ನಾಯಿ ಮರಿಗೆ ಹೆಸರಿಟ್ಟ ವಿಚಾರಕ್ಕೆ ರಾಹುಲ್‌ ಗಾಂಧಿ ವಿರುದ್ಧ ದಾಖಲು

Please follow and like us:
ಪವಿತ್ರ ಕುರಾನ್‌ನಲ್ಲಿ ಸ್ಥಾನ ಪಡೆದಿರುವ ಹೆಸರನ್ನು ನಾಯಿ ಮರಿಗೆ ಇಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಗೋವಾ ಪ್ರವಾಸ ಮುಗಿಸಿ ಬಂದಿದ್ದ ವೇಳೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅಲ್ಲಿಂದ ನಾಯಿಮರಿಯೊಂದನ್ನ ತಂದಿದ್ದರು. ವಿಶ್ವ ಪ್ರಾಣಿದಿನದಂದು ಅದನ್ನು ಅಮ್ಮ ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ಇಸ್ರೇಲ್ – ಹಮಾಸ್ ಸಂಘರ್ಷ ಕೊನೆಗೊಳಿಸಿ, ನರಮೇಧ ನಿಲ್ಲಿಸಿ – ಸಿಪಿಐಎಂ ಒತ್ತಾಯ

ನಾಯಿಯ ಹೆಸರು ತನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.ನೂರಿ ಪದವು ನಿರ್ದಿಷ್ಟವಾಗಿ ಇಸ್ಲಾಂಗೆ ಸಂಬಂಧಿಸಿದೆ, ಅಲ್ಲದೆ ಕುರ್‌ ಆನ್‌ನಲ್ಲಿ ಕೂಡಾ ಈ ಉಲ್ಲೇಖವನ್ನು ಕಾಣಬಹುದು ಎಂದು ಕೂಡಾ ಈ  ಉಲ್ಲೇಖವನ್ನು ಕಾಣಬಹದು ಎಂದು ಎಐಎಂಐಎಂ ಮುಖಂಡ ಮಹಮ್ಮದ್‌ ಫರ್ಹಾನ್‌ ಹೇಳಿದ್ದಾರೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಲಾಗಿದೆ.

ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನವೆಂಬರ್ 8 ರಂದು ದಿನಾಂಕವನ್ನು ನಿಗದಿಪಡಿಸಿದ್ದಾರೆ ಎಂದು ಫರ್ಹಾನ್ ಅವರ ವಕೀಲ ಅಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಕೂಡ ತಮ್ಮ ಫೇಸ್ ಬುಕ್ ಮತ್ತು ಯೂಟ್ಯೂಬ್ ಖಾತೆಗಳಲ್ಲಿ ನಾಯಿಮರಿಯ ಫೋಟೊವನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ನೋಡಿ:“ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *