ಚೆನ್ನೈ : ತಮಿಳುನಾಡಿನಲ್ಲಿ ಚುನಾವಣಾ ಅಬ್ಬರ ಜೋರಾಗಿರುವ ನಡುವೆಯೇ ರಾಜ್ಯದ ಆಡಳಿತರೂಢ (ಅಖಿಲ ಭಾರತ ಅಣ್ಣಾ ಡ್ರಾವೀಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ಎನ್‌ಡಿಎ ಕೂಟದೊಂದಿಗೆ ಮೈತ್ರಿಯ ಭಾಗವಾಗಿದ್ದ ದೇಸಿಯ ಮುರ್ಪೊಕ್ಕು ಡ್ರಾವಿಡ ಕಳಗಂ(ಡಿಎಂಡಿಕೆ) ಪಕ್ಷವು ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಅಧಿಕೃತವಾಗಿ ಘೋಷಿಸಿದೆ.
ನಟ ಹಾಗೂ ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್‌ರವರು ಇಂದು ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಪ್ರಕಟಪಡಿಸಿದ್ದಾರೆ.
ಎಐಎಡಿಎಂಕೆಯೊಂದಿಗೆ ಅಧಿಕೃತವಾಗಿ ಮೂರು ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗದಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳ ಹಂಚಿಕೆ ಮತ್ತು ಸ್ಥಾನಗಳ ಸಂಖ್ಯೆಯ ಕುರಿತು ಒಮ್ಮತ ಮೂಡದಿರುವ ಪರಿಣಾಮವಾಗಿ ಮೈತ್ರಿಯನ್ನು ತೊರೆಯಬೇಕಾಯಿತು ಎಂದು ತಿಳಿಸಿದರು.
ಇಂದು ನಡೆದ ಜಿಲ್ಲಾ ಮಟ್ಟದ ಕಾರ್ಯದರ್ಶಿಗಳ ಸಭೆಯಲ್ಲಿ ಮೈತ್ರಿಕೂಟದಿಂದ ಹೊರಬರಬೇಕೆಂದು ಎಲ್ಲರೂ ಒಮ್ಮತವಾಗಿ ವ್ಯಕ್ತಪಡಿಸಿದ ಹಿನ್ನೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ ಡಿಎಂಡಿಕೆ ಪಕ್ಷವು
ಡಿಎಂಡಿಕೆ ಉಪ ಪ್ರಧಾನ ಕಾರ್ಯದರ್ಶಿ ಬಿ.ಪರ್ಥಸಾರಥಿ “ಮೈತ್ರಿಕೂಟದೊಂದಿಗೆ ನಾವು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಮತ್ತು ನಾವು ಮೈತ್ರಿಯನ್ನು ತೊರೆಯಬೇಕೆಂದು ನಮ್ಮ ನಾಯಕ ನಿರ್ಧರಿಸಿದರು. ನಾವು ಮುಂದೆ ಏನು ಮಾಡುತ್ತೇವೆ – ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆಯೇ ಅಥವಾ ಬೇರೆ ಯಾವುದಾದರೂ ಮೈತ್ರಿಗೆ ಸೇರುತ್ತೇವೆಯೇ ಎಂಬುದು ನಮ್ಮ ನಾಯಕರಿಗೆ ಬಿಟ್ಟ ವಿಚಾರ. ನಾವು ಸರಿಯಾದ ಸಮಯದಲ್ಲಿ ತಿಳಿಯುತ್ತೇವೆ” ಎಂದು ಅವರು ಹೇಳಿದರು.
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ.