ಬೆಂಗಳೂರು| 6 ಮೆಟ್ರೋ ನಿಲ್ದಾಣಗಳಲ್ಲಿ ಎಐ ಆಧಾರಿತ ಸಿಸಿಟಿವಿ ಕಣ್ಗಾವಲು

ಬೆಂಗಳೂರು: ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, (ಬಿಎಂಆರ್ಸಿಎಲ್) ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆಯ ನಡುವಿನ 6 ಮೆಟ್ರೋ ನಿಲ್ದಾಣಗಳಲ್ಲಿ ಎಐ ಆಧಾರಿತ ಸಿಸಿಟಿವಿ ಕಣ್ಗಾವಲಿಡಲಾಗಿದೆ. ಈ ಕುರಿತು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ. ಬೆಂಗಳೂರು

ಇದು ನಿಲ್ದಾಣದ ಒಳಗಿನ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳನ್ನೂ ಗಮನಿಸುತ್ತಿದ್ದು, ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗುತ್ತದೆ.

ಈ ನಿಗಾ ವ್ಯವಸ್ಥೆಯನ್ನು ಮೇ 6, 2025 ರಂದು ಪ್ರಾರಂಭಿಸಲಾಗಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು “ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್” (ANPR) ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎಐ ಆಧಾರಿತ ವಿಡಿಯೋ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆಗಳು, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ.

ಇದನ್ನೂ ಓದಿ: ಹಿರಿಯ ಕಾರ್ಮಿಕ ಮುಖಂಡ ಕೆ.ಎಲ್.ಭಟ್ ನಿಧನ

ಈ ಸಂದರ್ಭದಲ್ಲಿ ಬಿಎಂಆರ್ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ. ಮಹೇಶ್ವರ ರಾವ್ ಅವರು ಮಾತನಾಡಿ, “ಪ್ರಯಾಣಿಕರ ಭದ್ರತೆ ಬಿ.ಎಂ.ಆರ್.ಸಿ.ಎಲ್ ನ ಪ್ರಮುಖ ಆದ್ಯತೆಯಾಗಿದೆ.

ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸೋದ್ರ ಮೂಲಕ ಭದ್ರತೆಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಈ ಹೊಸ ಎಐ ಮತ್ತು ANPR ತಂತ್ರಜ್ಞಾನ ನಮಗೆ ನಿಲ್ದಾಣದ ನಿರಂತರ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಮತ್ತು ತಕ್ಷಣ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸಾರ್ವಜನಿಕ ಸುರಕ್ಷತೆಗೆ ಬದ್ಧತೆಯನ್ನೂ ತೋರಿಸುತ್ತದೆ.”

ಬೆಂಗಳೂರು ಮೆಟ್ರೋ ವ್ಯವಸ್ಥೆ ಹೆಚ್ಚಾದಂತೆ, ಬಿಎಂಆರ್ಸಿಎಲ್ ಸ್ಮಾರ್ಟ್ ನಿಗಾ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಹಾಗೂ ಸಾರ್ವಜನಿಕ ಭದ್ರತೆಯನ್ನು ಸದಾ ಬಲಪಡಿಸಲು ಬದ್ದವಾಗಿದೆ.

ಇದನ್ನೂ ನೋಡಿ: ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ Janashakthi Media

Donate Janashakthi Media

Leave a Reply

Your email address will not be published. Required fields are marked *