ವಿರಾರ್(ಮಹಾರಾಷ್ಟ್ರ): ಹಿಜಾಬ್ ಹಾಕಿಕೊಂಡು ಕಾಲೇಜ್ಗೆ ಬರುತ್ತಿದ್ದ ಮುಸ್ಲಿಂ ಪ್ರಾಂಶುಪಾಲೆಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಆರೋಪ ಬೆಳಕಿಗೆ ಬಂದಿದ್ದು, ಇದರಿಂದ ಮನನೊಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬಳಿಕ ಹಿಜಾಬ್ ವಿಚಾರವಾಗಿ ಹಲವು ಕಡೆಗಳಲ್ಲಿ ನಾನಾ ರೀತಿಯ ಆರೋಪ-ಕಿರುಕುಳಗಳು ಘಟಿಸುತ್ತಿವೆ.
ಕಿರುಕುಳ ಧರಿಸಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ
ಪಾಲ್ಘಾರ್ ಜಿಲ್ಲೆಯ ಕಾನೂನು ಕಾಲೇಜಿನ ವಿರಾರ್ ಪರಿಸರದ ವಿವಾ ಕಾಲೇಜ್ ಆಫ್ ಲಾ ಇಲ್ಲಿನ ಪ್ರಾಂಶುಪಾಲೆ ಬತ್ತುಲ್ ಹಮ್ಮಿದ್ ತಮ್ಮ ರಾಜೀನಾಮೆ ಪತ್ರದಲ್ಲಿ, ಅನಾನುಕೂಲ ಮತ್ತು ಹಿಜಾಬ್ ಧರಿಸುವ ಬಗ್ಗೆ ಉಸಿರುಗಟ್ಟಿಸುವ ಭಾವನೆಯಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಇದನ್ನು ಓದಿ: ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶವಿಲ್ಲ: ಶಿಕ್ಷಣ ಇಲಾಖೆ ಆದೇಶ
2019ರ ಜುಲೈನಲ್ಲಿ ವಿರಾರ್ನಲ್ಲಿರುವ ವಿವಾ ಕಾನೂನು ಕಾಲೇಜ್ ಪ್ರಾಂಶುಪಾಲೆಯಾಗಿ ಬತ್ತುಲ್ ಹಮೀದ್ ನೇಮಕಗೊಂಡಿದ್ದರು.
ಈ ಸಂಬಂಧ ಕಾಲೇಜ್ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಹಿಜಾಬ್ ಧರಿಸುವುದು ಹಿಂದೆಂದೂ ಸಮಸ್ಯೆಯಾಗಿರಲಿಲ್ಲ. ಆದರೆ ಕರ್ನಾಟಕದಲ್ಲಿ ವಿವಾದದ ಬಳಿಕ ಇದೀಗ ದೊಡ್ಡದಾಗಿ ಪರಿಣಾಮ ಬೀರುತ್ತಿವೆ. ತನ್ನೊಂದಿಗೆ ಸಹಕರಿಸದಂತೆ ಇತರ ಸಿಬ್ಬಂದಿಗೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದ್ದು, ನಮ್ಮ ಆಪ್ತ ಸಹಾಯಕರು ಕೂಡ ನಿತ್ಯದ ಕೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಬತ್ತುಲ್ ಹಮ್ಮಿದ್ ಆರೋಪಿಸಿದ್ದಾರೆ.
ಆದರೆ ಕಾಲೇಜು ಆಡಳಿತ ಮಂಡಳಿ ಆರೋಪಗಳನ್ನು ತಳ್ಳಿಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಥಾಣೆ ಜಿಲ್ಲೆಯ ಭಿವಂಡಿಯ ಶಾಲೆಯೊಂದರ ಇಬ್ಬರು ಶಿಕ್ಷಕಿಯರನ್ನು ಹಿಜಾಬ್ ಧರಿಸಿ ಕೆಲಸಕ್ಕೆ ಬಾರದಂತೆ ತಡೆದಿದ್ದ ಘಟನೆ ಸಂಭವಿಸಿತ್ತು. ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ರಾಜ್ಯ ಶಿಕ್ಷಣ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿತ್ತು.