ನವದೆಹಲಿ: ದೇಶ ವಿರೋಧಿ ಹಾಗೂ ಯುವಜನ ವಿರೋಧಿ ಅಗ್ನಿಫಥ ಯೋಜನೆಯ ವಿರುದ್ಧ ಇಂದು (ಜೂನ್ 19) ದೆಹಲಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಈ ವೇಳೆ, ದೆಹಲಿ ಪೋಲಿಸರು ದಬ್ಬಾಳಿಕೆಯ ಕ್ರಮದ ಮೂಲಕ ಪ್ರತಿಭಟನೆ ಹತ್ತಿಕ್ಕಲು ಮುಂದಾದಾದರು.
ಇದನ್ನು ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ – ಭಾರತದ ಸಾರ್ವಭೌಮತ್ವ ರಕ್ಷಿಸಿ: ಎಸ್ಎಫ್ಐ
ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯರೂ, ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ರಹೀಮ್ ಸೇರಿದಂತೆ ಹಲವು ಮಂದಿ ಪೋಲಿಸರ ದೌರ್ಜನ್ಯದಿಂದ ಗಾಯಗೊಂಡಿದ್ದಾರೆ. ಮಹಿಳಾ ಕಾರ್ಯಕರ್ತರ ಮೇಲೆಯೂ ಪೊಲೀಸರ ದಬ್ಬಾಳಿಕೆ ತೀವ್ರವಾಗಿ ನಡೆದಿದೆ ಹಾಗು ಪೊಲೀಸರು ಬಟ್ಟೆ ಹರಿದು ಕೆಟ್ಟದಾಗಿ ವರ್ತಿಸಿದ್ದಾರೆ.
ಪೋಲಿಸರ ಮೂಲಕ ದಬ್ಬಾಳಿಕೆ ನಡೆಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರದ ನಡೆಯನ್ನು ಖಂಡಿಸಿದರು. ಇದರೊಂದಿಗೆ, ದೇಶ ಹಾಗೂ ಯುವಜನರ ಭವಿಷ್ಯಕ್ಕೆ ಮಾರಕವಾಗಿರುವ ಅಗ್ನಿಪಥ ಯೋಜನೆಯ ವಿರುದ್ಧದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಕೂಡಲೇ ಈ ಅಗ್ನಿಪಥ್ ಯೋಜನೆ ಹಿಂಪಡೆಯಬೇಕು ಹಾಗೂ ಹಿಂದಿನಂತೆ ಸೇನಾ ನೇಮಕಾತಿ ನಡೆಸಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ಮತ್ತಷ್ಟು ತೀವ್ರತೆರನಾದ ಪ್ರತಿಭಟನೆಗಳು ಹೆಚ್ಚಾಗಲಿವೆ ಎಂದು ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಯು ಮುಖಂಡರು ಕರೆ ನೀಡಿದರು.