ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬೇಲ್ ಮೇಲೆ ಹೊರಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಸದ್ಯ ಸುಪ್ರೀಂ ಅಂಗಳದಲ್ಲಿದೆ. ಬಂಧನದ ಕುಣಿಕೆಯಿಂದ ದರ್ಶನ್ ಪಾರಾಗಬೇಕು ಎಂದರೆ ವಕೀಲರು ಪ್ರಬಲವಾಗಿ ವಾದ ಮಂಡಿಸಬೇಕಾಗಿದೆ. ನಟ
ಡಿ ಗ್ಯಾಂಗ್ ನಿಂದ ಈಗ ಮತ್ತೊಂದು ಅಪ್ಡೇಟ್ ಬಂದಿದ್ದು, ಸುಪ್ರೀಂಕೋರ್ಟ್ ನಲ್ಲಿ ದಾಸನ ಪರ ವಾದ ಮಂಡಿಸುವ ವಕೀಲ ಯಾರು ಎಂಬ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ನಟ
ಇದನ್ನು ಓದಿ : ಬೆಂಗಳೂರು| ಮಾಜಿ ಶಾಸಕ ಎಲ್. ಆರ್. ಶಿವರಾಮೇಗೌಡ ಮತ್ತೆ ಕಾಂಗ್ರೆಸ್ ಸೇರ್ಪಡೆ
ಹೈಕೋರ್ಟ್ ಜಾಮೀನು ಆದೇಶ ಪ್ರಶ್ನಿಸಿ ಈಗಾಗಲೇ ಪೊಲೀಸರು ಸುಪ್ರೀಂಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ದರ್ಶನ್ ಕಡೆಯಿಂದಲೇ ತ್ವರಿತವಾದ ಬೆಳವಣಿಗೆ ಕಾಣಿಸಿದೆ. ದರ್ಶನ್ ಪರ ಸುಪ್ರೀಂ ನಲ್ಲಿ ವಾದಿಸಲು ಹಿರಿಯ ನುರಿತ ವಕೀಲರ ನೇಮಕ ಮಾಡಲು ತಯಾರಿ ನಡೆದಿದೆ.
ಖ್ಯಾತ ಹಿರಿಯ ಸುಪ್ರೀಂ ವಕೀಲರನ್ನ ಎಂಗೇಜ್ ಮಾಡಿರೋ ದರ್ಶನ್ ಕುಟುಂಬ ಕಪಿಲ್ ಸಿಬಲ್ ರನ್ನ ಸಂಪರ್ಕ ಮಾಡಿದೆ. ಈಗಾಗಲೇ ಕಪಿಲ್ ಸಿಬಲ್ ರನ್ನ ಭೇಟಿಯಾಗಿ ಚರ್ಚೆ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಹಿಂದಿನ ಹೈಕೋರ್ಟ್ ವಾದ ಪ್ರತಿವಾದ , ಕೇಸ್ ಹಿಸ್ಟರಿ ಡೀಟೈಲ್ಸ್ ನೀಡಲಾಗಿದೆ.
ಮಾರ್ಚ್ 18 ರಂದು ಸುಪ್ರೀಂ ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ ಮಾರ್ಚ್ 18 ರಂದು ದರ್ಶನ್ ಪರ ಪರ ಕಪಿಲ್ ಸಿಬಲ್ ವಾದ ಮಂಡಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಹೈಕೋರ್ಟ್ ನಲ್ಲಿ ಗೆಲುವು ಕಂಡುಕೊಂಡಂತೆ ಸುಪ್ರೀಂ ನಲ್ಲೂ ಗೆಲುವಿಗಾಗಿ ಡಿ ಬಾಸ್ ಕಸರತ್ತು ಮುಂದುವರಿಸಿದ್ದಾರೆ.
ಇದನ್ನೂ ನೋಡಿ: ಡಾ. ಬಂಜಗೆರೆ ಜಯಪ್ರಕಾಶ್ ಜೊತೆ ಸಂವಾದ Janashakthi Media