ಅಗ್ನಿ ಅವಘಡ, ಹತ್ತು ಕೊರೊನಾ ಸೋಂಕಿತರು ಬಲಿ..!

ಮುಂಬೈ : ಮುಂಬೈನ ಭಂಡಪ್ ವೆಸ್ಟ್, ಸನ್ರೈಸ್ ಖಾಸಗಿ ಕೋವಿಡ್ -19 ಆಸ್ಪತ್ರೆಯಲ್ಲಿ ಶುಕ್ರವಾರ ಆಕಸ್ಮಿಕ ಅಗ್ನಿ ಅವಗಡ ಸಂಭವಿಸಿ ಹತ್ತು ಜನ  ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆ.‌ ಈವರೆಗೆ ಒಟ್ಟು 76 ರೋಗಿಗಳನ್ನು ರಕ್ಷಿಸಲಾಗಿದ್ದು, ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಎಎನ್‌ ಐ ವರದಿ ಮಾಡಿದೆ.

ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ಪ್ರದೇಶದ ಡ್ರೀಮ್ಸ್ ಮಾಲ್ ಒಳಗೆ ಕೋವಿಡ್ ಆಸ್ಪತ್ರೆ ಇದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಶಾಂತ್ ಕದಮ್ ಮಾಹಿತಿ ನೀಡಿದ್ದರು.

“ಘಟನೆಯಲ್ಲಿ ಎರಡು ಸಾವುನೋವುಗಳು ವರದಿಯಾಗಿವೆ. ಮಾಲ್‌ನ ಮೊದಲ ಮಹಡಿಯಲ್ಲಿ ಬೆಳಿಗ್ಗೆ 12: 30 ಕ್ಕೆ ಲೆವೆಲ್ -3 ಅಥವಾ ಲೆವೆಲ್ -4 ಬೆಂಕಿ ಕಾಣಿಸಿಕೊಂಡಿದೆ. 76 ಕೋವಿಡ್ -19 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 22 ರಿಂದ 23 ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿದ್ದಾರೆ “ಎಂದು ಡಿಸಿಪಿ ಕದಮ್ ಸುದ್ದಿಗಾರರಿಗೆ ತಿಳಿಸಿದರು.

20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಹಾಗೂ 15 ನೀರಿನ ಟ್ಯಾಂಕರ್‍ಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. “ನಾನು ಮಾಲ್‌ನಲ್ಲಿ ಆಸ್ಪತ್ರೆಯನ್ನು ನೋಡಿದ್ದು ಇದೇ ಮೊದಲು. ಇದು ತುಂಬಾ ಗಂಭೀರ ಪರಿಸ್ಥಿತಿ. ಏಳು ರೋಗಿಗಳು ವೆಂಟಿಲೇಟರ್‌ನಲ್ಲಿದ್ದರು. 70 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೆಂಕಿಯ ಅವಗಡಕ್ಕೆ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯಲಿದೆ. ” ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *