ವಿಧಾನ ಮಂಡಲ ಚಳಿಗಾಲದ ಅಧಿವೇಶನ | ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ಒಂದು ದಿನ ಮೊಟಕು

ಮಂಗಳೂರು:ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ವಿಧಾನ ಮಂಡಳ ಚಳಿಗಾಲದ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ. ಡಿ.9ರಿಂದ 19ರ ವರೆಗೆ ಮಾತ್ರ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಮೊದಲು 9ರಿಂದ 20ರ ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಸಾಹಿತ್ಯ ಸಮ್ಮೇಳನ ಡಿ. 20ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಅದರಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ : ಮಕ್ಕಳಿಗೆ ಕೃಷಿ ಪಾಠ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು | 60 ಚೀಲ ಫಸಲಿಗೆ ಶ್ಲಾಘನೆ

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರಾಜ್ಯ ಮತ್ತು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ, ಚರ್ಚೆಯಾಗಬೇಕು. ಈ ವಿಷಯದಲ್ಲಿ ಈ ಅಧಿವೇಶನ ಸಫಲವಾದರೆ ನಾವು ಆ ಭಾಗದ ಜನರಿಗೆ ನೀಡುವ ಗೌರವವಾಗುತ್ತದೆ. ಆ ಕಾರಣಕ್ಕಾಗಿ ರಾಜಕೀಯ ತಿಕ್ಕಾಟ ಅಧಿವೇಶನದಲ್ಲಿ ಬೇಡ ಎಂದು ಅವರು ಮನವಿ ಮಾಡಿದರು.

‘ನಿಮ್ಮ ಏವೇ ರಾಜಕೀಯ ತಿಕ್ಕಾಟ ಇದ್ದರೂ ಡಿಸೆಂಬರ್ 9ರ ವರೆಗೆ ಅವಕಾಶ ಇದೆ. ಅಧಿವೇಶನ ಮುಗಿದ ನಂತರವೂ ಸಮಯ ಇದೆ. ವಿಧಾನಮಂಡಳ ಸುಗಮ ಕಲಾವಗಳಿಗೆ ಅವಕಾಶ ನೀಡಬೇಕು’ ಎಂದು ಅವರು ಹೇಳಿದರು.

ಉಪ ಚುನಾವಣೆಯಲ್ಲಿ ಜಯಗಳಿಸಿರುವ ಮೂವರು ಶಾಸಕರಿಗೆ ಅಧಿವೇಶನದಲ್ಲಿಯೇ ಪ್ರಮಾಣವಚನ ಬೋಧಿಸಲಾಗುವುದು ಎಂದರು. ಮುಡಾ ಹಗರಣದ ಬಗ್ಗೆ, ಚರ್ಚೆಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಿಯಮದಂತೆ ಸದನ ನಡೆಸುತ್ತೇವೆ. ಸದನ ಸಲಹಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ’ ಎಂದರು.

ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *