ಮಂಗಳೂರ : 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ದ, ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆಬ್ರವರಿ 12ರಂದು ರೈತ ಕಾರ್ಮಿಕರ ನೇತ್ರತ್ವದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜನವರಿ 26ರಿಂದ 29ರವರೆಗೆ 4 ದಿನಗಳ ಕಾಲ ದ.ಕ.ಜಿಲ್ಲೆಯಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ದ.ಕ.ಜಿಲ್ಲಾ ಸಮಿತಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಜನವರಿ 26ರಂದು ಬೆಳ್ತಂಗಡಿಯಿಂದ ಹೊರಡಲಿರುವ ಪಾದಯಾತ್ರೆಯನ್ನು ಜಿಲ್ಲೆಯ ಹಿರಿಯ ರೈತ ಕಾರ್ಮಿಕ ನಾಯಕರಾದ ಕೆ ಯಾದವ ಶೆಟ್ಟಿಯವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ವಹಿಸಲಿದ್ದಾರೆ.ಜಾಥಾ ತಂಡದ ನೇತ್ರತ್ವವನ್ನು CITU ಜಿಲ್ಲಾ ನಾಯಕರಾದ ಈಶ್ವರಿ ಪದ್ಮುಂಜ, ಜಯಶ್ರೀ,ದೇವಕಿ, ಲೋಲಾಕ್ಷಿ ಬಂಟ್ವಾಳ,ಶ್ಯಾಮರಾಜ ಪಟ್ರಮೆ, ಉದಯ ಬಂಟ್ವಾಳ,ಧನಂಜಯ ಗೌಡ ವಹಿಸಲಿದ್ದಾರೆ.
ಜನವರಿ 27ರಂದು ಮೂಡಬಿದ್ರೆಯಿಂದ ಹೊರಡಲಿರುವ ಪಾದಯಾತ್ರೆಯನ್ನು CITU ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಉದ್ಘಾಟಿಸಲಿದ್ದಾರೆ. ಜಾಥಾ ತಂಡದ ನೇತ್ರತ್ವವನ್ನು CITU ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ ಹಾಗೂ ನೋಣಯ್ಯ ಗೌಡ ವಹಿಸಲಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಕಾರ್ಮಿಕರ ಹಕ್ಕಗಳನ್ನ ಕಸಿದುಳ್ಳುತ್ತಿರುವ ಕೇಂದ್ರ ಸರ್ಕಾರ ಸಿಪಿಐ(ಎಂ) ನಾಯಕಿ ಯು ವಾಸುಕಿ ಆಕ್ರೋಶ
ಜನವರಿ 28ರಂದು ಮುಲ್ಕಿಯಿಂದ ಹೊರಡುವ ಪಾದಯಾತ್ರೆಯನ್ನು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಉದ್ಘಾಟಿಸಿದರೆ, ತಲಪಾಡಿಯಿಂದ ಹೊರಡುವ ಪಾದಯಾತ್ರೆಯನ್ನು CITU ಜಿಲ್ಲಾ ಉಪಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ.ಮುಲ್ಕಿ ಪಾದಯಾತ್ರೆಯ ನೇತ್ರತ್ವವನ್ನು CITU ಜಿಲ್ಲಾ ನಾಯಕರಾದ ಬಿ ಕೆ ಇಮ್ತಿಯಾಜ್,ರವಿಚಂದ್ರ ಕೊಂಚಾಡಿ, ಜಯಲಕ್ಷ್ಮಿ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ತಯ್ಯುಬ್ ಬೆಂಗರೆ,ಶ್ರೀನಾಥ್ ಕಾಟಿಪಳ್ಳ, ಸಾಧಿಕ್ ಮುಲ್ಕಿಯವರು ವಹಿಸಿದರೆ, ತಲಪಾಡಿ ಪಾದಯಾತ್ರೆಯ ನೇತ್ರತ್ವವನ್ನು CITU ಜಿಲ್ಲಾ ನಾಯಕರಾದ ರೋಹಿದಾಸ್ ಭಟ್ನಗರ,ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು,ರಮೇಶ್ ಉಳ್ಳಾಲ ವಹಿಸಲಿದ್ದಾರೆ.
ಜನವರಿ 29ರಂದು ಬೆಳಿಗ್ಗೆ 10 ಗಂಟೆಗೆ 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದ್ದು,ಬಳಿಕ ಕಾರ್ಮಿಕರ ಬೃಹತ್ ಮೆರವಣಿಗೆ ಸಾಗಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಬಹಿರಂಗ ಸಭೆಯು ಜರುಗಲಿದೆ. ಸಮಾರೋಪ ಭಾಷಣವನ್ನು CITU ಕರ್ನಾಟಕ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂರವರು ನಡೆಸಲಿದ್ದಾರೆ.
ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media
