ಅಹಂಕಾರ ಬಿಡಿ, ರೈತರಿಗೆ ನ್ಯಾಯ ಒದಗಿಸಿ: ಕೇಂದ್ರಕ್ಕೆ ರಾಹುಲ್‌ ಸಲಹೆ

  • ನಾವೆಲ್ಲರೂ ರೈತರ ಋಣದಲ್ಲಿದ್ದೇವೆ ಎಂಬದುನ್ನು ಅರಿತು ನ್ಯಾಯ ಒದಗಿಸಿ: ರಾಹುಲ್‍

ನವದೆಹಲಿ: ‘ಪ್ರತಿಭಟನಾ ನಿರತ ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರ ಅಹಂಕಾರವನ್ನು ಬಿಟ್ಟು, ರೈತರ ಪ್ರತಿಭಟನೆಗೆ ಸ್ಪಂದಿಸಬೇಕು. ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ರೈತರ ಕಠಿಣ ಪರಿಶ್ರಮಕ್ಕೆ ನಾವೆಲ್ಲರೂ ಋಣಿಯಾಗಿದ್ದೇವೆ. ರೈತರಿಗೆ ನ್ಯಾಯ ಒದಗಿಸುವುದರ ಮೂಲಕ ಮಾತ್ರ ಈ ಋಣವನ್ನು ತೀರಿಸಲು ಸಾಧ್ಯ‘ ಎಂದು ಹೇಳಿದ್ದಾರೆ.

‘ಅನ್ನ ಬೆಳೆಯುವ ರೈತರು ರಸ್ತೆಗಳಲ್ಲಿ, ಹೊಲ–ಗದ್ದೆಗಳಲ್ಲಿ ಕುಳಿತು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವೆಲ್ಲರೂ ರೈತರ ಋಣದಲ್ಲಿದ್ದೇವೆ ಎಂಬದುನ್ನು ಅರಿತು, ಅವರು ಕೇಳುತ್ತಿರುವ ಹಕ್ಕುಗಳನ್ನು ನೀಡಿ, ಅವರಿಗೆ ನ್ಯಾಯ ಸಲ್ಲಿಸುವ ಮೂಲಕ ಆ ಋಣವನ್ನು ತೀರಿಸಬೇಕೇ ಹೊರತು, ಅವರನ್ನು ಲಾಠಿಯಿಂದ ಹೊಡೆದು, ಅಶ್ರವಾಯು ಪ್ರಯೋಗಿಸಿ ದೌರ್ಜನ್ಯವೆಸಗುವುದಲ್ಲ‘ ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ದುರಹಂಕಾರದ ಕುರ್ಚಿಯಿಂದ ಕೆಳಗಿಳಿದು ಬನ್ನಿ, ರೈತರಿಗೆ ಅವರ ಹಕ್ಕುಗಳನ್ನು ನೀಡುವ ಬಗ್ಗೆ ಯೋಚಿಸಿ‘ ಎಂದು ರಾಹುಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಎಡಪಕ್ಷಗಳ ಸಂಪೂರ್ಣ ಬೆಂಬಲ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ ಮತ್ತು ಘಾಜಿಪುರಗಳಲ್ಲಿ ಪಂಜಾಬ್‌ ಮತ್ತು ಹರಿಯಾಣಾ ರಾಜ್ಯಗಳ ನೂರಾರು ರೈತರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *