ್ರದರ್ಶನ :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚಿಸಿದ ರಾಹುಲ್‌ ಗಾಂದಿ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಲು ಮುಂದಾಗಿದ್ದಾರೆ. ಬಿಹಾರದಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಅವರು ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ : ಉಡಾನ್ ವಿಮಾನ ಹಾರಾಟ ಮಾಡಿದ ಶಿಮ್ಲಾ ನಿಲ್ದಾಣದಲ್ಲಿ ಪ್ರಮುಖ ವಿಮಾನಗಳು ಇಲ್ಲ

ಮೂಲಗಳ ಪ್ರಕಾರ, ಬಿಹಾರದಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆ ಈ ನಾಯಕರು ಈ ಭೇಟಿ ಆಗಿದ್ದು, ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ 61 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್​ ಕೇವಲ 6 ಸ್ಥಾನವನ್ನು ಗೆದ್ದಿದೆ. ಈ ಭೇಟಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ, ಸಂಘಟನಾ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪಕ್ಷದ ಖಜಾಂಚಿ ಅಜಯ್ ಮಾಕೆನ್ ಮತ್ತು ಎಐಸಿಸಿ ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಕೂಡ ಉಪಸ್ಥಿತರಿದ್ದರು.

2010ರ ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಎರಡನೇ ಬಾರಿ ಕಾಂಗ್ರೆಸ್​ ಕಳಪೆ ಪ್ರದರ್ಶನ ತೋರಿದೆ. 2010ರಲ್ಲಿ ಕಾಂಗ್ರೆಸ್​ ಕೇವಲ 4 ಸ್ಥಾನಗಳನ್ನು ಗೆದ್ದಿತ್ತು. ಶುಕ್ರವಾರ ಪ್ರಕಟವಾದ ಬಿಹಾರ ಚುನಾವಣಾ ಫಲಿತಾಂಶವು ಕಾಂಗ್ರೆಸ್​ಗೆ ಅಚ್ಚರಿಯ ಆಘಾತವನ್ನು ಮೂಡಿಸಿತು. ಈ ಚುನಾವಣೆಯ ಆರಂಭದಿಂದಲೂ ಪಾರದರ್ಶಕತೆ ನಡೆಸಿರಲಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ ಈ ಹೋರಾಟದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಚುನಾವಣೆಯಲ್ಲಿ ನಾವು ಸೋಲು ಕಂಡೆವು ಎಂದಿದ್ದು, ಈ ಫಲಿತಾಂಶದ ಕುರಿತು ಕಾಂಗ್ರೆಸ್​ ಮತ್ತು ಇಂಡಿಯಾ ಒಕ್ಕೂಟವು ಆಳವಾದ ವಿಮರ್ಶೆ ನಡೆಸಲಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದಿದ್ದರು.

ಬಿಹಾರ ಚುನಾವಣಾ ಸೋಲಿನ ನಂತರ ಮಾತನಾಡಿದ ಕಾಂಗ್ರೆಸ್​ ನಾಯಕರು, ಚುನಾವಣೆಯಲ್ಲಿ ಮತಗಳ್ಳತನ ನಡೆದಿದ್ದು, ಎಸ್​ಐಆರ್​ನಿಂದಾಗಿ ಸೋಲು ಅನುಭವಿಸಿದ್ದಾಗಿ ಆರೋಪಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಾತನಾಡಿ ನಾನು ಅನುಮಾನಿಸಿದ್ದು ಸಂಭವಿಸಿದೆ, ಅದು ನಿಜವಾಗಿದೆ. 65 ಲಕ್ಷ ಮತಗಳನ್ನು ಕಡಿತಗೊಳಿಸಿ, 20 ಲಕ್ಷ ಮತಗಳನ್ನು ಸೇರಿಸಲಾಗಿದೆ. ಅದರಲ್ಲಿ 5,00,000 ಮತಗಳನ್ನು ಎಸ್​ಐಆರ್​​ ಫಾರ್ಮ್ ಅನ್ನು ಭರ್ತಿ ಮಾಡದೆಯೇ ಸೇರಿಸಲಾಗಿದೆ.

ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಾಗಿ ಕಡಿತಗೊಳಿಸಲಾಗಿದೆ. ಇವಿಎಂ ಬಗ್ಗೆ ಕೂಡ ಅನುಮಾನ ಇದ್ದು, ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. ಬಿಹಾರದಲ್ಲಿ ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿರುವ ದಾರಿಯನ್ನು ಈ ಫಲಿತಾಂಶ ಸ್ಪಷ್ಟವಾಗಿ ತೋರಿಸಿದೆ ಎಂದು ಹೇಳಿದ್ದರು.

ಇದನ್ನೂ ನೋಡಿ : ಕರ್ನಾಟಕಕ್ಕೆ ಕಾಲಿಟ್ಟ SIR |NRC ಜಾರಿಗಾಗಿ ಹಿಂಬಾಗಿಲಿನ ಪ್ರಯತ್ನ – ಕೆ. ಪ್ರಕಾಶ್ Janashakthi Media

Donate Janashakthi Media

Leave a Reply

Your email address will not be published. Required fields are marked *