ಮೈಸೂರು ರಸ್ತೆಗಳು ಬೆಳಕಿನಲ್ಲಿ, ಅಲೆಮಾರಿಗಳ ಬದುಕು ಕತ್ತಲಲ್ಲಿ

ವರದಿ : ಹಾರೋಹಳ್ಳಿ ರವೀಂದ್ರ

ಮೈಸೂರು: ಮೈಸೂರಿನ ಸುತ್ತಮುತ್ತಲು ಸಾವಿರರು ಸಂಖ್ಯೆಯಲ್ಲಿ ಆದಿವಾಸಿ ಸಮುದಾಯದ ಜನರು ವಾಸವಿದ್ದು, ತಮ್ಮದೇ ಆದ ಸ್ವಂತ ಜಾಗವಿಲ್ಲದ ಕಾರಣ ಸಾರ್ಕಾರಿ ಜಾಗಗಳಲ್ಲಿ ವಾಸವಿದ್ದಾರೆ. ಆದರೆ ದಲ್ಲಾಳಿಗಳ ಕಾಟದಿಂದಾಗಿ ಸರಕಾರಿ ಜಾಗಗಳಲ್ಲಿ ಕೂಡ ವಾಸಿಸಲು ಆದಿವಾಸಿ ಜನಾಂಗಕ್ಕೆ ಕಷ್ಟವಾಗುತ್ತಿದೆ.  ಇದರಿಂದ ರೋಸಿ ಹೋಗಿರುವ ಇವರು ನಮಗೆ ಜಾಗದ ಹಕ್ಕು ಪತ್ರ ವಿತರಣೆಯಾಗಬೇಕು ಎಂದು ಮೈಸೂರು ಜಿಲ್ಲಾದಿಕಾರಿ ಕೆಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿರುವ ಏಕಲವ್ಯ ನಗರದಲ್ಲಿ ಸುಮಾರು 20 ವರ್ಷಗಳಿಂದ ಅಲೆಮಾರಿ ಜನಾಂಗವು ವಾಸಿಸುತ್ತಿದೆ. ಅದೊಂದು ಸರ್ಕಾರದ ವ್ಯಾಪ್ತಿಗೆ ಬರುವ ಜಾಗವಾಗಿದ್ದು, ಅದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಮೊದಲಿಗೆ ಗುಡಿಸಲು ಹಾಕಿಕೊಂಡಿದ್ದ ಅಲೆಮಾರಿ ಜನಾಂಗವೂ ಇತ್ತೀಚೆಗೆ ಕಾಂಕ್ರಿಟ್ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಲೆಮಾರಿ ಜನಾಂಗಕ್ಕೆ ತನ್ನದೆ ನಿರ್ದಿಷ್ಟ ಭೂಮಿ ಇಲ್ಲ, ನಿವೇಶನವಂತೂ ಮೊದಲೇ ಇಲ್ಲ. ಇರುವ ಸರ್ಕಾರಿ ಭೂಮಿಯನ್ನೆ ಬಳಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ರಮ ಸಕ್ರಮದಡಿಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಎಂದು, ಬಂದ ಜಿಲ್ಲಾಧಿಕಾರಿಗಳನ್ನೆಲ್ಲಾ ಕೇಳುತ್ತಿದ್ದರೂ, ಯಾವ ಜಿಲ್ಲಾಧಿಕಾರಿಯೂ ಸ್ಪಂಧಿಸುತ್ತಿಲ್ಲ.

 

ಇತ್ತೀಚೆಗೆ ಭೂ ಮಾಫಿಯಾ ಮಾಡುವ ದಲ್ಲಾಳಿಗಳು ಇವರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಅಲ್ಲಿರುವ ಅಲೆಮಾರಿಗಳು ಭಯಗೊಂಡು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಮಕ್ಕಳು, ಗಂಡ-ಹೆಂಡತಿ, ಯುವಕರು ಹಾಗೂ ವಯೋವೃದ್ಧರು ಅಲ್ಲಿಯೇ ಟೆಂಟ್ ನಿರ್ಮಿಸಿಕೊಂಡು, ಅದೇ ಜಾಗದಲ್ಲಿ ಅಡುಗೆ ಮಾಡಿಕೊಂಡು ನಮಗೆ ಹಕ್ಕು ಪತ್ರ ಕೊಡಿ ಎಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

ಒಂದು ಕಡೆ ಮೈಸೂರು ದಸಾರ ಆರಂಭವಾಗಿ ಇಡೀ ನಗರ ಬೆಳಕಿನಿಂದ ಕಂಗೊಳಿಸುತಿದ್ದರೆ,  ಮತ್ತೊಂದೆಡೆ ಅಲೆಮಾರಿಗಳ ಬದುಕು ಕತ್ತಲಲ್ಲಿ ಬಿದ್ದಿದೆ. ವಿಧಾನಸೌಧದಲ್ಲಿ ಇರಬೇಕಾದ ಎಲ್ಲಾ ರಾಜಕಾರಣಿಗಳು ಇಂದು ಮೈಸೂರಿನಲ್ಲಿಯೆ ಓಡಾಡುತ್ತಿದ್ದಾರೆ. ಅಲೆಮಾರಿಗಳು ಪ್ರತಿಭಟಿಸುತ್ತಿರುವ ಜಾಗಕ್ಕೊಮ್ಮೆ ಹೋಗಿ ಅವರ ಕಷ್ಟವೇನೆಂದು ವಿಚಾರಿಸಿ ಅವರ ಬೇಡಿಕೆಯನ್ನು ಈಡೇರಿಸುವ ಮನಸ್ಸು ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *